Karnataka news paper

ಮತಾಂತರ ನಿಷೇಧ ಕಾಯ್ದೆಯಲ್ಲಿ ರಾಜಕೀಯ ದುರುದ್ದೇಶ ಇದೆ: ಸಿದ್ದರಾಮಯ್ಯ ಆಕ್ರೋಶ


ಹೈಲೈಟ್ಸ್‌:

  • ಮತಾಂತರ ನಿಷೇಧ ಕಾಯಿದೆಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ
  • ʼವಿಷಯಾಂತರ ಮಾಡುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ಜಾರಿʼ
  • ʼಜನಸಾಮಾನ್ಯರ ಸಮಸ್ಯೆಗಳಿಂದ ವಿಷಯಾಂತರ ಮಾಡಲು ಸರ್ಕಾರದ ಪ್ರಯತ್ನʼ

ಬೆಳಗಾವಿ: ಜನಸಾಮಾನ್ಯರ ಸಮಸ್ಯೆ ವಿಷಯಾಂತರ ಮಾಡೋ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಯಲ್ಲಿ ರಾಜಕೀಯ ದುರುದ್ದೇಶ ಇದೆ. ಹಾಗಾಗಿಯೇ ಇದನ್ನು ತರಲು ಹೊರಟಿದ್ದಾರೆ.‌ ನಮ್ಮ ಸಂವಿಧಾನ ಬಹಳ ಸ್ಪಷ್ಟವಾಗಿ ಹೇಳಿದೆ. ಯಾವುದೇ ಧರ್ಮ ಪಾಲನೆ ಮಾಡುವ ಅವಕಾಶ ಇದೆ. ಆದರೆ,
ಬಲವಂತದ ಮತಾಂತರಕ್ಕೆ ಮಾತ್ರ ಅವಕಾಶವಿಲ್ಲ ಎಂದರು.

ಬಲವಂತದಿಂದ ಮಾಡಿದರೆ ತಪ್ಪು. ಈಗ ಕಾಯ್ದೆ ತರುವ ಅಗತ್ಯ ಏನಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಯಾವುದೋ ಧರ್ಮ ಜಾತಿಯವರನ್ನು ಗುರಿಯಾಗಿರಿಸಿಕೊಂಡು ಅವರಿಗೆ ತೊಂದರೆ ಕೊಡುವ ಉದ್ದೇಶ ಇದರ ಹಿಂದಿದೆ. ವಿಧೇಯಕದ ಪ್ರಸ್ತಾವನೆಯನ್ನೇ ವಿರೋಧ ಮಾಡುತ್ತೇವೆ ಎಂದು ತಿಳಿಸಿದರು.

ಇವತ್ತು ಅಧಿವೇಶನದಲ್ಲಿ ಪ್ರವಾಹ ಪರಿಹಾರದ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ಮಳೆ ಪ್ರವಾಹದಿಂದ ಬೆಳೆ ಹಾನಿಯಾಗಿದೆ. ರಸ್ತೆ, ಸೇತುವೆ ಹಾನಿಯಾಗಿದೆ ಆದರೂ ಪರಿಹಾರ ಸಿಕ್ಕಿಲ್ಲ. ಬಿಟ್ ಕಾಯಿನ್, ಭ್ರಷ್ಟಾಚಾರದ ಆರೋಪ ಇದೆ. ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ
ಈ ಸಮಸ್ಯೆಗಳನ್ನು ವಿಷಯಾಂತರ ಮಾಡಲು ಮತಾಂತರ ನಿಷೇಧ ಕಾಯ್ದೆ ಎಂದರು.

ಕಾಂಗ್ರೆಸ್ ಪಕ್ಷ ಯಾವುದೇ ಜಾತಿ ಧರ್ಮದ ಆಧಾರದಲ್ಲಿ ಜನರನ್ನು ನೋಡಲ್ಲ. ಎಲ್ಲ ಜಾತಿ ಧರ್ಮದವರನ್ನು ಮನುಷ್ಯತ್ವದಲ್ಲಿ ನೋಡುತ್ತೇವೆ. ಅದರ ಬಗ್ಗೆ ಚರ್ಚೆಗೆ ಕೇಳಿದ್ದೇವೆ. ನಂತರ ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ಜೊತೆಗೆ 40% ಕಮೀಷನ್ ಬಗ್ಗೆಯೂ ಪ್ರಸ್ತಾಪ ಮಾಡ್ತೇವೆ ಎಂದರು.

ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆ ಬಹುತೇಕ ಫಿಕ್ಸ್! ನಡೆಯುತ್ತಿದೆ ಅಂತಿಮ ಹಂತದ ಸಿದ್ಧತೆ
ದೇಶ ವಿಭಜನೆ ಮಾಡಬೇಡಿ ಎಂದ ಮಾಜಿ ಸಚಿವ ಕೆಜೆ ಜಾರ್ಜ್
ಇನ್ನು, ಮತಾಂತರ ನಿಷೇಧದಂತಹ ಕಾಯ್ದೆ ಜಾರಿಗೆ ತಂದು ದೇಶ ವಿಭಜನೆ ಮಾಡಲು ಹೊರಡಬೇಡಿ ಎಂದು ಮಾಜಿ ಸಚಿವ ಕೆಜೆ ಜಾರ್ಜ್ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಬಲವಂತವಾಗಿ ಮತಾಂತರ ಮಾಡುವಂತಿಲ್ಲ ಅಂತ. ಆದ್ರೆ ಇಷ್ಟ ಬಂದಂತ ಧರ್ಮಕ್ಕೆ ಹೋಗಬಹುದು ಅಂತಿದೆ. ಬಲವಂತವಾಗಿ ಮತಾಂತರ ಆಗೋದಕ್ಕೆ ನಮ್ಮದು ವಿರೋಧವಿದೆ ಎಂದರು.

ಬೆಳಗಾವಿ ಅಧಿವೇಶನದಲ್ಲೇ ಮತಾಂತರ ತಡೆ ವಿಧೇಯಕ: ಕಾಂಗ್ರೆಸ್‌ ವಿರೋಧ, ಬಿಜೆಪಿ ಸಮರ್ಥನೆ
ಈ ಕಾನೂನು ತರುವ ಮೂಲಕ ಕೆಲವರಿಗೆ ನೈತಿಕ ಪೊಲೀಸ್‌ಗಿರಿಗೆ ಅವಕಾಶ ಮಾಡಿಕೊಟ್ಟಂತೆ ಆಗಲಿದೆ. ಹಿಂದು ಧರ್ಮವಾಗಲಿ ಅಥವಾ ಬೇರೆ‌ ಧರ್ಮವಾಗಲಿ ಶಕ್ತಿಯುಕ್ತವಾಗಿದೆ. ಮೊಘಲರು, ಡಚ್ಚರು, ಪೋರ್ಚುಗೀಸರು ಬಂದರೂ ಹಿಂದು ಧರ್ಮದ ಜನ ಸಂಖ್ಯೆ ಹೆಚ್ಚಿದೆ. ಕ್ರೈಸ್ತ ಸಮುದಾಯದ ಜನಸಂಖ್ಯೆ ಮೊದಲಿಗಿಂತ ಕಡಿಮೆ ಇದೆ. ರಾಜಕೀಯದ ದುರುದ್ದೇಶದಿಂದ ಈ ಕಾಯ್ದೆ ತರುವುದಕ್ಕೆ ಹೊರಟಿದ್ದಾರೆ‌‌ ಎಂದು ಆರೋಪಿಸಿದರು.

ಬಿಟ್ ಕಾಯಿನ್, ಪರ್ಸೆಂಟೇಜ್, ಮತಾಂತರ.. ಅಧಿವೇಶನದಲ್ಲಿ ಚರ್ಚೆಗೆ ಸಿದ್ಧ ಅಂದ್ರು ಸಿದ್ದರಾಮಯ್ಯ..!
ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅವರ ಬಿಜೆಪಿ ಪಕ್ಷದವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ. ಇಂತಹ ಕಾಯ್ದೆ ತಂದು ದೇಶ ವಿಭಜನೆ ಮಾಡೋಕೆ ಹೊರಡಬೇಡಿ ಎಂದು ಮಾಜಿ ಸಚಿವ ಕೆಜೆ ಜಾರ್ಜ್ ಹೇಳಿದರು.



Read more