Karnataka news paper

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಆಚರಿಸಲು ರಜೆ ಬೇಕು: ಪ್ರಿನ್ಸಿಪಾಲರಿಗೆ ಪತ್ರ ಬರೆದ ವಿದ್ಯಾರ್ಥಿ


Online Desk

ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್​ ಜನ್ಮದಿನ, ಕೋವಿಡ್ ಕಾರಣದಿಂದಾಗಿ ಈ ಬಾರಿ ಕೂಡ ಯಸ್ ತಮ್ಮ ಹುಟ್ಟುಹಬ್ಬವನ್ನುಅಭಿಮಾನಿಗಳ ಜತೆ ಸೇರಿ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಆದರೂ ಸಹ ‘ರಾಕಿಂಗ್​ ಸ್ಟಾರ್​’ ಜನ್ಮದಿನದ ಬಗ್ಗೆ ಫ್ಯಾನ್ಸ್​ ತುಂಬ ಎಗ್ಸೈಟ್​ ಆಗಿದ್ದಾರೆ. ಎಷ್ಟರಮಟ್ಟಿಗೆಂದರೆ, ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ರಜೆ ಬೇಕು ಎಂದು ಬಳ್ಳಾರಿಯಲ್ಲಿ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ. ಆ ಪತ್ರ ಈಗ ವೈರಲ್​ ಆಗಿದೆ.

ಬಳ್ಳಾರಿಯಲ್ಲಿ ಬಿ.ಕಾಂ ಮೂರನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ಕೆ. ಶಿವಕುಮಾರ್​ ಎಂಬ ವಿದ್ಯಾರ್ಥಿ ಈ ರೀತಿ ಪತ್ರ ಬರೆದಿದ್ದಾನೆ. ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ ಇನ್ನೂ 2 ದಿನ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ನಾಳೆ ಅಭಿಮಾನಿಗಳು 24 ಗಂಟೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ನಲ್ಲಿ ಭಾಗವಹಿಸುತ್ತಿದ್ದಾರೆ. ನಾನು ಅದರಲ್ಲೂ ಭಾಗವಹಿಸುತ್ತೇನೆ. ಹೀಗಾಗಿ ನನಗೆ ಹಾಗೂ ಇತರ ಯಶ್ ಅಭಿಮಾನಿಗಳಿಗೂ ರಜೆ ಕೊಡಿ ಎಂದು ವಿನಂತಿಸಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳ ಶುಭಾಶಯಗಳನ್ನು ನೀವು ನೋಡಿ, ಬಾಸ್‌ಗೆ ವಿಶ್ ಮಾಡಿ ಎಂದು ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಕೆಜಿಎಫ್-2 ನಂತರ ಯಶ್ ಮುಂದಿನ ಚಿತ್ರ ಯಾವುದು? ರಾಕಿ ಭಾಯ್ ಅಭಿಮಾನಿಗಳ ಕಾತುರಕ್ಕೆ ಇಲ್ಲಿದೆ ಉತ್ತರ!



Read more

[wpas_products keywords=”deal of the day”]