ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಡಿಸೆಂಬರ್ 31ಕ್ಕೆ ಚಿತ್ರ ಬಿಡುಗಡೆಗೆ ನಿರ್ಧರಿಸಲಾಗಿತ್ತು. ಈಗ ಹೊಸ ದಿನಾಂಕವನ್ನು ಶೀಘ್ರ ತಿಳಿಸುವುದಾಗಿ ಪರಂವಾ ಸ್ಟುಡಿಯೋ ಪ್ರಕಟಣೆ ತಿಳಿಸಿದೆ.
ಕೆಲವೊಂದು ಅಡೆತಡೆಗಳು ಹೊಸದೊಂದು ಅಧ್ಯಾಯಕ್ಕೆ ನಾಂದಿಯಾಗುತ್ತವೆ. ಶೀಘ್ರ ಹೊಸ ಪ್ರಕಟಣೆಯೊಂದಿಗೆ ಬರಲಿದ್ದೇವೆ. ಹರಸಿ, ಹಾರೈಸಿ ಎಂದು ಚಿತ್ರ ತಂಡ ಕೋರಿದೆ.