Karnataka news paper

ಭಾರತ ಸಾರ್ಕ್‌ ಸಭೆಗೆ ಅಡ್ಡಿಪಡಿಸುತ್ತಿದೆ: ಪಾಕ್‌ ಆರೋಪ


Prajavani

ಇಸ್ಲಾಮಾಬಾದ್‌: ಸಾರ್ಕ್‌ ಶೃಂಗಸಭೆ ನಡೆಸುವ ಪ್ರಕ್ರಿಯೆಗೆ ಭಾರತವು ಅಡ್ಡಿಪಡಿಸುತ್ತಿದ್ದು ಅದರ ಸಂಕುಚಿತ ವರ್ತನೆಯಿಂದ ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸುವ ಒಂದು ಮೌಲ್ಯಯುತ ವೇದಿಕೆಯನ್ನು ನಿಷ್ಕ್ರಿಯಗೊಳಿಸುತ್ತಿದೆ ಎಂದು ಪಾಕಿಸ್ತಾನ ಶುಕ್ರವಾರ ಆರೋಪಿಸಿದೆ.

ಅಫ್ಗಾನಿಸ್ತಾನ, ಬಾಂಗ್ಲಾದೇಶ, ಭೂತಾನ್‌, ಭಾರತ, ಮಾಲ್ಡೀವ್ಸ್‌, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳನ್ನು ಒಳಗೊಂಡಿರುವ ಒಂದು ಪ್ರಾದೇಶಿಕ ಸಂಘಟನೆಯಾಗಿರುವ ಸಾರ್ಕ್‌ 2016ರಿಂದ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿಲ್ಲ. 2014ರಲ್ಲಿ ಕಠ್ಮಂಡುವಿನಲ್ಲಿ ನಡೆದ ನಂತರ ಇಲ್ಲಿಯವರೆಗೆ ಯಾವುದೇ ದ್ವೈವಾರ್ಷಿಕ ಶೃಂಗಸಭೆಗಳು ನಡೆದಿಲ್ಲ ಎಂದೂ ಅದು ಹೇಳಿದೆ.



Read more from source

[wpas_products keywords=”deals of the day offer today electronic”]