Karnataka news paper

ಕೋವಿಡ್ 19: ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಆಸ್ಪತ್ರೆಗೆ ದಾಖಲು


ಹೈಲೈಟ್ಸ್‌:

  • ಹೆಚ್ಚಾಗುತ್ತಿರುವ ಕೋವಿಡ್-19 ಪಾಸಿಟಿವ್ ಪ್ರಕರಣಗಳು
  • ಜನಪ್ರಿಯ ನಿರ್ದೇಶಕ ಪ್ರಿಯದರ್ಶನ್‌ಗೆ ತಗುಲಿದ ಕೊರೊನಾ ವೈರಸ್ ಸೋಂಕು
  • ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಅವರಿಗೂ ಕೋವಿಡ್-19 ಪಾಸಿಟಿವ್

ಭಾರತದಲ್ಲಿ ಮತ್ತೆ ಕೋವಿಡ್ ಆತಂಕ ಎದುರಾಗಿದೆ. ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಇದೀಗ ದಿಢೀರ್ ಏರಿಕೆ ಆಗುತ್ತಿದೆ. ಒಮಿಕ್ರಾನ್ ಪ್ರಕರಣಗಳೂ ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಹೇರಲಾಗಿದೆ. ಹೀಗಿರುವಾಗಲೇ, ಜನಪ್ರಿಯ ನಿರ್ದೇಶಕ ಪ್ರಿಯದರ್ಶನ್ ಅವರಿಗೂ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ.

ಮಾಲಿವುಡ್ ಹಾಗೂ ಬಾಲಿವುಡ್‌ನಲ್ಲಿ ಖ್ಯಾತಿ ಪಡೆದಿರುವ ನಿರ್ದೇಶಕ ಪ್ರಿಯದರ್ಶನ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಕೋವಿಡ್-19 ಪಾಸಿಟಿವ್ ದೃಢಪಟ್ಟ ಬೆನ್ನಲ್ಲೇ ನಿರ್ದೇಶಕ ಪ್ರಿಯದರ್ಶನ್ ಚೆನ್ನೈನಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಿಯದರ್ಶನ್ ‘ನಿನ್ನಿಷ್ಟಂ ಎನ್ನಿಷ್ಟಂ’, ‘ಹಲೋ ಮೈ ಡಿಯರ್ ರಾಂಗ್ ನಂಬರ್’, ‘ಆರ್ಯನ್’, ‘ಚಿತ್ರಂ’, ‘ವಂದನಂ’, ‘ನಂ.20 ಮದ್ರಾಸ್ ಮೇಲ್’, ‘ನಿರ್ಣಯಂ’, ‘ಮುಸ್ಕುರಾಹತ್’, ‘ಕಾಲಾ ಪಾನಿ’, ‘ಸಾಥ್ ರಂಗ್ ಕೆ ಸಪ್ನೆ’, ‘ಡೋಲಿ ಸಜಾ ಕೆ ರಕ್ನಾ’, ‘ಹೇರಾ ಪೇರಿ’, ‘ಹಂಗಾಮ’, ‘ಹಲ್‌ಚಲ್’, ‘ಗರಂ ಮಸಾಲಾ’, ‘ಬಿಲ್ಲು’, ‘ಹಂಗಾಮ 2’, ‘ಮರಕ್ಕರ್’ ಮುಂತಾದ ಸಿನಿಮಾಗಳಿಗೆ ಪ್ರಿಯದರ್ಶನ್ ಆಕ್ಷನ್ ಕಟ್ ಹೇಳಿದ್ದಾರೆ.

ನೋರಾ ಫತೇಹಿಗೆ ಕೋವಿಡ್-19: ಹಾಸಿಗೆ ಹಿಡಿದ ನಟಿ
ನಟಿ ಮಿಥಿಲಾ ಪಾಲ್ಕರ್‌ಗೂ ಕೊರೊನಾ ವೈರಸ್ ಸೋಂಕು
ಬಾಲಿವುಡ್ ನಟಿ ಮಿಥಿಲಾ ಪಾಲ್ಕರ್ ಅವರಿಗೂ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ. ಈ ಬಗ್ಗೆ ಮಿಥಿಲಾ ಪಾಲ್ಕರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘’ಹಾಯ್ ಫ್ರೆಂಡ್ಸ್, ನನ್ನ ಬರ್ತ್‌ಡೇ ವಾರವನ್ನು ಕೋವಿಡ್ ಪಾಸಿಟಿವ್ ನೋಟ್‌ನಿಂದ ಶುರು ಮಾಡಬೇಕಿದೆ. ನನಗೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ನಾನು ಐಸೊಲೇಟ್ ಆಗಿದ್ದೇನೆ. ನನ್ನ ಕುಟುಂಬ ಹಾಗೂ ಸ್ನೇಹಿತರು ತೋರಿಸುತ್ತಿರುವ ಕಾಳಜಿಯಿಂದ ಖುಷಿಯಾಗಿದ್ದೇನೆ’’ ಎಂದು ಮಿಥಿಲಾ ಪಾಲ್ಕರ್ ಇನ್ಸ್ಟಾಗ್ರಾಮ್‌ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಂದ್ಹಾಗೆ, ‘ಚಾಪ್ ಸ್ಟಿಕ್ಸ್’, ‘ತ್ರಿಭಂಗ’, ‘ಮುರಂಬಾ’ ಮುಂತಾದ ಸಿನಿಮಾಗಳಲ್ಲಿ ಹಾಗೂ ವೆಬ್‌ ಸೀರೀಸ್‌ಗಳಲ್ಲಿ ನಟಿ ಮಿಥಿಲಾ ಪಾಲ್ಕರ್ ಅಭಿನಯಿಸಿದ್ದಾರೆ.

ಕೋವಿಡ್-19: ಅನ್ಶುಲಾ, ರಿಯಾ, ಅರ್ಜುನ್ ಕಪೂರ್ ಮತ್ತು ಕರಣ್ ಬೂಲಾನಿಗೆ ತಗುಲಿದ ಕೊರೊನಾ ಸೋಂಕು
ವಿಶಾಲ್ ದದ್ಲಾನಿ ಅವರಿಗೂ ಕೋವಿಡ್-19 ಪಾಸಿಟಿವ್
ಬಾಲಿವುಡ್‌ನ ಜನಪ್ರಿಯ ಮ್ಯೂಸಿಕ್ ಕಂಪೋಸರ್ ವಿಶಾಲ್ ದದ್ಲಾನಿ ಅವರಿಗೂ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ವಿಶಾಲ್ ದದ್ಲಾನಿ, ‘’ಎಷ್ಟೇ ಮುಂಜಾಗ್ರತ ಕ್ರಮ ವಹಿಸಿದರೂ ನನಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ. ನನಗೆ ಗೊತ್ತಿರುವ ಹಾಗೆ, ನಾನು ಯಾರನ್ನೂ ಮಾಸ್ಕ್ ಇಲ್ಲದೆ ಭೇಟಿ ಮಾಡಿಲ್ಲ. ಕೈಗಳನ್ನು ಸ್ಯಾನಿಟೈಸ್ ಮಾಡದೆ ನಾನು ಯಾವುದನ್ನೂ ಮುಟ್ಟಿಲ್ಲ. ನನಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ. ದಯವಿಟ್ಟು ಹುಷಾರಾಗಿರಿ ಎಂದಿದ್ದಾರೆ.

‘ದಸ್’, ‘ಸಲಾಂ ನಮಸ್ತೆ’, ‘ಬ್ಲಫ್ ಮಾಸ್ಟರ್’, ‘ಗೋಲ್‌ಮಾಲ್’, ‘ಓಂ ಶಾಂತಿ ಓಂ’, ‘ದೋಸ್ತಾನಾ’, ‘ರಾ ಒನ್’, ‘ದಿ ಡರ್ಟಿ ಪಿಕ್ಚರ್’, ‘ಚೆನ್ನೈ ಎಕ್ಸ್‌ಪ್ರೆಸ್’, ‘ಸುಲ್ತಾನ್’, ‘ಟೈಗರ್ ಝಿಂದಾ ಹೈ’ ಮುಂತಾದ ಹಿಟ್ ಸಿನಿಮಾಗಳಿಗೆ ವಿಶಾಲ್ ದದ್ಲಾನಿ ಸಂಗೀತ ನೀಡಿದ್ದಾರೆ.



Read more

[wpas_products keywords=”deal of the day party wear dress for women stylish indian”]