Karnataka news paper

ಋತುಚಕ್ರದ ಮಧ್ಯೆಯೂ ಸ್ವಿಮ್ಮಿಂಗ್‌ಪೂಲ್‌ನೊಳಗೆ ಶೂಟಿಂಗ್‌ನಲ್ಲಿ ಭಾಗಿಯಾದ ‘ಗಿಣಿರಾಮ’ ಧಾರಾವಾಹಿ ನಟಿ ನಯನಾ ನಾಗರಾಜ್


ಹೈಲೈಟ್ಸ್‌:

  • ರಿಷಿಕೇಶದಲ್ಲಿಯೂ ಶೂಟಿಂಗ್ ಮಾಡಿರುವ ‘ಗಿಣಿರಾಮ’ ಧಾರಾವಾಹಿ ತಂಡ
  • ಸ್ವಿಮ್ಮಿಂಗ್‌ಪೂಲ್‌ನೊಳಗೆ ಇಳಿದು ಶೂಟಿಂಗ್ ಮಾಡಿದ ನಯನಾ ನಾಗರಾಜ್
  • ನಯನಾ ಋತುಮತಿಯಾಗಿದ್ದಾಗ ನೀರಿನೊಳಗೆ ಶೂಟಿಂಗ್ ಮಾಡಲು ನಯನಾ ಸಹಾಯಕ್ಕೆ ಬಂದಿದ್ದು menstrual cups

(ಸಂದರ್ಶನ)

‘ಗಿಣಿರಾಮ’ ಧಾರಾವಾಹಿ ತಂಡವು ರಿಷಿಕೇಶದಲ್ಲಿ ಒಂದಷ್ಟು ದಿನಗಳ ಕಾಲ ಶೂಟಿಂಗ್ ಮಾಡಿಕೊಂಡು ಬಂದಿತ್ತು. ಈಗಾಗಲೇ ಈ ಎಪಿಸೋಡ್‌ಗಳು ಪ್ರಸಾರವಾಗುತ್ತಿದೆ. ಬೆಂಗಳೂರಿಗೆ ಹಿಂತಿರುಗಿದ ನಂತರದಲ್ಲಿ ನಟಿ ನಯನಾ ನಾಗರಾಜ್ ಅವರು ಅಷ್ಟೊಂದು ಈಜು ಬರದಿದ್ದರೂ ಕೂಡ ಸ್ವಿಮ್ಮಿಂಗ್‌ಪೂಲ್‌ನೊಳಗೆ ಇಳಿದು ಚಿತ್ರೀಕರಣಕ್ಕೆ ಸಾಥ್ ನೀಡಿದ್ದಾರೆ. ಆಗ ಅವರಿಗೆ ಋತುಚಕ್ರದ ಸಮಯವಾಗಿತ್ತು ಎನ್ನೋದು ಇನ್ನೊಂದು ಚಾಲೆಂಜ್ ವಿಷಯ.

‘ವಿಜಯ ಕರ್ನಾಟಕ ವೆಬ್’ ಜೊತೆಗೆ ಮಾತನಾಡಿದ ನಯನಾ ನಾಗರಾಜ್ “ರಿಷಿಕೇಶದಲ್ಲಿ ಶೂಟಿಂಗ್ ಮಾಡಿದ ಅನುಭವ ಅದ್ಭುತವಾಗಿತ್ತು. ಅಲ್ಲಿ ಸಿಕ್ಕಾಪಟ್ಟೆ ಚಳಿ, ಆ ಮಧ್ಯೆ ಶೂಟಿಂಗ್ ಮಾಡೋದು ದೊಡ್ಡ ಸಾಹಸ. ನಾನಂತೂ ಸೀರೆಯುಟ್ಟುಕೊಂಡು ನಡುಗುತ್ತಿದ್ದೆ, ತುಟುಗಳೆಲ್ಲ ಮರಗೆಟ್ಟುತ್ತಿದ್ದವು. ರಿಯಾಲಿಟಿಗೆ ಹತ್ತಿರವಾಗಿದೆ. ರಿಷಿಕೇಶದಲ್ಲಿ ಗಂಗಾ ಆರತಿ ನೋಡುವುದು ಸೌಭಾಗ್ಯ. ಅಲ್ಲಿನ ಜನರು, ವಾತಾವರಣ ತುಂಬ ಇಷ್ಟ ಆಯ್ತು. ಅಲ್ಲಿನ ಯೋಗಿಗಳು ಹಠಕ್ಕೆ ಬಿದ್ದು ಅವರು ಮಾಡುವ ಯೋಗ ಗಮನ ಸೆಳೆಯುತ್ತದೆ. ಚಳಿ ಮಳೆ ಗಾಳಿ ಇದ್ದರೂ ಕೂಡ ಬೀದಿಯಲ್ಲಿ ಮಲಗುವವರೂ ಅಲ್ಲಿದ್ದಾರೆ. ನನಗೆ ಅವರ ಬಗ್ಗೆ ಸಾಕಷ್ಟು ವಿಷಯ ತಿಳಿದುಕೊಳ್ಳುವ ಆಸಕ್ತಿ ಇತ್ತು. ಸಮಯದ ಅಭಾವದಿಂದ ಸಾಧ್ಯವಾಗಲಿಲ್ಲ” ಎಂದಿದ್ದಾರೆ.

“ಇನ್ನು ಅಲ್ಲಿನ ಮೊಮೊ, ಮ್ಯಾಗಿಯಂತಹ ತಿಂಡಿ ತಿಂದು ಖುಷಿ ಆಯ್ತು. ಪುಣ್ಯಸ್ಥಳಕ್ಕೆ ಭೇಟಿ ನೀಡುವುದು ಖುಷಿಯ ವಿಚಾರ, ಅಲ್ಲಿ ಶೂಟಿಂಗ್ ಮಾಡಿರೋದು ಇನ್ನಷ್ಟು ಸಂತಸ ತಂದಿದೆ. ಮನೆಯವರನ್ನು ಬಿಟ್ಟು ಇರೋದು ನನಗೆ ಕಷ್ಟದ ಕೆಲಸ. ರಿಷಿಕೇಶದಲ್ಲಿ ಕುಟುಂಬದವರನ್ನು ಬಿಟ್ಟು ಇದ್ದಿದ್ದು ಸ್ವಲ್ಪ ಕಷ್ಟವಾಗಿದ್ದು ಬಿಟ್ಟರೆ, ಉಳಿದಂತೆ ಎಲ್ಲವೂ ಚೆನ್ನಾಗಿತ್ತು” ಎಂದಿದ್ದಾರೆ ನಯನಾ ನಾಗರಾಜ್.

ರಿಷಿಕೇಶದಲ್ಲಿ ‘ಗಿಣಿರಾಮ’ ಧಾರಾವಾಹಿ ಶೂಟಿಂಗ್ ವೇಳೆ ಆ ಸಾಧು ಹೇಳಿದ ಮಾತು ಅರ್ಥಪೂರ್ಣವಾಗಿತ್ತು: ನಟ ರಿತ್ವಿಕ್

“ಗಂಗೆಯಲ್ಲಿ ಇಳಿದು ಶೂಟಿಂಗ್ ಮಾಡೋದು ತುಂಬ ಕಷ್ಟ. ಹೀಗಾಗಿ ನಾವು ಬೆಂಗಳೂರಿಗೆ ಬಂದ ಮೇಲೆ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಶೂಟಿಂಗ್ ಮಾಡಿದೆವು. ಎಲ್ಲ ಮುಂಜಾಗ್ರತೆ ಕ್ರಮ ಕೈಗೊಂಡು ನಾನು ನೀರಿನೊಳಗೆ ಇಳಿದೆ. ನನಗೆ ನಿಜವಾಗಿಯೋ ಅಷ್ಟೊಂದು ಈಜು ಬರಲ್ಲ. ಆದರೆ ಧಾರಾವಾಹಿ ತಂಡ ನನ್ನ ಹತ್ತಿರ ಎಷ್ಟು ಈಜು ಆಗತ್ತೋ, ಅಷ್ಟನ್ನೇ ಬಳಸಿಕೊಂಡು ಚಿತ್ರೀಕರಣ ಮಾಡಿದೆ. ಅಸಹಜವಾಗಿ, ಕಲ್ಪನೆಗೆ ದೂರವಾದ ರೀತಿಯಲ್ಲಿ ನಮ್ಮ ಶೂಟಿಂಗ್ ನಡೆದಿಲ್ಲ, ನೀರಿನೊಳಗೆ ಶೂಟಿಂಗ್ ಮಾಡಿರೋದು” ಎಂದು ನಯನಾ ನಾಗರಾಜ್ ಮಾಹಿತಿ ಹಂಚಿಕೊಂಡಿದ್ದಾರೆ.

ಫುಟ್‌ಪಾತ್‌ನಲ್ಲಿ ಅಂಗಡಿಯಿಟ್ಟು ಗಿಡಗಳನ್ನು ಮಾರಿದ್ದೇನೆ: ತಮ್ಮ ಜೀವನದ ಕಹಿಸತ್ಯ ಬಿಚ್ಚಿಟ್ಟ ‘ಗಿಣಿರಾಮ’ ನಟಿ ನಯನ

“ಬೆಂಗಳೂರಿನಲ್ಲಿ ಸ್ವಿಮ್ಮಿಂಗ್ ಪೂಲ್ ಶೂಟಿಂಗ್ ಮಾಡುವಾಗ ನಾನು ಋತುಮತಿಯಾಗಿದ್ದೆ. ಋತುಮತಿಯಾಗಿದ್ದ ಎರಡನೇ ದಿನವೇ ಈ ನೀರಿನ ಶೂಟಿಂಗ್ ಇತ್ತು. ಆ ಸಮಯದಲ್ಲಿ ಸಾಕಷ್ಟು ಯೋಚನೆಗಳು ನನ್ನ ತಲೆಯಲ್ಲಿ ಓಡಾಡುತ್ತಿತ್ತು. ಸ್ವಲ್ಪ ಹೆದರಿದ್ದೆ, menstrual cups ಬಳಕೆ ಮಾಡಿದ್ದರಿಂದ ಕೆಲ ಗಂಟೆಗಳ ಕಾಲ ಶೂಟಿಂಗ್ ಮಾಡಲು ಸಹಾಯ ಆಯ್ತು. ಋತುಮತಿಯಾಗಿದ್ದಾಗ ನೀರಿನೊಳಗೆ ಇಳಿದು ಶೂಟಿಂಗ್‌ ಮಾಡೋದು ದೊಡ್ಡ ಚಾಲೆಂಜ್. sanitary napkins ಬದಲು menstrual cups ಬಳಕೆ ಮಾಡಿರೋದು ನನಗೆ ದೊಡ್ಡ ಉಪಯೋಗ ಆಯ್ತು. ಎಲ್ಲ ಸವಾಲುಗಳ ಮಧ್ಯೆ ಶೂಟಿಂಗ್ ಮಾಡಿರೋದು ನಿಜಕ್ಕೂ ಅದ್ಭುತ ಅನುಭವ” ಎಂದು ನಯನಾ ನಾಗರಾಜ್ ಹೇಳಿದ್ದಾರೆ.



Read more

[wpas_products keywords=”deal of the day party wear dress for women stylish indian”]