Karnataka news paper

ಬುಲ್ಲಿ ಬಾಯ್ ಆ್ಯಪ್ ಮಾಸ್ಟರ್ ಮೈಂಡ್: ಕಾಲೇಜಿನಿಂದ ಅಮಾನತು


PTI

ಭೂಪಾಲ್: ದೇಶಾದ್ಯಂತ ತೀವ್ರ ವಿವಾದಕ್ಕೆ ಗುರಿಯಾಗಿರುವ ‘ಬುಲ್ಲಿಬಾಯ್ ಆ್ಯಪ್ ‘ ಸೃಷ್ಟಿಯ ಹಿಂದಿರುವ ಮಾಸ್ಟರ್ ಮೈಂಡ್ ಆರೋಪದ ಮೇರೆಗೆ ಮಧ್ಯಪ್ರದೇಶ ಮೂಲದ ಎಂಜಿನಿಯರಿಂಗ್ ಕಾಲೇಜಿನ ಬಿ ಟೆಕ್ ವಿದ್ಯಾರ್ಥಿ ನೀರಾಜ್ ಬಿಷ್ಣೋಯಿಯನ್ನು ಅಮಾನತುಮಾಡಲಾಗಿದೆ ಎಂದು ಕಾಲೇಜಿನ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಭೂಪಾಲ್ ನ ವೆಲ್ಲೂರ್ ತಾಂತ್ರಿಕ ಸಂಸ್ಥೆಯ (ವಿಐಟಿ) ವಿದ್ಯಾರ್ಥಿಯಾಗಿರುವ ಬಿಷ್ಣೊಯಿಯನ್ನು ಗುರುವಾರ ಅಸ್ಸಾಂನ ಜೋರ್ಹತ್ ನಲ್ಲಿ ಬಂಧಿಸಲಾಗಿತ್ತು. 21 ವರ್ಷದ ಬಿಷ್ಣೋಯಿ ಈ ಕೇಸಿನ ಹಿಂದಿರುವ ಪ್ರಮುಖ ಸಂಚುಕೋರನಾಗಿದ್ದು, ವಿವಾದಾತ್ಮಕ ಆ್ಯಪ್ ನೃಷ್ಟಿಸಿ, ಅದರಲ್ಲಿ ಹರಾಜಿಗಾಗಿ ನೂರಾರು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದ ಆರೋಪದಲ್ಲಿ ಸಿಲುಕಿರುವುದಾಗಿ ಅಸ್ಸಾಂ ಪೊಲೀಸರು ಹೇಳಿದ್ದಾರೆ. 

ಇದನ್ನೂ ಓದಿ: ಬುಲ್ಲಿ ಬಾಯ್ ವಿವಾದ: ಅಸ್ಸಾಂನಲ್ಲಿ ‘ಮಾಸ್ಟರ್‌ಮೈಂಡ್’ ಬಂಧಿಸಿದ ದೆಹಲಿ ಪೊಲೀಸರು

ಬುಲ್ಲಿಬಾಯ್ ಪ್ರಕರಣದಲ್ಲಿ ಬಿಷ್ಣೋಯಿ ಪಾತ್ರ ಕಂಡುಬಂದ ಬೆನ್ನಲ್ಲೇ ಆತನ ವಿರುದ್ಧ ಕಾಲೇಜ್ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.  ವಿಐಟಿ ಭೂಪಾಲ್ ಕ್ಯಾಂಪಲ್ ಸೆಹೂರ್ ಜಿಲ್ಲೆಯಿಂದ 100 ಕಿ. ಮೀ. ದೂರದಲ್ಲಿದೆ. 

ಬಿಷ್ಣೋಯಿ ಬಂಧನ ಬಗ್ಗೆ ಸೆಹೊರ್ ಪೊಲೀಸರು ಹಾಗೂ ಮಾಧ್ಯಮಗಳ ಮೂಲಕ ಮಾಹಿತಿ ಪಡೆದ ಕೂಡಲೇ ಆತನನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ದೊರೆಯುವ ಹೆಚ್ಚಿನ ಮಾಹಿತಿ ಆಧಾರದ ಮೇಲೆ ಕಾಲೇಜ್ ಆಡಳಿತ ಮಂಡಳಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. 

ಇದಕ್ಕೂ ಮುನ್ನ ಮಾತನಾಡಿದ ಸೆಹೊರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಯಾದವ್, ಬಿಷ್ಣೋಯಿ ಬಿಟೆಕ್ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದು, ಆನ್ ಲೈನ್ ತರಗತಿಯಲ್ಲಿ ಮಾತ್ರ ಪಾಲ್ಗೊಳ್ಳುತ್ತಿದ್ದಾಗಿ ಕಾಲೇಜ್ ಆಡಳಿತ ಮಂಡಳಿ ಮಾಹಿತಿ ನೀಡಿತ್ತು. ಆತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಆದರೆ, ವಿಐಟಿ ಕ್ಯಾಂಪಸ್ ನಲ್ಲಿ ಭೌತಿಕವಾಗಿ ತರಗತಿಗೆ ಹಾಜರಾಗುತ್ತಿರಲಿಲ್ಲ ಎಂದು ಕಾಲೇಜ್ ಆಡಳಿತ ಮಂಡಳಿ ಹೇಳಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದರು.



Read more

[wpas_products keywords=”deal of the day”]