Karnataka news paper

ಹುಬ್ಬಳ್ಳಿ ಧಾರವಾಡ ಬೈಪಾಸ್‌ ಷಟ್ಫಥ ಎಕ್ಸ್‌ಪ್ರೆಸ್‌ ಹೆದ್ದಾರಿಗೆ ಟೆಂಡರ್‌: ಟೋಲ್‌ನಿಂದಲೂ ಮುಕ್ತಿ..!


ಹೈಲೈಟ್ಸ್‌:

  • 2,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
  • ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಂದ ಪ್ರಕಟಣೆ
  • ಎಂಜಿನಿಯರಿಂಗ್‌, ಪ್ರೋಕ್ಯುರ್‌ಮೆಂಟ್‌ ಆ್ಯಂಡ್‌ ಕನ್ಸ್‌ಸ್ಟ್ರಕ್ಷನ್‌ ಮಾದರಿಯಲ್ಲಿ ಟೆಂಡರ್‌

ಹುಬ್ಬಳ್ಳಿ: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿಧಾರವಾಡ ನಡುವಿನ 31 ಕಿ. ಮೀ. ಬೈಪಾಸ್‌ ರಸ್ತೆಯನ್ನು ಷಟ್ಪಥ ಎಕ್ಸ್‌ಪ್ರೆಸ್‌ ಹೆದ್ದಾರಿಯಾಗಿ ಪರಿವರ್ತಿಸಲು ಹಾಗೂ ನಾಲ್ಕು ಪಥದ ಸರ್ವಿಸ್‌ ರಸ್ತೆ ನಿರ್ಮಿಸಲು ಕೊನೆಗೂ ಚಾಲನೆ ಸಿಕ್ಕಂತಾಗಿದೆ.

ಈ ವಿಷಯವನ್ನು ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರೇ ಖಚಿತ ಪಡಿಸಿದ್ದು, ಈ ಬೈಪಾಸ್‌ ರಸ್ತೆಯನ್ನು ಷಟ್ಪಥ ಎಕ್ಸಪ್ರೆಸ್‌ ಹೆದ್ದಾರಿಯನ್ನಾಗಿ ಪರಿವರ್ತಿಸಲು ಇ. ಪಿ. ಸಿ. (ಎಂಜಿನಿಯರಿಂಗ್‌, ಪ್ರೋಕ್ಯುರ್‌ಮೆಂಟ್‌ ಆ್ಯಂಡ್‌ ಕನ್ಸ್‌ಸ್ಟ್ರಕ್ಷನ್‌) ಮಾದರಿಯಲ್ಲಿ ಟೆಂಡರ್‌ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.

ಶಂಕರಪಾಟೀಲ್ ಮುನೇನಕೊಪ್ಪರಿಂದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಲಾಂಛನ ಬಿಡುಗಡೆ!
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಮಗಾರಿಗೆ ಶುಕ್ರವಾರ (ಜನವರಿ 7) ಟೆಂಡರ್‌ ಕರೆಯಲಾಗಿದ್ದು, ಫೆಬ್ರವರಿ 22 ಟೆಂಡರ್‌ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಕಾಮಗಾರಿ ಮುಗಿಸಲು 2.5 ವರ್ಷ ನಿಗದಿಗೊಳಿಸಲಾಗಿದೆ ಹಾಗೂ ನಿರ್ಮಾಣದ ನಂತರ 5 ವರ್ಷದವರೆಗೆ ಗುತ್ತಿಗೆದಾರರೇ ನಿರ್ವಹಿಸುವ ಷರತ್ತು ನೀಡಲಾಗಿದೆ ಎಂದು ವಿವರಿಸಿದ್ದಾರೆ.

2,400 ಕೋಟಿ ರೂ. ವೆಚ್ಚ

ಈ ಯೋಜನೆ ಒಟ್ಟು 1,200 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳಿಯ ಗಬ್ಬೂರು ಎನ್‌. ಎಚ್‌. 4 ರಸ್ತೆಯ 402.6 ಕಿ. ಮೀ. ಯಿಂದ ಧಾರವಾಡದ ನರೇಂದ್ರ ಕ್ರಾಸ್‌ ಬಳಿ 433.2 ಕಿ. ಮೀ. ವರೆಗಿನ ಒಟ್ಟು 31 ಕಿ. ಮೀ. 6 ಪಥದ ಎಕ್ಸ್‌ಪ್ರೆಸ್‌ ವೇ ಹಾಗೂ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ 800 ಕೋಟಿ ರೂ. ಹಾಗೂ ಭೂ ಸ್ವಾಧೀನ ಡಿಪಿಆರ್‌ ತಯಾರಿಕೆ ಹಾಗೂ ಇನ್ನಿತರೆ ಕಾರ್ಯಕ್ಕೆ 400 ಕೋಟಿ ರೂ. ಕೇಂದ್ರ ಸರಕಾರ ನೀಡಿದೆ ಎಂದೂ ಸಚಿವ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ ಸಿಟಿ ಕಾಮಗಾರಿ ರಸ್ತೆ ಕೆಲಸ ಬೇಗ ಮುಗಿಸಲು ಶೆಟ್ಟರ್ ತಾಕೀತು
ಟೋಲ್‌ನಿಂದ ಮುಕ್ತಿ

ಈಗಿರುವ ಬೈಪಾಸ್‌ನ ಎಲ್ಲ ಟೋಲ್‌ ಪ್ಲಾಜಾಗಳನ್ನು ತೆಗೆದು ಕೇವಲ ಒಂದು ಟೋಲ್‌ ಪ್ಲಾಜಾ ಮಾತ್ರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಹುಬ್ಬಳ್ಳಿ – ಧಾರವಾಡ ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಟೋಲ್‌ನಿಂದ ವಿನಾಯಿತಿ ನೀಡಲಾಗಿದೆ. ಕೆಲಗೇರಿ ಮತ್ತು ನರೇಂದ್ರ ಕ್ರಾಸ್ ಮಧ್ಯೆ ಟೋಲ್‌ ಪ್ಲಾಜಾ ನಿರ್ಮಿಸಲು ಉದ್ದೇಶಿಸಲಾಗಿದೆ. ಆರು ಪಥದ ಎಕ್ಸ್‌ಪ್ರೆಸ್‌ ರಸ್ತೆ ಹಾಗೂ ಸಮರ್ಪಕವಾಗಿ ಎರಡೂ ಬದಿಯಲ್ಲಿ ದ್ವಿಪಥದ ಸರ್ವಿಸ್‌ ರಸ್ತೆ ನಿರ್ಮಾಣದೊಂದಿಗೆ ನಗರ ಮಧ್ಯದಲ್ಲಿನ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂದೂ ಸಚಿವ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಪುಣೆ – ಬೆಂಗಳೂರು ಹೆದ್ದಾರಿ ವಿಸ್ತರಣೆ ಆಯಿತು. ಆದರೆ ಹುಬ್ಬಳ್ಳಿ ಧಾರವಾಡ ಬೈಪಾಸ್‌ ಅಗಲೀಕರಣ ಆಗಲಿಲ್ಲ. 6 ಪಥದ ರಸ್ತೆಯಲ್ಲಿ ವೇಗವಾಗಿ ವಾಹನ ಚಲಾಯಿಸಿಕೊಂಡು ಬರುವ ಚಾಲಕರು ಬೈಪಾಸ್‌ನಲ್ಲಿಯೂ ಅದೇ ವೇಗದಲ್ಲಿ ಸಂಚರಿಸುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಬೈಪಾಸ್‌ ಕೂಡ ಕನಿಷ್ಠ 6 ಪಥಗಳಿಗೆ ವಿಸ್ತರಣೆ ಆಗಬೇಕೆಂಬ ಸಾರ್ವಜನಿಕರ ಬೇಡಿಕೆಗೆ ಕೇಂದ್ರ ಸರಕಾರ ಸ್ಪಂದಿಸಿದೆ. ಈ ಬೈಪಾಸ್‌ ರಸ್ತೆಗೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಾರಿಗೆ ಸಚಿವ ನಿತಿನ್‌ ಗಡ್ಕರಿಯವರನ್ನು ಸಚಿವ ಜೋಶಿ ಅವಳಿ ನಗರದ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿದೆ ಪೈಲಟ್‌ ತರಬೇತಿ ಕೇಂದ್ರ



Read more

[wpas_products keywords=”deal of the day sale today offer all”]