ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯದ ’83’ ಸಿನಿಮಾ ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹೊರತಾಗಿಯೂ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ಕಬೀರ್ ಖಾನ್ ನಿರ್ದೇಶನದ ಈ ಚಿತ್ರವು ಭಾರತ ಸೇರಿದಂತೆ ವಿದೇಶದಲ್ಲೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ.
83 ಸಿನಿಮಾ ಬಿಡುಗಡೆಯಾದ ಎರಡನೇ ವಾರದಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಅವರು ಟ್ವೀಟ್ ಮಾಡಿ, ‘ಚಿತ್ರ ಶೀಘ್ರದಲ್ಲೇ 100 ಕೋಟಿ ಕ್ಲಬ್ ಸೇರಬಹುದು’ ಎಂದಿದ್ದಾರೆ.
ಎರಡನೇ ವಾರದಲ್ಲಿ ಎಲ್ಲಾ ಆವೃತ್ತಿಗಳಿಂದ ಭಾರತದಲ್ಲಿ ‘ಶುಕ್ರವಾರ (ಡಿ.31) ₹ 4.36 ಕೋಟಿ, ಶನಿವಾರ ₹ 7.73 ಕೋಟಿ, ಭಾನುವಾರ ₹ 7.31 ಕೋಟಿ, ಸೋಮವಾರ (ಜ.3) ₹ 2.01 ಕೋಟಿ, ಮಂಗಳವಾರ ₹ 1.52 ಕೋಟಿ, ಬುಧವಾರ ₹ 1.12 ಕೋಟಿ ಸೇರಿ ಒಟ್ಟು ₹ 95.92 ಕೋಟಿ ಬಾಚಿಕೊಂಡಿದೆ’ ಎಂದು ಟ್ವೀಟ್ ಮಾಡಿದ್ದಾರೆ.
#83TheFilm [Week 2] Fri 4.36 cr, Sat 7.73 cr, Sun 7.31 cr, Mon 2.01 cr, Tue 1.52 cr, Wed 1.12 cr. Total: ₹ 95.92 cr. #India biz. ALL VERSIONS. pic.twitter.com/pmwUCAG9F3
— taran adarsh (@taran_adarsh) January 6, 2022
ವಿಶ್ವದಾದ್ಯಂತ 83 ಸಿನಿಮಾ ಗಳಿಕೆ
83 ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ಮಾರುಕಟ್ಟೆ ವಿಶ್ಲೇಷಕ ಮನೋಬಲ ವಿಜಯಬಾಲನ್ ಟ್ವೀಟ್ ಮಾಡಿದ್ದು, ‘ಚಿತ್ರವು ವಿದೇಶಗಳಲ್ಲಿ ₹ 172.30 ಕೋಟಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ’ ಎಂದಿದ್ದಾರೆ.
#83TheFilm WW Box Office
Continues DOWN trend
Week 1 – ₹ 123.75 cr
Week 2
Day 1 – ₹ 9.32 cr
Day 2 – ₹ 13.47 cr
Day 3 – ₹ 13.95 cr
Day 4 – ₹ 5.34 cr
Day 5 – ₹ 4.10 cr
Day 6 – ₹ 2.37 cr
Total – ₹ 172.30 cr#RanveerSingh #DeepikaPadukone #83TheMovie— Manobala Vijayabalan (@ManobalaV) January 6, 2022
ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್ ತಂಡವು 1983ರಲ್ಲಿ ವಿಶ್ವಕಪ್ ಗೆದ್ದ ಐತಿಹಾಸಿಕ ದಿನದ ಕತೆಯನ್ನು ‘83’ ಚಿತ್ರವು ಒಳಗೊಂಡಿದೆ. ರಣವೀರ್ ಸಿಂಗ್ ಅವರು ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಡಿಸೆಂಬರ್ 24ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. 83 ಚಿತ್ರಕ್ಕೆ ಕಬೀರ್ ಖಾನ್, ಸಾಜಿದ್ ನಾಡಿಯವಾಲ ಮತ್ತು ದೀಪಿಕಾ ಪಡುಕೋಣೆ ನಿರ್ಮಾಪಕರಾಗಿದ್ದಾರೆ.
Read More…Source link
[wpas_products keywords=”deal of the day party wear for men wedding shirt”]