Karnataka news paper

ಬ್ರಿಟನ್‌ ಕೋವಿಡ್‌ ಆಸ್ಪತ್ರೆಗಳಿಗೆ 200 ಸಿಬ್ಬಂದಿ ಕಳುಹಿಸಿದ ಸೇನೆ


Prajavani

ಲಂಡನ್‌: ಬ್ರಿಟನ್‌ ದೇಶದಾದ್ಯಂತ ಕೋವಿಡ್‌ ಪ್ರಕರಣಗಳು ಹೆಚ್ಚಿದ್ದು ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ಆರೋಗ್ಯ ಸೇವಾ ಆಸ್ಪತ್ರೆಗಳಲ್ಲಿ (ಎನ್‌ಎಚ್‌ಎಸ್‌) ಸೋಂಕಿತರು ದಾಖಲಾಗುವ ಸಂಖ್ಯೆ ಹೆಚ್ಚಿದ್ದು ವೈದ್ಯರ ಸಂಖ್ಯೆಯ ಕೊರತೆ ಹಿನ್ನೆಲೆ ದೇಶದ ಸಶಸ್ತ್ರ ಪಡೆಯು ಆರೋಗ್ಯ ಪರಿಸ್ಥಿತಿಯ ನಿರ್ವಹಣೆಗೆ ತನ್ನ 200 ಸಿಬ್ಬಂದಿಯನ್ನು ಕಳುಹಿಸಿದೆ. 

ಕೋವಿಡ್‌ ಬಿಕ್ಕಟ್ಟಿನ ನಿರ್ವಹಣೆಗೆ ಮುಂದಿನ ಮೂರು ವಾರಗಳ ಕಾಲ 40 ಸೇನಾ ವೈದ್ಯರು ಮತ್ತು 160 ಸಾಮಾನ್ಯ ಕರ್ತವ್ಯ ಸಿಬ್ಬಂದಿಯನ್ನು ಒದಗಿಸುವುದಾಗಿ  ರಕ್ಷಣಾ ಸಚಿವಾಲಯ (ಎಂಒಡಿ) ಹೇಳಿದೆ.

ಕೋವಿಡ್‌ ರೋಗಿಗಳ ಆರೈಕೆಗೆ ಎನ್‌ಎಚ್‌ಎಸ್‌ ವೈದ್ಯರು ಮತ್ತು ದಾದಿಯರಿಗೆ ಈ ಸೇನಾ ವೈದ್ಯರು ಸಹಾಯ ಮಾಡುತ್ತಾರೆ. ಸಾಮಾನ್ಯ ಕರ್ತವ್ಯದ ಸಿಬ್ಬಂದಿ ಆಸ್ಪತ್ರೆಗಳಲ್ಲಿ ಇತರ ಸಿಬ್ಬಂದಿ ಕೊರತೆಯನ್ನು ತುಂಬಲಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಬ್ರಿಟನ್‌ನಲ್ಲಿ ಓಮೈಕ್ರಾನ್‌ ರೂಪಾಂತರ ತಳಿಯಿಂದ ಕೋವಿಡ್‌ ವ್ಯಾಪಕವಾಗಿ ಹರಡುತ್ತಿದ್ದು ನಿತ್ಯ 1,79,756 ಪ್ರಕರಣಗಳು ದಾಖಲಾಗುತ್ತಿವೆ.



Read more from source

[wpas_products keywords=”deals of the day offer today electronic”]