
ಹೌದು, ಲೆನೊವೊ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ಹೊಸದಾಗಿ ಸ್ಮಾರ್ಟ್ ಗಡಿಯಾರವನ್ನು (Smart Clock 2 ) ಲಾಂಚ್ ಮಾಡಿದೆ. ಈ ಸಾಧನವು ಗೂಗಲ್ ಅಸಿಸ್ಟಂಟ್ ಸೌಲಭ್ಯ ಒಳಗೊಂಡಿದ್ದು, ಬಳಕೆದಾರರು ಸಂಗೀತ ಆಲಿಸಬಹುದಾಗಿದೆ. ಇದರೊಂದಿಗೆ ಟಿವಿ, ಎಸಿ, ಲೈಟ್ ಸೇರಿದಂತೆ ಇನ್ನಿತರೆ ಸ್ಮಾರ್ಟ್ ಸಾಧನಗಳನ್ನು ನಿಯಂತ್ರಣ ಮಾಡಲು ಈ ಸ್ಮಾರ್ಟ್ ಗಡಿಯಾರವನ್ನು ಸ್ಮಾರ್ಟ್ ಹೋಮ್ ಆಗಿ ಬಳಕೆ ಮಾಡಬಹುದಾಗಿದೆ. ಹಾಗೆಯೇ ಇದು ಮತ್ತಷ್ಟು ಸ್ಮಾರ್ಟ್ ಫೀಚರ್ಸ್‌ಗಳನ್ನು ಡಿವೈಸ್ ಪಡೆದಿದೆ.

ಸ್ಮಾರ್ಟ್ ಹೋಮ್ ಪರಿಸರ ವ್ಯವಸ್ಥೆಯ ಭಾಗವಾಗಿ ಉತ್ಪನ್ನವನ್ನು ಸ್ಮಾರ್ಟ್ ಬೆಡ್‌ಸೈಡ್ ಉತ್ಪನ್ನವಾಗಿ ವಿನ್ಯಾಸ ಮಾಡಲಾಗಿದೆ. ಸ್ಮಾರ್ಟ್ ಸ್ಮಾರ್ಟ್ ಗಡಿಯಾರ ಸಾಧನವು 2 ಫ್ಯಾಬ್ರಿಕ್ ಕವರ್ ಹೊಂದಿದ್ದು, 4 ಇಂಚಿನ ಬಣ್ಣದ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಈ ಸಾಧನದ ಡಿಸ್‌ಪ್ಲೇಯು ಸಮಯ, ಹವಾಮಾನ, ಫೋಟೋಗಳನ್ನು ಕಸ್ಟಮೈಜ್ ಸಹ ಮಾಡಬಹುದಾಗಿದೆ. ಗಡಿಯಾರದ ಮುಖಗಳ ಆಯ್ಕೆ ಕಾಣಿಸಿಕೊಂಡಿದೆ.

ಸ್ಮಾರ್ಟ್ ಗಡಿಯಾರವು ಬಳಕೆದಾರರಿಗೆ ಧ್ವನಿ ಆಜ್ಞೆಗಳನ್ನು ನೀಡಲು ಅನುಮತಿಸುತ್ತದೆ. ಕಾರ್ಯಚಟುವಟಿಕೆಗಳು ಜ್ಞಾಪನೆಗಳು ಮತ್ತು ಅಲಾರಮ್‌ಗಳು, ಆನ್‌ಲೈನ್ ಪ್ರಶ್ನೆಗಳು, ಟ್ರಾಫಿಕ್ ಸ್ಥಿತಿ ಮತ್ತು ಹೆಚ್ಚಿನದನ್ನು ಒಳಗೊಂಡಿರುತ್ತದೆ. ಈ ಸ್ಮಾರ್ಟ್ ಗಡಿಯಾರವು ವಾಯರ್‌ಲೆಸ್ ಚಾರ್ಜಿಂಗ್ ಡಾಕ್‌ನೊಂದಿಗೆ ಬರುತ್ತದ. ಅಲ್ಲದೇ ಈ ಸಾಧನವು ರಾತ್ರಿಯಲ್ಲಿ ತಮ್ಮ ಸಾಧನಗಳನ್ನು ನಿಧಾನವಾಗಿ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ.

ಈ ಸ್ಮಾರ್ಟ್ ಗಡಿಯಾರ ಸಾಧನದಲ್ಲಿ ಬಳಕೆದಾರರು ತಮ್ಮ ಫೋನ್ ಮೂಲಕ ಗೂಗಲ್ ಫೋಟೋಗಳ ಆಲ್ಬಮ್‌ಗಳನ್ನು ಸೆಟ್ ಮಾಡಬಹುದು. ಇದರೊಂದಿಗೆ ಗಡಿಯಾರದ ಮುಖಗಳಾಗಿ ಹೊಂದಿಸಬಹುದು. ಹಾಗೆಯೇ ಸಾಧನವು ಎರಡು ವೈರ್‌ಲೆಸ್ ಸಾಧನಗಳಿಗೆ ಚಾರ್ಜ್ ಮಾಡಬಹುದು. ಇದಲ್ಲದೆ, ಡಾಕ್ ಮಾಡಿದಾಗ ಬಿಲ್ಟ್‌ಇನ್ ನೈಟ್ ಲೈಟ್ ಲಭ್ಯ ವಿದೆ. ಸ್ಮಾರ್ಟ್ ಗಡಿಯಾರದ ಇತ್ತೀಚಿನ ಆವೃತ್ತಿಯು ಸ್ಮಾರ್ಟ್ ಹೋಮ್ ಉತ್ಪನ್ನವಾಗಿದ್ದು, ಗೂಗಲ್ ಅಸಿಸ್ಟೆಂಟ್ ಆಯ್ಕೆ ಪಡೆದಿದೆ. ಈ ಮೂಲಕ ಬಳಕೆದಾರರು ಹೆಚ್ಚಿನ ಅನುಕೂಲ ಹೊಂದಬಹುದು.

ಲೆನೊವೊ ಇಂಡಿಯಾದ ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್ ಸಾಧನಗಳ ನಿರ್ದೇಶಕ ಪಂಕಜ್ ಹರ್ಜೈ, ‘ನಾವು ಗ್ರಾಹಕರಿಗೆ ಅತ್ಯಾಧುನಿಕ ಸ್ಮಾರ್ಟ್ ಹೋಮ್ ಸಾಧನಗಳನ್ನು ನಿರಂತರವಾಗಿ ಆವಿಷ್ಕರಿಸಲು ಮತ್ತು ಪರಿಚಯಿಸಲು ಪ್ರಯತ್ನಿಸುತ್ತೇವೆ. ಸ್ಮಾರ್ಟ್ ಗಡಿಯಾರದ ಮೊದಲ ತಲೆಮಾರಿನ ಯಶಸ್ಸಿನ ಮೇಲೆ ಸವಾರಿ ಮಾಡುವ ಮೂಲಕ, ಕಿಕ್‌ಸ್ಟಾರ್ಟ್‌ಗೆ ಸಹಾಯ ಮಾಡಲು, ನಿಸ್ತಂತು ಚಾರ್ಜಿಂಗ್ ಡಾಕ್, ನವೀಕರಿಸಿದ ವಿನ್ಯಾಸ ಮತ್ತು ಹೆಚ್ಚಿನ ಹೊಸ ವೈಶಿಷ್ಟ್ಯಗಳೊಂದಿಗೆ ಲೆನೊವೊ ಸ್ಮಾರ್ಟ್ ಕ್ಲಾಕ್ 2 ಅನ್ನು ಪರಿಚಯಿಸಲು ನಾವು ಸಂತೋಷಪಡುತ್ತೇವೆ. ಎಂದಿದ್ದಾರೆ.

ಇನ್ನು ಲೆನೊವೊ ಸ್ಮಾರ್ಟ್ ಕ್ಲಾಕ್ 2 ಸಾಧನದ ಬೆಲೆಯು 6,999ರೂ. ಆಗಿದೆ. ಈ ಸಾಧನವು ಕಂಪನಿಯ ವಾಯರ್‌ಲೆಸ್ ಚಾರ್ಜಿಂಗ್ ಡಾಕ್‌ನೊಂದಿಗೆ ಬರುತ್ತದೆ. ಈ ಸ್ಮಾರ್ಟ್ ಡಿವೈಸ್ ಹೀದರ್ ಗ್ರೇ (Heather Grey) ಬಣ್ಣದಲ್ಲಿ ಲಭ್ಯ ಇದ್ದು, ಇಂದಿನಿಂದ (ಜನವರಿ 7 ರಂದು) ಮಾರಾಟವಾಗಲಿದೆ. ಈ ಸಾಧನವು ಲೆನೊವೊ.ಕಾಮ್ (Lenovo.com,), ಫ್ಲಿಪ್‌ಕಾರ್ಟ್.ಕಾಮ್ (Flipkart.com), ರಿಯಲನ್ಸ್ ಡಿಜಿಟಲ್ (Reliance Digital) ತಾಣಗಳ ಮೂಲಕ ಲಭ್ಯವಿರುತ್ತದೆ. ಆ ಬಳಿಕ ಸ್ಮಾರ್ಟ್ ಕ್ಲಾಕ್ 2 ಸಾಧನವು ಪ್ರಮುಖ ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯ ಆಗಲಿದೆ.
Read more…
[wpas_products keywords=”smartphones under 15000 6gb ram”]