Karnataka news paper

ಜಲ ಸಂರಕ್ಷಣೆಯಲ್ಲಿ ಉತ್ತರಪ್ರದೇಶ ದೇಶದಲ್ಲೇ ನಂಬರ್‌ ವನ್; ಕೇಂದ್ರ ಜಲಶಕ್ತಿ ಸಚಿವಾಲಯದಿಂದ ಪ್ರಶಸ್ತಿ


ಹೊಸದಿಲ್ಲಿ: ಕೇಂದ್ರ ಜಲ ಶಕ್ತಿ ಸಚಿವಾಲಯವು ಶುಕ್ರವಾರ 2020ನೇ ಸಾಲಿನ ರಾಷ್ಟ್ರೀಯ ಜಲ ಪ್ರಶಸ್ತಿ ಘೋಷಿಸಿದ್ದು, ಜಲ ಸಂರಕ್ಷಣೆಗಾಗಿ ಉತ್ತರ ಪ್ರದೇಶವು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ.

ರಾಜಸ್ಥಾನ ಹಾಗೂ ತಮಿಳುನಾಡು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. ಜಲ ಸಂರಕ್ಷಣೆಗಾಗಿ ಹೆಚ್ಚಿನ ಶ್ರಮ ವಹಿಸಿದ ಜಿಲ್ಲೆಗಳಲ್ಲಿ ದಕ್ಷಿಣ ವಲಯದಲ್ಲಿ ಕೇರಳದ ತಿರುವನಂತಪುರಂ ಪ್ರಥಮ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶದ ಕಡಪ ಎರಡನೇ ಸ್ಥಾನ ಪಡೆದಿದೆ. ಹಾಗೆಯೇ, ಉತ್ತರ ವಲಯದಲ್ಲಿ ಉತ್ತರ ಪ್ರದೇಶದ ಮುಜಫ್ಫರ್‌ನಗರ, ಪಂಜಾಬ್‌ನ ಶಹೀದ್‌ ಭಗತ್‌ ಸಿಂಗ್‌ ನಗರ, ಪೂರ್ವದಲ್ಲಿ ಬಿಹಾರದ ಪೂರ್ವ ಚಂಪಾರಣ್‌, ಜಾರ್ಖಂಡ್‌ನ ಗೊಡ್ಡ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿವೆ.
ನೀಟ್‌ ಪಿಜಿ ಪ್ರವೇಶದಲ್ಲಿ OBC & EWS ವರ್ಗಕ್ಕೆ ಮೀಸಲಾತಿ; ಸುಪ್ರೀಂಕೋರ್ಟ್ ತೀರ್ಪಿಗೆ ಅಸಮಾಧಾನ!
ಪಶ್ಚಿಮ ವಲಯದಲ್ಲಿ ಮಧ್ಯಪ್ರದೇಶದ ಇಂದೋರ್‌ ಮೊದಲ ಸ್ಥಾನ ಪಡೆದರೆ, ಗುಜರಾತ್‌ನ ವಡೋದರ ಹಾಗೂ ರಾಜಸ್ಥಾನದ ಬನ್ಸ್‌ವಾರ ಜಿಲ್ಲೆಗಳು ಜಂಟಿಯಾಗಿ ದ್ವೀತಿಯ ಸ್ಥಾನ ಗಳಿಸಿವೆ. ಈಶಾನ್ಯ ವಲಯದಲ್ಲಿ ಅಸ್ಸಾಂನ ಗೋಪಾಲ್‌ಪರ ಮತ್ತು ಅರುಣಾಚಲ ಪ್ರದೇಶದ ಸಿಯಾಂಗ್‌ ಮೊದಲ ಹಾಗೂ ಎರಡನೇ ಅಗ್ರ ಜಿಲ್ಲೆಯಾಗಿ ಹೊರ ಹೊಮ್ಮಿವೆ. ಪ್ರಶಸ್ತಿ ಘೋಷಣೆ ಬಳಿಕ ಮಾತನಾಡಿದ ಜಲಶಕ್ತಿ ಖಾತೆ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌, ‘ದೇಶಾದ್ಯಂತ ಕೃಷಿ, ನೀರಾವರಿ, ಕೈಗಾರಿಕೆ, ಕುಡಿಯುವ ನೀರು ಸೇರಿದಂತೆ ಹಲವು ಕ್ಷೇತ್ರಗಳಿಗೆ ವಾರ್ಷಿಕ 1,000 ಶತಕೋಟಿ ಕ್ಯುಬಿಕ್‌ ಮೀಟರ್‌ ನೀರಿನ ಅವಶ್ಯಕತೆ ಇದೆ. ಮಳೆಯ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತಿರುವ ಕಾರಣ ಬೇಡಿಕೆಗಿಂತ ಲಭ್ಯತೆ ಕಡಿಮೆ ಇದೆ. ಅದರಲ್ಲೂ, 2050ರ ವೇಳೆಗೆ ಬೇಡಿಕೆ ಪ್ರಮಾಣ 1,400-1,500 ಶತಕೋಟಿ ಕ್ಯುಬಿಕ್‌ ಮೀಟರ್‌ಗೆ ತಲುಪುವ ಸಾಧ್ಯತೆ ಇದೆ. ಹಾಗಾಗಿ, ಜಲ ಸಂರಕ್ಷಣೆಗೆ ಎಲ್ಲರೂ ಒಗ್ಗೂಡಿ, ಸಕಾರಾತ್ಮಕ ಮನೋಭಾವದಿಂದ ಕಾಯರ್ನಿವಹಿಸಬೇಕಿದೆ’ ಎಂದರು.



Read more

[wpas_products keywords=”deal of the day sale today offer all”]