Karnataka news paper

ಶೇ.2ರಷ್ಟು ಸೋಂಕಿಲ್ಲದಿದ್ದರೂ ಕರ್ಫ್ಯೂ: ಡಿಕೆ ಶಿವಕುಮಾರ್‌



ಬೆಂಗಳೂರು: ರಾಜ್ಯದಲ್ಲಿ ಶೇ.2ರಷ್ಟೂ ಸೋಂಕು ಇಲ್ಲ. ಕರ್ಫ್ಯೂ, ಲಾಕ್‌ಡೌನ್‌ ಜಾರಿಗೆ ಸರಕಾರಕ್ಕೆ ತನ್ನದೇ ಆದ ಮಾನದಂಡವಿದೆ. ಸೋಂಕಿತರು, ಆಸ್ಪತ್ರೆಗೆ ದಾಖಲಾದವರು, ಐಸಿಯು ದಾಖಲಾತಿಯ ಮಾನದಂಡ ಇರಬೇಕು. ಆದರೆ ವಿಜ್ಞಾನ, ತಾಂತ್ರಿಕತೆ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ಕೇವಲ ರಾಜಕೀ ಯದ ಬಗ್ಗೆ ಮಾತನಾ ಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಿಡಿ ಕಾರಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ”ನಿರ್ಬಂಧ ವಿರೋಧಿಸಿ ಸಾವಿರಾರು ಜನರು ಪ್ರತಿಪಕ್ಷವಾಗಿ ಏನು ಮಾಡುತ್ತಿದ್ದೀರಿ ಎಂದು ಕರೆ ಮಾಡಿ ಪ್ರಶ್ನಿಸುತ್ತಿದ್ದಾರೆ. ಮಾಹಿತಿ ಕಲೆ ಹಾಕಿದಾಗ ಶೇ. 2ರಷ್ಟು ಸೋಂಕು ಇಲ್ಲದಿರುವುದು ಕಂಡುಧಿಬಂದಿದೆ. ಇದು ಕೋವಿಡ್‌ ಕರ್ಫ್ಯೂ ಅಲ್ಲ, ಬಿಜೆಪಿ ಕರ್ಫ್ಯೂ” ಎಂದು ಆಕ್ರೋಶ ವ್ಯಕ್ತಪಡಿಸಿದರು.

”ಆರೋಗ್ಯ ಇಲಾಖೆ ಕಾರ್ಯದರ್ಶಿಗಳು ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿಆರೋಗ್ಯ ಸಮಸ್ಯೆ ಇಲ್ಲ, ಚುನಾವಣೆ ಮಾಡಬಹುದು ಎಂದಿದ್ದಾರೆ. ನಿರ್ಬಂಧವನ್ನು ಆರು ಸಚಿವರು ವಿರೋಧಿಸಿದ್ದಾರೆ. ನಿರ್ಬಂಧ ಹಿಂಪಡೆಯುವಂತೆ ಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದೇನೆ. ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರು 18 ವರ್ಷ ಮೇಲ್ಪಟ್ಟಧಿವರಿಗೆ ಬೂಸ್ಟರ್‌ ಡೋಸ್‌ ನೀಡಲು ಆಂದೋಲನ ಮಾಡುವ ಚಿಂತನೆಯಲ್ಲಿದ್ದಾರೆ,” ಎಂದರು.

”ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳ ಬಂದ್‌ ಇಲ್ಲ. ಕೇವಲ ರಾಮನಗರದಲ್ಲಿ ಮಾತ್ರ ಬಂದ್‌ ಮಾಡಿದ್ದಾರೆ. ಸರಕಾರ ಜಿಲ್ಲಾಧಿಕಾರಿಗಳ ಮೂಲಕ ಪತ್ರ ಕಳುಹಿಸಿದ್ದು, ಅದರಲ್ಲಿ ಪಾದಯಾತ್ರೆಗೆ ಅವಕಾಶವಿಲ್ಲ ಎಂದಿದ್ದಾರೆ. ನಾವು ಇಬ್ಬರಾದರೂ ನಡೆಯುತ್ತೇವೆ. ಜನ ಏನು ಮಾಡುತ್ತಾರೋ ನೋಡೋಣ” ಎಂದು ತಿಳಿಸಿದರು.

”ರಾಜ್ಯದ ಇತಿಹಾಸದಲ್ಲಿಇಂತಹ ದ್ವೇಷದ ರಾಜಕಾರಣ ಕಂಡಿಲ್ಲ. ರಾಜಕಾರಣ ಮಾಡುತ್ತಿರುವುದು ಸರಕಾರಕ್ಕೆ ಶೋಭೆ ತರುವುದಿಲ್ಲ. ಸಿಎಂಗೆ ಭಗವಂತ ಬುದ್ಧಿ ನೀಡಲಿ” ಎಂದು ಹೇಳಿದರು.

”ಸೋಂಕು ಹೆಚ್ಚಳದ ಬೋಗಸ್‌ ಅಂಕಿ ಸಂಖ್ಯೆ ಬಗ್ಗೆ ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಎಮ್ಮೆಲ್ಸಿಗಳ ಪ್ರಮಾಣ ವಚನ ವೇಳೆ ಕಾನೂನು ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಖ್ಯ ಕಾರ್ಯದರ್ಶಿಗಳನ್ನು ಒತ್ತಾಯಿಸುತ್ತೇನೆ”ಎಂದು ತಿಳಿಸಿದರು.


ಮಾಜಿ ಸಚಿವ ಯು. ಟಿ. ಖಾದರ್‌, ”ಸರಕಾರದ ಕರ್ಫ್ಯೂ ನಿರ್ಧಾರ ಲಾಜಿಕ್‌, ವಿಜ್ಞಾನದ ನಿರ್ಧಾರವಲ್ಲ. ಕೇವಲ ರಾಜಕೀಯ ಪ್ರೇರಿತ”ಎಂದು ದೂರಿದರು.



Read more

[wpas_products keywords=”deal of the day sale today offer all”]