Karnataka news paper

2030ರ ವೇಳೆಗೆ ಜಪಾನ್ ಹಿಂದಿಕ್ಕಿ, ಆರ್ಥಿಕತೆಯಲ್ಲಿ ಏಷ್ಯಾದ 2ನೇ ಅತಿದೊಡ್ಡ ರಾಷ್ಟ್ರವಾಗಲಿದೆ ಭಾರತ!


Online Desk

ನವದೆಹಲಿ: 2030ರ ವೇಳೆಗೆ ಭಾರತ ಆರ್ಥಿಕತೆಯಲ್ಲಿ ಏಷ್ಯಾದ ಎರಡನೇ ಅತಿದೊಡ್ಡ ರಾಷ್ಟ್ರದ ಪಟ್ಟ ಪಡೆದು ಜಪಾನ್ ನ್ನು ಹಿಂದಿಕ್ಕುವ ಸಾಧ್ಯತೆಯಿದೆ. ಜೆಡಿಪಿ ಕೂಡಾ ಜರ್ಮನಿ ಮತ್ತು ಯುಕೆಯನ್ನು ಮೀರಿಸಿ ವಿಶ್ವದ ನಂಬರ್ 3ನೇ ಸ್ಥಾನಕ್ಕೆ ಏರಲಿದೆ ಎಂದು ಐಎಚ್ ಎಸ್ ಮಾರ್ಕಿಟ್ ಶುಕ್ರವಾರ ವರದಿಯಲ್ಲಿ ತಿಳಿಸಿದೆ.

ಪ್ರಸ್ತುತ ಭಾರತ ಆರ್ಥಿಕತೆಯಲ್ಲಿ ಯುಎಸ್, ಚೀನಾ, ಜಪಾನ್, ಜರ್ಮನಿ ಮತ್ತು ಯುನೈಟೆಡ್ ಕಿಂಗ್ ಡಮ್ ನಂತರ ವಿಶ್ವದ ಆರನೇ ಅತಿದೊಡ್ಡ ದೇಶವಾಗಿದೆ. 2021ರಲ್ಲಿ ಯುಎಸ್ ಡಿ 2.7 ಟ್ರಿಲಿಯನ್ ನಿಂದ 2030ರ ವೇಳೆಗೆ 8.4 ಟ್ರಿಲಿಯನ್ ಗೆ ಏರುವ ಮುನ್ಸೂಚನೆಯಿದೆ. 2030ರ ವೇಳೆಗೆ ಭಾರತೀಯ ಜಿಡಿಪಿ ಗಾತ್ರ ಜಪಾನನ್ನು ಮೀರಿಸುತ್ತದೆ. ಇದು ಏಷ್ಯಾ-ಫೆಸಿಫಿಕ್ ಪ್ರದೇಶದಲ್ಲಿ ಭಾರತವನ್ನು ಎರಡನೇ ಅತಿದೊಡ್ಡ  ಆರ್ಥಿಕ ರಾಷ್ಟ್ರವನ್ನಾಗಿ ಮಾಡುತ್ತದೆ ಎಂದು ಮಾರ್ಕಿಟ್ ಲಿಮಿಟೆಡ್ ಹೇಳಿದೆ.

2030ರ ವೇಳೆಗೆ ಭಾರತದ ಆರ್ಥಿಕತೆ ಜರ್ಮನಿ, ಫ್ರಾನ್ಸ್ ಮತ್ತು ಯುಕೆಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಒಟ್ಟಾರೇಯಾಗಿ ಮುಂದಿನ ದಶಕದಲ್ಲಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಲಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ನೈಜ ಜೆಡಿಪಿ ಬೆಳವಣಿಗೆ ದರ ಶೇ. 8.2 ಎಂದು ನಿರೀಕ್ಷಿಸಲಾಗಿದೆ. ಇದು 2022-23ರ ಆರ್ಥಿಕ ವರ್ಷದಲ್ಲಿ ಶೇ. 6.7ರ ವೇಗದಲ್ಲಿ ಮುಂದುವರೆಯುವ ಸಾಧ್ಯತೆಯಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. 

ಪ್ರಸ್ತುತ ನಡೆಯುತ್ತಿರುವ ಭಾರತದ ಡಿಜಿಟಲ್ ರೂಪಾಂತರ ಇ-ಕಾಮರ್ಸ್ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಮುಂದಿನ ದಶಕದಲ್ಲಿ ಚಿಲ್ಲರೆ ಗ್ರಾಹಕ ಮಾರುಕಟ್ಟೆ ಸ್ವರೂಪವನ್ನೇ ಬದಲಾಯಿಸುತ್ತದೆ. ಇದು ತಂತ್ರಜ್ಞಾನ ಮತ್ತು ಇ-ಕಾಮರ್ಸ್ ನಲ್ಲಿ ಪ್ರಮುಖ ಜಾಗತಿಕ ಬಹುರಾಷ್ಟ್ರೀಯ ಕಂಪನಿಗಳನ್ನು ಭಾರತೀಯ ಮಾರುಕಟ್ಟೆ ಆಕರ್ಷಿಸುತ್ತದೆ ಎನ್ನಲಾಗಿದೆ.

2030ರ ವೇಳೆಗೆ 1.1 ಶತಕೋಟಿ ಭಾರತೀಯರು ಇಂಟರ್ನೆಟ್ ಸಂಪರ್ಕ ಪಡೆಯುತ್ತಾರೆ. ಕಳೆದ ಐದು ವರ್ಷಗಳಲ್ಲಿ ಭಾರತಕ್ಕೆ ಎಫ್ ಡಿಐ ಒಳಹರಿವು ಹೆಚ್ಚಿದ್ದು, ಆಟೋಗಳು, ಎಲೆಕ್ಟ್ರಾನಿಕ್ಸ್ ಮತ್ತು ರಾಸಾಯನಿಕಗಳಂತಹ ಉತ್ಪಾದನಾ ಕೈಗಾರಿಕೆಗಳು, ಬ್ಯಾಂಕಿಂಗ್ , ವಿಮೆಯಂತಹ ಸೇವಾ ಉದ್ಯಮ, ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತವು ಪ್ರಮುಖ ಧೀರ್ಘಕಾಲೀನ ಮಾರುಕಟ್ಟೆಗಳಲ್ಲಿ ಒಂದಾಗಿದೆ. 



Read more…

[wpas_products keywords=”deal of the day”]