ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಜಕೀಯ ನಾಯಕರು ಆಡಿದ್ದೇ ಆಟ ಎಂಬ ಮಾತಿದೆ. ಅದರಲ್ಲೂ ಇತ್ತೀಚೆಗೆ ಮೈತ್ರಿ ಸರ್ಕಾರಗಳು ಬರಲಾರಂಭಿಸಿದ ಮೇಲೆ, ನಾಯಕರೆನಿಸಿಕೊಂಡವರು ಇಂದು ಇದ್ದ ಪಕ್ಷದಲ್ಲಿ ನಾಳೆ ಇರುವುದಿಲ್ಲ. ಒಂದು ಹಂತದಲ್ಲಿ ಮೈತ್ರಿ ಸರ್ಕಾರಗಳ ರಚನೆ ಸಮಯದಲ್ಲಿ ಉಂಟಾಗುವ ರಾಜಕೀಯ ಮೇಲಾಟಗಳು ಜನರಿಗೆ ಸಿಕ್ಕಾಪಟ್ಟೆ ಮನರಂಜನೆಯನ್ನು ನೀಡಿ, ಸಾಮಾನ್ಯರಿಗೆ ತೊಂದರೆಯನ್ನೂ ಉಂಟು ಮಾಡಿವೆ. ಅಂತಹ ಒಂದು ಮೈತ್ರಿ ಸರ್ಕಾರದ ರಚನೆಯ ಒಟ್ಟಾರೆ ಕಥೆಯನ್ನು ದಾನಿಶ್ ಸೇಠ್ ಮತ್ತು ತಂಡ ‘ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್’ ಹೆಸರಿನಲ್ಲಿ ವಿಡಂಬನಾತ್ಮಕ ವೆಬ್ ಸಿರೀಸ್ ಮಾಡಿದೆ.
ದಾನೀಶ್ ಸೇಠ್ ಅವರ ಈ ವೆಬ್ ಸೀರಿಸ್ ಮೇಲೆ ಹಲವು ನಿರೀಕ್ಷೆಗಳಿವೆ. ಜನ ಹೇಗೆ ಈ ಸಿರೀಸ್ ಅನ್ನು ರಿಸೀವ್ ಮಾಡಿಕೊಳ್ಳಬಹುದು ಎಂದು ಆ ತಂಡ ಕೂಡ ಇದೆ. ಮೊದಲೇ ಹೇಳಿದಂತೆ ಇದೊಂದು ವಿಡಂಬನಾತ್ಮಕ ಕಥೆ. ಹಾಸ್ಯವನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಮಾಡಿರುವ ಸೀರಿಸ್. ಪ್ರತಿ ದೃಶ್ಯದಲ್ಲಿ ಹಾಸ್ಯವನ್ನು ತರಲೇಬೇಕು ಎಂದು ನಿರ್ದೇಶಕರು ಕಷ್ಟಪಟ್ಟಂತಿದೆ.
2018ರಲ್ಲಿ ಬಿಡುಗಡೆಯಾಗಿದ್ದ ‘ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಕಾರ್ಪೋರೇಟರ್ ಆಗಿದ್ದ ನೋಗ್‌ರಾಜ್ ಶಾಸಕನಾಗುತ್ತಾನೆ. ಅಲ್ಲಿಂದ ಮುಂದೆ ಈ ಸೀರಿಸ್ ಆರಂಭವಾಗುತ್ತದೆ. ಈ ಸೀರಿಸ್ ಆರಂಭದಲ್ಲಿಯೇ ನೊಗ್‌ರಾಜ್ ಒನ್ ಬಿಗ್ ಪಾರ್ಟಿ ಎಂಬ ಹೆಸರಿನ ಪಕ್ಷದ ಅಧ್ಯಕ್ಷನಾಗಿರುತ್ತಾನೆ. ಇನ್ನೊಂದು ಕಡೆಯಲ್ಲಿ ಮೋಸ್ಟ್ ಸೆಕ್ಯುಲರ್ ಪಾರ್ಟಿ ಮತ್ತು ಫ್ಯಾಮಿಲಿ ರನ್ ಪಾರ್ಟಿ ಎಂಬ ಹೆಸರಿನ ಎರಡು ಪಕ್ಷಗಳಿವೆ. ಈ ಮೂರು ಪಕ್ಷಗಳಿಗೆ ಅಧಿಕಾರ ಹಿಡಿಯುವ ಆಸೆ. ಆದರೆ ಯಾರು ಅಧಿಕಾರ ಹಿಡಿಯುತ್ತಾರೆ? ಸಿಎಂ ಯಾರು ಆಗುತ್ತಾರೆ ಎಂಬುದೇ ಈ ಸೀರಿಸ್‌ನ ಒಟ್ಟು ಕಥೆ.
ಹತ್ತು ಎಪಿಸೋಡ್‌ಗಳಲ್ಲಿರುವ ಈ ಸೀರಿಸ್‌ನ ಪ್ರಮುಖ ಅಂಶ ನಗು. ಈ ರೀತಿ ಪ್ರತಿಯೊಂದು ಎಪಿಸೋಡ್‌ನಲ್ಲಿಯೂ ವೀಕ್ಷಕರನ್ನು ನಗಿಸಲೇಬೇಕು ಎಂಬ ಹಠಕ್ಕೆ ಬಿದ್ದಂತೆ ಚಿತ್ರಕಥೆಯನ್ನು ಬರೆದು ದೃಶ್ಯಗಳನ್ನು ಹೆಣೆಯಲಾಗಿದೆ. ಅಲ್ಲಲ್ಲಿ ಕೆಲ ದೃಶ್ಯಗಳು ಬೇಡ ಎನಿಸುತ್ತವೆ, ಜತೆಗೆ ಸೀರಿಸ್ ಆದ ಕಾರಣ ವೀಕ್ಷಕರ ತಾಳ್ಮೆಯನ್ನು ಇದು ಬೇಡುತ್ತದೆ. ಆದರೆ ಕನ್ನಡದ ಮಟ್ಟಿಗೆ ಇದೊಂದು ಹೊಸ ಪ್ರಯತ್ನ ಎನ್ನಬಹುದು. ಸರ್ಕಾರ ರಚನೆಗೆ ಶಾಸಕರ ಕುದುರೆ ಮಾರಾಟ, ರೆಸಾರ್ಟ್ ಪ್ರವಾಸ ಹೀಗೆ ಪ್ರತಿಯೊಂದನ್ನು ಬಹಳ ರಿಸರ್ಚ್ ಮಾಡಿ ಮಾಡಿರುವಂತಿದೆ. ಕೆಲ ಪಾತ್ರಗಳಂತೂ ರಾಷ್ಟ್ರ ಮತ್ತು ರಾಜ್ಯದ ರಾಜಕಾರಿಣಿಗಳನ್ನು ಹೊಲಿದರೆ ಅದಕ್ಕೆ ನೀವು ನಿರ್ದೇಶಕರನ್ನು ಪ್ರಶ್ನೆ ಮಾಡುವಂತಿಲ್ಲ ಏಕೆಂದರೆ ಅವರು ಆರಂಭದಲ್ಲಿಯೇ ಇದೊಂದು ವಿಡಂಭನಾತ್ಮಕ ಮತ್ತು ಕಾಲ್ಪನಿಕ ಕಾರ್ಯಕ್ರಮ ಎಂದು ಹೇಳಿಕೆ ನೀಡಿದ್ದಾರೆ.
ಈ ಬಾರಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟ ‘ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್’!
ನೊಗ್‌ರಾಜ್ ಪಾತ್ರಧಾರಿಯಾಗಿ ದಾನಿಶ್ ಸೇಠ್ ಎಂದಿನಂತೆ ಭರ್ಜರಿಯಾಗಿ ನಗಿಸಿದ್ದಾರೆ. ಪ್ರಕಾಶ್ ಬೆಳವಾಡಿ ತಾನೊಬ್ಬ ಅದ್ಭುತ ಕಲಾವಿದ ನನ್ನ ಬಳಿ ಬರೀ ಸೀರಿಯಸ್ ಪಾತ್ರವಲ್ಲ ಹಾಸ್ಯವನ್ನು ಮಾಡಿಸಬಹುದು ಎಂಬುದನ್ನು ತೋರಿಸಿದ್ದಾರೆ. ರಘು ರಾಮನಕೊಪ್ಪ, ವಿಜಯ್ ಚೆಂಡೂರ್ ಸೇರಿದಂತೆ ಎಲ್ಲರ ಪಾತ್ರಗಳು ಚೆನ್ನಾಗಿವೆ. ಬೇರೆ ಭಾಷೆಗಳಲ್ಲಿ ಹಾಸ್ಯದ ಸೀರಿಸ್‌ಗಳನ್ನು ನೋಡಿ ಇಷ್ಟಪಟ್ಟವರಿಗೆ ಮತ್ತು ಕನ್ನಡದಲ್ಲಿ ವೆಬ್ ಸೀರಿಸ್ ಬರುತ್ತಿಲ್ಲ ಎನ್ನುವವರಿಗೆ ಹೊಸ ಅನುಭವವನ್ನು ಇದು ನೀಡಬಹುದು. ವೂಟ್‌ನಲ್ಲಿಈ ಸೀರಿಸ್ ಪ್ರಸಾರವಾಗುತ್ತಿದ್ದು, ಅಲ್ಲಿ ಈ ಎಲ್ಲಾಎಪಿಸೋಡ್‌ಗಳನ್ನು ನೋಡಬಹುದು.
ವೆಬ್ ಸಿರೀಸ್ ರೂಪದ ಪಡೆದ ‘ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್’ನ್ನು ಜನರು ಯಾಕೆ ನೋಡಬೇಕು? ಸಾದ್ ಖಾನ್ ಹೇಳಿದ್ದೇನು?
Read more
[wpas_products keywords=”deal of the day party wear dress for women stylish indian”]