Karnataka news paper

ನೈಟ್‌ ಕರ್ಫ್ಯೂ ಹೆಸರಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ನೌಕರರಿಗೆ ಪೊಲೀಸರ ಕಿರುಕುಳ


ಬೆಂಗಳೂರು: ಕೋವಿಡ್‌ ನಿಯಂತ್ರಿಸುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿರುವ ರಾತ್ರಿ ಕರ್ಫ್ಯೂ ವೇಳೆ ಪೊಲೀಸರು ತಪಾಸಣೆ ನೆಪದಲ್ಲಿ ಕಾರ್ಮಿಕರು ಹಾಗೂ ಖಾಸಗಿ ಕಂಪನಿಗಳ ನೌಕರರಿಗೆ ಅನಗತ್ಯ ಕಿರಿಕಿರಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.

ನಗರದಲ್ಲಿ ರಾತ್ರಿ 10 ಗಂಟೆ ನಂತರ ಕರ್ಫ್ಯೂ ಜಾರಿಗೆ ಬರಲಿದೆ. ಅಗತ್ಯ ಸೇವೆಗಳಡಿ ಕೆಲಸ ಮಾಡುವ ಸಿಬ್ಬಂದಿ ಕೆಲಸ ಮುಗಿಸಿ ರಾತ್ರಿ 10 ಗಂಟೆ ನಂತರ ಮನೆಗೆ ತೆರಳುತ್ತಿದ್ದರೆ ಅಂಥವರನ್ನು ತಡೆದು ವಿಚಾರಣೆ ನಡೆಸುವ ಪೊಲೀಸರು ಅಗತ್ಯ ದಾಖಲೆ ತೋರಿಸಿದರೂ ವಿನಾಕಾರಣ ತಗಾದೆ ತೆಗೆದು ಕಿರಿಕಿರಿ ಮಾಡುವುದು, ರಸ್ತೆಯಲ್ಲೇ ತಡೆದು ನಿಲ್ಲಿಸುತ್ತಿರುವುದು ನಡೆಯುತ್ತಿದೆ ಎಂದು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಖಾಸಗಿ ಕಂಪನಿ ಉದ್ಯೋಗಿಗಳು ಅಳಲು ತೋಡಿಕೊಂಡಿದ್ದಾರೆ.
ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಶುರು: ಏನಿರುತ್ತೆ..? ಏನಿರಲ್ಲ..? ಅನಗತ್ಯವಾಗಿ ಓಡಾಡಿದರೆ ಕ್ರಿಮಿನಲ್‌ ಕೇಸ್‌..!
ಕರ್ಫ್ಯೂ ಇರುವುದರಿಂದ ರಾತ್ರಿ ವೇಳೆ ಮನೆಯಿಂದ ಯಾರೂ ಹೊರ ಬರಬಾರದು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಕಚೇರಿಯಲ್ಲಿ ತಂಗಿ ಬೆಳಗ್ಗೆ ಮನೆ ಸೇರಬೇಕು. ನಗರ ಪೊಲೀಸ್‌ ಆಯುಕ್ತರಿಂದ ನಮಗೆ ಕಟ್ಟುನಿಟ್ಟಿನ ಸೂಚನೆ ಇದೆ. ಕರ್ಫ್ಯೂ ಇರುವ ವೇಳೆ ರಸ್ತೆಗೆ ಬಂದರೆ ನಿಮ್ಮ ವಾಹನ ವಶಪಡಿಸಿಕೊಂಡು ನಿಮ್ಮ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಸುತ್ತಾರೆ ಎಂದು ನೊಂದ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಗುರುತಿನ ಚೀಟಿ ತೋರಿಸಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೂ ಪೊಲೀಸರು ಕಿರಿಕಿರಿ ಮಾಡುತ್ತಿದ್ದಾರೆ ಎಂದು ನೊಂದ ನೌಕರರೊಬ್ಬರು ದೂರಿದ್ದಾರೆ. ನಗರ ಪೊಲೀಸ್‌ ಆಯುಕ್ತರು ಈ ಸಂಬಂಧ ಎಲ್ಲ ಠಾಣೆಯ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.



Read more

[wpas_products keywords=”deal of the day sale today offer all”]