Karnataka news paper

ರಾಗಿಗುಡ್ಡ-ಸಿಲ್ಕ್‌ ಬೋರ್ಡ್‌ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಜೂನ್‌ ವೇಳೆಗೆ ಸಂಚಾರಕ್ಕೆ ಸಿದ್ಧ, ಟ್ರಾಫಿಕ್‌ಗೆ ಮುಕ್ತಿ


ಹೈಲೈಟ್ಸ್‌:

  • ರಾಗಿಗುಡ್ಡ-ಸಿಲ್ಕ್‌ ಬೋರ್ಡ್‌ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಜೂನ್‌ ವೇಳೆಗೆ ಸಂಚಾರಕ್ಕೆ ಸಿದ್ಧ
  • ಮೇಲ್ಸೇತುವೆ ನಿರ್ಮಾಣದಿಂದ ರಾಗಿಗುಡ್ಡ – ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನಡುವೆ ಸಿಗ್ನಲ್‌ ಮುಕ್ತ ಕಾರಿಡಾರ್‌
  • 3.3 ಕಿ.ಮೀ ಉದ್ದದ ಫ್ಲೈಓವರ್‌ನಲ್ಲಿ 1 ಕಿ.ಮೀ. ಕಾಮಗಾರಿಯಷ್ಟೇ ಬಾಕಿ

ಬೆಂಗಳೂರು: ಉದ್ಯಾನ ನಗರಿಯ ಮೊದಲ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಜೂನ್‌ ವೇಳೆಗೆ ಸಿದ್ಧವಾಗಲಿದೆ. 2021ರ ಅಕ್ಟೋಬರ್‌ ವೇಳೆಗೆ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಕಾಮಗಾರಿ ಪೂರ್ಣವಾಗಬೇಕಿತ್ತು. ಆದರೆ ನಿಗದಿತ ಡೆಡ್‌ಲೈನ್‌ ಮುಗಿದಿದ್ದು, ಜೂನ್‌ ವೇಳೆಗೆ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆ ಇದೆ.

ರಾಗಿಗುಡ್ಡ ಮತ್ತು ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ (3.35 ಕಿ.ಮೀ) ನಡುವಿನ ರಸ್ತೆ-ರೈಲು ಮೇಲ್ಸೇತುವೆ ಕಾಮಗಾರಿಯು ಮಾರೇನಹಳ್ಳಿ ರಸ್ತೆ ಸಮೀಪ ಪ್ರಗತಿಯಲ್ಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ದ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಅತ್ಯಂತ ಜನನಿಬಿಡ ಪ್ರದೇಶವಾಗಿರುವ ಇಲ್ಲಿ ಫ್ಲೈಓವರ್‌ನ ಕೆಳ ಅಂತಸ್ತಿನಲ್ಲಿ ವಾಹನಗಳು ಮತ್ತು ಮೇಲಿನ ಅಂತಸ್ತಿನಲ್ಲಿ ಮೆಟ್ರೋ ರೈಲು ಸಂಚರಿಸಲಿವೆ. ಇದು ಮೆಟ್ರೋ ಹಂತ 2 ಯೋಜನೆಯ ಸಂಪೂರ್ಣ ಎಲಿವೇಟೆಡ್‌ ಆರ್‌.ವಿ. ರಸ್ತೆ – ಬೊಮ್ಮಸಂದ್ರ ಕಾರಿಡಾರ್‌ನ (18.8 ಕಿ.ಮೀ) ಭಾಗವಾಗಿದೆ.

ನಮ್ಮ ಮೆಟ್ರೋ ಕಾಮಗಾರಿ: 40 ಅಡಿ ಎತ್ತರದಿಂದ ಬಿದ್ದ ಕ್ರೇನ್, ತಪ್ಪಿದ ಭಾರಿ ಅನಾಹುತ
”3.3 ಕಿ.ಮೀ ಉದ್ದದ ಫ್ಲೈಓವರ್‌ನಲ್ಲಿ ಸುಮಾರು 1 ಕಿ.ಮೀ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಇದು 2022ರ ಜೂನ್‌ ಒಳಗೆ ಪೂರ್ಣಗೊಳ್ಳಲಿದೆ,” ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್‌. ಯಶವಂತ್‌ ಚವಾಣ್‌ ತಿಳಿಸಿದರು.

ಮೆಟ್ರೋ ಕಾರ್ಯಾಚರಣೆ ಪ್ರಾರಂಭವಾಗುವ ಮುನ್ನ ಫ್ಲೈಓವರ್‌ನ ಕೆಳ ಅಂತಸ್ತಿನಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚವಾಣ್‌, ”ಕೆಳಗಿನ ಡೆಕ್‌ ಅನ್ನು ಲೂಪ್‌ಗಳು ಮತ್ತು ರ್ಯಾಂಪ್‌ಗಳಿಗೆ ಸಂಪರ್ಕಿಸಬೇಕಿದೆ. ಇವು ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಲ್ಲಿ ನಿರ್ಮಾಣ ಹಂತದಲ್ಲಿದೆ. ಆರ್‌.ವಿ. ರಸ್ತೆ – ಬೊಮ್ಮಸಂದ್ರ ಮೆಟ್ರೋ ಕಾರಿಡಾರ್‌ ಪೂರ್ಣಗೊಳಿಸಲು 2022ರ ಡಿಸೆಂಬರ್‌ಗೆ ಗಡುವು ನಿಗದಿಪಡಿಸಲಾಗಿದೆ,” ಎಂದರು.

ಮೆಟ್ರೋ ಮಾರ್ಗ ನಿರ್ಮಾಣಕ್ಕೆ 833 ಮರಗಳಿಗೆ ಕೊಡಲಿ: ಬಿಬಿಎಂಪಿ ಅನುಮತಿ
”ಕಾಮಗಾರಿ ಪೂರ್ಣಗೊಂಡ ನಂತರ ರಾಗಿಗುಡ್ಡ ಮತ್ತು ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನಡುವೆ ಸಿಗ್ನಲ್‌ ಮುಕ್ತ ಕಾರಿಡಾರ್‌ ಆಗಲಿದೆ. ಇದರಿಂದ ಪೀಕ್‌ ಅವರ್‌ಗಳಲ್ಲಿ ತೀವ್ರ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಅಲ್ಲದೇ ಮೆಟ್ರೋ ಆರಂಭವಾದ ನಂತರ ವಾಹನ ಸಂಚಾರ ಮತ್ತಷ್ಟು ತಗ್ಗಲಿದೆ. ಎಲಿವೇಟೆಡ್‌ ರಸ್ತೆಯಲ್ಲಿ ಚತುಷ್ಪಥ ರಸ್ತೆ ಮತ್ತು ಸಾಮಾನ್ಯ ರಸ್ತೆಯ ಚತುಷ್ಪಥ ರಸ್ತೆಯಿಂದಾಗಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ,” ಎಂದು ಮೆಟ್ರೋ ಅಧಿಕಾರಿಯೊಬ್ಬರು ಹೇಳಿದರು.

ಬೆಂಗಳೂರಿನಲ್ಲೇ ಇದು ಮೊದಲ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಆಗಿದೆ. ಈಗಿರುವ ರಸ್ತೆ ಮಟ್ಟಕ್ಕಿಂತ ಎಂಟು ಮೀಟರ್‌ ಎತ್ತರದಲ್ಲಿ ಎಲಿವೇಟೆಡ್‌ ರಸ್ತೆ ಹಾಗೂ 16 ಮೀಟರ್‌ ಎತ್ತರದಲ್ಲಿ ಮೆಟ್ರೋ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಜೈಪುರ, ನಾಗಪುರ ಹಾಗೂ ಮುಂಬಯಿನಲ್ಲಿ ಈಗಾಗಲೇ ಡಬಲ್‌ ಡೆಕ್ಕರ್‌ ಫ್ಲೈಓವರ್‌ ನಿರ್ಮಾಣವಾಗಿದೆ.

ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಲ್ಲಿ ಎರಡು ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗಲಿವೆ. ಇವೆರಡರ ನಡುವಿನ ಅಂತರವು 355 ಮೀಟರ್‌ ಇರಲಿದ್ದು, ಟ್ರಾವೆಲೇಟರ್‌ ಮೂಲಕ ನಿಲ್ದಾಣಗಳನ್ನು ಸಂಪರ್ಕಿಸುವ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಬಿ.ಎಲ್‌.ಯಶವಂತ್‌ ಚವಾಣ್‌ ಹೇಳಿದ್ದಾರೆ.



Read more

[wpas_products keywords=”deal of the day sale today offer all”]