Karnataka news paper

ದೇಹದ ಅತಿ ಹೆಚ್ಚು ಅಂಗಗಳನ್ನು ದಾನ ಮಾಡಿದ ದಾಖಲೆ: ಕೇರಳ ಕುಟುಂಬಕ್ಕೆ ಪ್ರಶಂಸೆಯ ಮಹಾಪೂರ


The New Indian Express

ತಿರುವನಂತಪುರಂ: ಕೇರಳದ ಕೊಲ್ಲಂ ನಿವಾಸಿ ಎಸ್ ವಿನೋದ್ ಅವರ ದೇಹದ 8 ಭಾಗಗಳು ದಾನ ಮಾಡಲ್ಪಟ್ಟಿದ್ದು, ವಿನೂತನ ದಾಖಲೆಗೆ ಅವರು ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಮಡಿಕೇರಿಯ ಥನಲ್ ಆಶ್ರಮದ ಪ್ರಯತ್ನ: ಏಳು ವರ್ಷಗಳ ಬಳಿಕ ಕುಟುಂಬ ಸೇರಿದ ತಮಿಳುನಾಡಿನ ಮಹಿಳೆ

ವಿನೋದ್ ಅವರ ಅಂಗಗಳಿಂದ 7 ಮಂದಿಗೆ ಜೀವದಾನ ದೊರೆತಿದೆ. ಬೈಕ್ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿನೋದ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

ಇದನ್ನೂ ಓದಿ: ಬೆಕ್ಕಿಗೆ ಸೀಮಂತ: ಹೊಸ ಬಟ್ಟೆ, ಕಾಲ್ಗಳಿಗೆ ಬಳೆ: ಕೊಯಮತ್ತೂರಿನಲ್ಲಿ ನಡೆದ ಅಚ್ಚರಿಯ ಘಟನೆ

ಚಿಕಿತ್ಸೆ ಫಲಕಾರಿಯಾಗದೆ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಅವರು ಬದುಕುಳಿಯುವ ಸಾಧ್ಯತೆ ಇಲ್ಲವಾಗಿದ್ದರಿಂದ ಅವರ ಕುಟುಂಬ ಅವರ ಅಂಗದಾನಕ್ಕೆ ಮುಂದಾಗಿತ್ತು.

ಇದನ್ನೂ ಓದಿ: 1 ಗಂಟೆಯಲ್ಲಿ ಅತಿ ಹೆಚ್ಚು ಜನರಿಗೆ ಮೆಹಂದಿ ಹಚ್ಚಿದ ಭಾರತದ ಯುವತಿ: ಪಾಕ್ ಮಹಿಳೆಯ ಗಿನ್ನೆಸ್ ದಾಖಲೆ ಧೂಳಿಪಟ

ಹೃದಯ, ಎರಡು ಕಿಡ್ನಿಗಳು, ಕೈಗಳು, ಭುಜ, ಕಣ್ಣುಗಳು ದಾನ ಮಾಡಲ್ಪಟ್ಟ ಅಂಗಗಳಾಗಿವೆ. ದುಬೈನಲ್ಲಿ ಬಾಣಸಿಗನಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿನೋದ್ ಕೊರೊನಾ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡು ಭಾರತಕ್ಕೆ ಹಿಂದಿರುಗಿದ್ದರು. ವಿನೋದ್ ಅವರ ಪುತ್ರಿ ಕ್ಯಾನ್ಸರ್ ರೋಗಿಯಾಗಿದ್ದಾರೆ.

ಇದನ್ನೂ ಓದಿ: ಪುಡಿಗಾಸು ಕಡಲೆಕಾಯಿ ಸಾಲ ಹಿಂದಿರುಗಿಸಲು ಅಮೆರಿಕದಿಂದ ಭಾರತಕ್ಕೆ ಹಾರಿಬಂದ ಅಣ್ಣ ತಂಗಿ



Read more

[wpas_products keywords=”deal of the day”]