Karnataka news paper

ವಿಪರೀತ ಮೊಬೈಲ್‌ ಗೇಮ್‌ ವ್ಯಸನ; ಮೈಸೂರಿನ ಯುವಕ ಆತ್ಮಹತ್ಯೆ


ಮೈಸೂರು: ನೀರಿಗೆ ಬಿದ್ದು ಕೆಟ್ಟುಹೋದ ಮೊಬೈಲ್‌ ರಿಪೇರಿ ಮಾಡಿಸಿಕೊಳ್ಳಲು ಸಾಧ್ಯವಾಗದೆ ನೊಂದ ಯುವಕ ನೇಣಿಗೆ ಶರಣಾಗಿದ್ದಾನೆ.

ಮೈಸೂರಿನ ಯರಗನಹಳ್ಳಿಯ ಜನತಾ ಕಾಲನಿಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಬಡಾವಣೆ ನಿವಾಸಿ ಮಹೇಂದ್ರ( 22) ಮೃತ. ಚಿಕನ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹೇಂದ್ರ ಮೊಬೈಲ್‌ ಗೇಮ್ಸ್‌ಗಳ ವ್ಯಸನಿಯಾಗಿದ್ದ. ಮೊಬೈಲ್‌ ನೀರಿನಲ್ಲಿ ಬಿದ್ದು ಕೆಟ್ಟು ಹೋಗಿದ್ದರಿಂದ ರಿಪೇರಿ ಮಾಡಿಸಿಕೊಳ್ಳಲು ಹಣವಿಲ್ಲದೇ ಕಂಗಾಲಾಗಿದ್ದ. ಕುಡಿದ ಮತ್ತಿನಲ್ಲಿ ಬುಧವಾರ ಮಧ್ಯಾಹ್ನ ಮನೆ ಪಕ್ಕದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಸೂರು ತಾಲೂಕು ಆಲನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿಸಲು ಹೋದ ಯಶವಂತಪುರ ಠಾಣಾ ಪಿಎಸ್‌ಐಗೆ ಚಾಕುವಿನಿಂದ ಇರಿದ ಡಕಾಯಿತರು
ಮೂವರು ಮೊಬೈಲ್‌ ಕಳ್ಳರ ಬಂಧನ
ಬಾಗಲಕೋಟೆ: ಜಮಖಂಡಿ, ತೇರದಾಳ ಹಾಗೂ ಮುಧೋಳದ ನಾನಾ ಪ್ರದೇಶಗಳಲ್ಲಿ 85 ಸಾವಿರ ರೂ.ಮೌಲ್ಯದ 8 ಮೊಬೈಲ್‌ ಕಳ್ಳತನ ಮಾಡಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನಗರದ ಬಸ್‌ ನಿಲ್ದಾಣ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಶಿವಮೊಗ್ಗ ಮೂಲದ ವೆಂಕಟೇಶ ವಡ್ಡರ್‌ (40), ಶ್ರೀಕಾಂತ ಸಣ್ಣತಮ್ಮಪ್ಪ (31) ಹಾಗೂ ದರ್ಶನ ಗುಜ್ಜರ (24) ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನಕ್ಕೆ ಬಳಸುತ್ತಿದ ಕಾರು ವಶಕ್ಕೆ ಪಡೆಡಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಪಿಐ ಎಚ್‌.ಆರ್‌.ಪಾಟೀಲ ಮಾರ್ಗದರ್ಶನದಲ್ಲಿಅಪರಾಧ ವಿಭಾಗದ ಎಸೈ.ಕೆ.ಬಿ ಮಾಂಗ, ಎಸ್ಐ ದಿನೇಶ ಜವಳೇಕರ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.



Read more

[wpas_products keywords=”deal of the day sale today offer all”]