ಹೈಲೈಟ್ಸ್:
- ಬಿಡುಗಡೆಯಾಗಿದೆ ‘ಊ ಅಂಟಾವಾ ಮಾವ’ ಹಾಡು
- ಯೂಟ್ಯೂಬ್ನಲ್ಲಿ ಧೂಳೆಬ್ಬಿಸುತ್ತಿದೆ ಅಲ್ಲು ಅರ್ಜುನ್, ಸಮಂತಾ ಹೆಜ್ಜೆ ಹಾಕಿರುವ ‘ಊ ಅಂಟಾವಾ ಮಾವ’ ಸಾಂಗ್
- ‘ಪುಷ್ಪ’ ಸಿನಿಮಾದ ಸ್ಪೆಷಲ್ ಸಾಂಗ್ – ‘ಊ ಅಂಟಾವಾ ಮಾವ’
ರಿಲೀಸ್ ಆಗಿದೆ ‘ಊ ಅಂಟಾವಾ ಮಾವ’ ಹಾಡು
‘ಪುಷ್ಪ: ದಿ ರೈಸ್’ ಸಿನಿಮಾದಲ್ಲಿ ‘ಊ ಅಂಟಾವಾ ಮಾವ.. ಊ ಊ ಅಂಟಾವಾ ಮಾವ’ ಹಾಡು ಮೇನ್ ಅಟ್ರ್ಯಾಕ್ಷನ್ ಆಗಿತ್ತು. ಈ ಹಾಡಿಗಾಗಿ ನಟಿ ಸಮಂತಾ ಸೊಂಟ ಬಳುಕಿಸಿದ್ದರು. ಹಾಡಿನಲ್ಲಿ ಸಮಂತಾ ಮತ್ತು ಅಲ್ಲು ಅರ್ಜುನ್ ಅವರ ಕೆಮಿಸ್ಟ್ರಿ ಕಂಡು ಅಭಿಮಾನಿಗಳು ಚಪ್ಪಾಳೆ – ಶಿಳ್ಳೆ ಹೊಡೆದಿದ್ದರು. ಇದೀಗ ಇದೇ ‘ಊ ಅಂಟಾವಾ ಮಾವ.. ಊ ಊ ಅಂಟಾವಾ ಮಾವ’ ಹಾಡು ಬಿಡುಗಡೆಯಾಗಿದೆ.
ಕೆಲವೇ ಗಂಟೆಗಳ ಹಿಂದೆಯಷ್ಟೇ ‘ಊ ಅಂಟಾವಾ ಮಾವ’ ಹಾಡು ಯೂಟ್ಯೂಬ್ನಲ್ಲಿ ರಿಲೀಸ್ ಆಗಿದೆ. ಅದಾಗಲೇ ಹಾಡಿಗೆ 40 ಲಕ್ಷಕ್ಕೂ ಅಧಿಕ ವ್ಯೂಸ್ ಲಭ್ಯವಾಗಿದೆ. 3 ಲಕ್ಷಕ್ಕೂ ಅಧಿಕ ಮಂದಿ ಹಾಡನ್ನು ಲೈಕ್ ಮಾಡಿದ್ದಾರೆ. ಸದ್ಯಕ್ಕೆ ‘ಊ ಅಂಟಾವಾ ಮಾವ’ ಹಾಡು ಯೂಟ್ಯೂಬ್ ಮ್ಯೂಸಿಕ್ನಲ್ಲಿ ನಂಬರ್ 3 ಟ್ರೆಂಡಿಂಗ್ನಲ್ಲಿದೆ.
ಬಿಹೈನ್ಡ್ ದಿ ಸೀನ್ಸ್ ವಿಡಿಯೋ ಹಂಚಿಕೊಂಡ ಸಮಂತಾ
ಯೂಟ್ಯೂಬ್ನಲ್ಲಿ ‘ಊ ಅಂಟಾವಾ ಮಾವ’ ಹಾಡು ಮಾತ್ರವಲ್ಲ.. ಆ ಹಾಡಿಗಾಗಿ ನಟಿ ಸಮಂತಾ ತಾಲೀಮು ನಡೆಸಿದೆ ವಿಡಿಯೋ ಕೂಡ ಟ್ರೆಂಡಿಂಗ್ ಆಗಿದೆ. ‘ಊ ಅಂಟಾವಾ ಮಾವ..’ ಹಾಡಿನ ರಿಹರ್ಸಲ್ ವಿಡಿಯೋವನ್ನು ನಟಿ ಸಮಂತಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ. ‘ಊ ಅಂಟಾವಾ’ ಹಾಡಿಗೆ ನಟಿ ಸಮಂತಾ ಡ್ಯಾನ್ಸ್ ಪ್ರ್ಯಾಕ್ಟೀಸ್ ಮಾಡಿರುವ ವಿಡಿಯೋಗೆ 12 ಲಕ್ಷಕ್ಕೂ ಅಧಿಕ ವ್ಯೂಸ್ ಲಭಿಸಿದೆ.
ಮೊಟ್ಟ ಮೊದಲ ಐಟಂ ಸಾಂಗ್
ತಮ್ಮ ವೃತ್ತಿ ಜೀವನದಲ್ಲೇ ನಟಿ ಸಮಂತಾ ಮೊಟ್ಟ ಮೊದಲ ಬಾರಿಗೆ ಐಟಂ ಸಾಂಗ್ನಲ್ಲಿ ಕಾಣಿಸಿಕೊಂಡಿರುವುದು ‘ಪುಷ್ಪ’ ಚಿತ್ರದಲ್ಲೇ. ಈ ಹಾಡಿಗೆ ನಟಿ ಸಮಂತಾ ದುಬಾರಿ ಸಂಭಾವನೆಯನ್ನೇ ಪಡೆದಿದ್ದರು ಎಂದು ವರದಿಯಾಗಿತ್ತು.
ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ‘ಪುಷ್ಪ’
ಬಿಡುಗಡೆಯಾದ 15 ದಿನಗಳಲ್ಲಿ ‘ಪುಷ್ಪ: ದಿ ರೈಸ್’ ಸಿನಿಮಾ ಬರೋಬ್ಬರಿ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನೂ, ಬುಕ್ ಮೈ ಶೋ ವೆಬ್ ತಾಣದಲ್ಲಿ ‘ಪುಷ್ಪ’ ಚಿತ್ರದ 5 ಮಿಲಿಯನ್ ಟಿಕೆಟ್ಗಳು ಸೇಲ್ ಆಗಿ ಹೊಸ ದಾಖಲೆ ಬರೆದಿದೆ.
Read more
[wpas_products keywords=”deal of the day sale today offer all”]