Karnataka news paper

ಕಾಂಗ್ರೆಸ್ ಗೆ ಸೆಡ್ಡು: ಜ.26 ರಿಂದ ಜೆಡಿಎಸ್ ನಿಂದ ‘ಜನತಾ ಜಲಧಾರೆ’ ಆಂದೋಲನ


Online Desk

ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಇದೇ 9 ರಿಂದ ಆರಂಭಿಸಲಿರುವ ‘ಪಾದಯಾತ್ರೆಗೆ’ ಸೆಡ್ಡು ಹೊಡೆಯುವ ರೀತಿಯಲ್ಲಿ ಜೆಡಿಎಸ್ ಕೂಡಾ ಜನತಾ ಜಲಧಾರೆ ಆಂದೋಲನವನ್ನು ಆರಂಭಿಸುತ್ತಿದೆ.

ಈ ಕುರಿತು ಪಕ್ಷದ ಕೇಂದ್ರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ಮುಖಂಡ ಎಚ್. ಡಿ. ಕುಮಾರಸ್ವಾಮಿ, ಜನವರಿ 26 ರಿಂದ ಆಂದೋಲನ ಪ್ರಾರಂಭವಾಗಲಿದ್ದು, 2023ರ ಚುನಾವಣೆಯವರೆಗೂ ಮುಂದುವರೆಯಲಿದೆ. ನದಿ ಮೂಲಗಳಲ್ಲಿರುವ 51 ಸ್ಥಳಗಳಿಗೆ ಯಾತ್ರೆ ಮೂಲಕ ಭೇಟಿ ನೀಡಲಾಗುವುದು ಎಂದರು.

ಆಂದೋಲನಾಕ್ಕಾಗಿ ಪಕ್ಷದ ಶಾಸಕರು, ಮಾಜಿ ಸಚಿವರು, ಹಿರಿಯ ಮುಖಂಡರ ನೇತೃತ್ವದಲ್ಲಿ 15 ತಂಡಗಳನ್ನು ರಚಿಸಲಾಗುವುದು, ಈ ತಂಡಗಳು ನದಿ ಮೂಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಜಲ ಸಂಗ್ರಹಿಸಲಿವೆ, ಜನವರಿ 26 ರಂದು ಆಂದೋಲನಾ ಖಚಿತ. ಒಂದು ವೇಳೆ ಕೋವಿಡ್ ಹೆಚ್ಚಾದಲ್ಲಿ ಕೆಲವು ದಿನಗಳವರೆಗೂ ಇದನ್ನು ಮುಂದೂಡಲಾಗುವುದು ಎಂದು ಅವರು ತಿಳಿಸಿದರು.

ಜೆಡಿಎಸ್ ಗೆ ಸಂಪೂರ್ಣ ಬಹುಮತದೊಂದಿಗೆ ಐದು ವರ್ಷಗಳ ಪೂರ್ಣವಧಿ ಅಧಿಕಾರ ನೀಡಿದರೆ ರಾಜ್ಯದ ಎಲ್ಲ ನದಿಗಳ ನೀರಿನ ಸಮರ್ಪಕ ಬಳಕೆಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಬರುವ ಭರವಸೆಯೊಂದಿಗೆ, ಜನರ ಎದುರು ಬೆಂಬಲ ಕೋರಲಾಗುವುದು ಎಂದರು. 



Read more

[wpas_products keywords=”deal of the day”]