ಬೆಂಗಳೂರು: ರಾಜ್ಯದಲ್ಲಿ 14,416 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 831 ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದು, ಅದರಲ್ಲಿ 700 ಮಂದಿ ಸಾಮಾನ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಈ ಅಂಕಿ–ಅಂಶವನ್ನು ಗಮನಿಸಿದಾಗ, ಈ ಬಾರಿ ಕೋವಿಡ್ ತೀವ್ರ ಸ್ವರೂಪದ್ದಾಗಿಲ್ಲ. ಕೋವಿಡ್ ಸೋಂಕಿಗೆ ಒಳಗಾಗುವ ಎಲ್ಲರನ್ನೂ ಈ ಬಾರಿ ಆಸ್ಪತ್ರೆಗೆ ದಾಖಲಿಸುವುದಿಲ್ಲ. ಅಗತ್ಯ ಇದ್ದವರಿಗೆ ಮಾತ್ರ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದರು.
ಇದೇ 10 ರಿಂದ 60 ವರ್ಷ ಮೇಲ್ಪಟ್ಟ ಅಗತ್ಯ ಇರುವವರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಾಗುವುದು. ಮುಂದಿನ ಏಳು ದಿನ ಕೋವಿಡ್ ಸೋಂಕಿತರಿಗೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಟೆಲಿ ಕೌನ್ಸೆಲಿಂಗ್ ಮೂಲಕ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕಾಗಿ 10 ಸಾವಿರ ವೈದ್ಯರನ್ನು (ಹೌಸ್ ಸರ್ಜನ್) ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.
Covid-19 Karnataka Update: 8,449 ಹೊಸ ಪ್ರಕರಣ, 4 ಮಂದಿ ಸೋಂಕಿತರು ಸಾವು
Read more from source
[wpas_products keywords=”deal of the day sale today kitchen”]