ಅವರು ಶುಕ್ರವಾರ ಕಡಬ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಮಂಗಳವಾರ ಪೂರ್ವಾಹ್ನ ಕಡಬ ಮೇಲಿನ ಪೇಟೆಯಿಂದ ಮೆರವಣಿಗೆಯಲ್ಲಿ ತೆರಳಿ ಪಟ್ಟಣ ಪಂಚಾಯ್ತಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಸರಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಲಾಗುವುದು ಎಂದರು.
ಮನೆ ತೆರಿಗೆಯನ್ನು ಕಾನೂನು ರೀತಿಯಲ್ಲಿ ಏರಿಸದೇ ಮನಬಂದಂತೆ ಏರಿಸಿ ವಸೂಲಿ ಮಾಡುವುದು, 9/11 ಮಾಡಿರುವುದನ್ನು ಈಗ ಪುನರ್‌ರೂಪಿ (ನಮೂನೆ-೩) ರಲ್ಲಿ ಮಾರ್ಪಡಿಸಿ ಹೆಚ್ಚಿನ ಮೊಬಲಗನ್ನು ವಸೂಲಿ ಮಾಡುವುದು, ಅಂಗಡಿ, ವ್ಯಾಪಾರ ಲೈಸನ್ಸ್ ನವೀಕರಣ ಮಾಡಲು ಹೆಚ್ಚಿನ ದರ ವಿಧಿಸುವುದು. ಸ್ವಂತ ಮನೆ ಅಂಗಡಿ ಕಟ್ಟಡ ನಿರ್ಮಾಣಕ್ಕೆ ಕಾನೂನು ಬದ್ಧವಾಗಿ ಇರುವ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ದರವನ್ನು ವಸೂಲಿ ಮಾಡುವುದು. ಕುಡಿಯುವ ನೀರಿನ ಸೌಲಭ್ಯಕ್ಕೆ 30 ವರ್ಷಗಳ ಹಿಂದಿನ ಪೈಪ್‌ಲೈನ್, ಬೋರ್‌ವೆಲ್‌ಗಳನ್ನು ದುರಸ್ಥಿ ಮಾಡದೇ ಇರುವುದು, ವಿದ್ಯುತ್ ದೀಪ ಇದ್ದರೂ ಇಲ್ಲದಂತಿರುವುದು, ಯಾವುದೇ ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ವಿದ್ಯುತ್ ದೀಪ ವಿಸ್ತರಿಸದೇ ಇರುವುದು. ಕೋಡಿಂಬಾಳ ಗ್ರಾಮದ ಗುರಿಯಡ್ಕ, ಎಳಿಯೂರು, ದೊಡ್ಡಕೊಪ್ಪ, ಅಡ್ಡಗದ್ದೆ, ಪಾಲೋಳಿ, ಪಿಜಕ್ಕಳ, ಕಳಾರ, ಪಣೆಮಜಲು ಕಡಬದಿಂದ ದೂರವಿರುವ ಹಳ್ಳಿಗೂ ಅಲ್ಲಿಯ ಭೂಮಿಯನ್ನು ಮಾರಾಟ ಮಾಡುವ ಸಂದರ್ಭ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದೇ ದರ ನಿಗದಿ ಪಡಿಸಿರುತ್ತಾರೆ. ಪಟ್ಟಣ ಪಂಚಾಯ್ತಿ ಗಡಿ ಗುರುತು ಮಾಡದೇ ಇರುವುದರಿಂದ ಈ ಸಮಸ್ಯೆ ಉಂಟಾಗಿರುತ್ತದೆ.
ಕಾನೂನಿನಲ್ಲಿ ಅವಕಾಶವಿದ್ದರೂ ಪಟ್ಟಣ ಪಂಚಾಯ್ತಿ ಗಮನ ಹರಿಸದೇ ಇದೆ ಎಂದು ಆರೋಪಿಸಲಾಗಿದ್ದು, ಕಡಬ ಪೇಟೆಯಲ್ಲಿ ರಿಕ್ಷಾ, ಕಾರು, ಪಿಕಪ್ – ಗೂಡ್ಸ್ ಬಸ್ಸುಗಳಿಗೆ ನಿಲುಗಡೆ ವ್ಯವಸ್ಥೆಯಿಲ್ಲದೆ ಇರುವುದು, ಉದ್ಯೋಗ ಖಾತರಿ ಯೋಜನೆಯಲ್ಲಿ ಲಕ್ಷಾಂತರ ಮಂದಿಗೆ ಬೇರೆ ಬೇರೆ ಯೋಜನೆಯಲ್ಲಿ ಸಹಾಯ ಸಹಕಾರ ಇದ್ದರೂ ಕೂಡಾ ಕಡಬ ಪಟ್ಟಣ ಪಂ. ವ್ಯಾಪ್ತಿಯ ಈ ಸವಲತ್ತು ದೊರಕದೆ ವಂಚಿತರಾಗಿರುವುದು. ಕಡಬ ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯಗಳು ಇದ್ದರೂ ಕೂಡಾ ಶುಚಿತ್ವ ಹಾಗೂ ನೀರಿನ ಕೊರತೆಯಿಂದಾಗಿ ಕೊಳೆತು ನಾರುತ್ತಿದೆ. ಈ ವಿಚಾರ ಎಲ್ಲರಿಗೂ ತಿಳಿದಿದ್ದರೂ ಕೂಡಾ ಈ ತನಕ ದುರಸ್ತಿಗೊಳಿಸದೇ ಇರುವುದು ಮುಂತಾದ ಹತ್ತು ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟದ ಸಿದ್ದತೆ ನಡೆಸಲಾಗಿದೆ ಎಂದು ಮೀರಾ ಸಾಹೇಬ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಉದ್ಯಮಿ ತೋಮ್ಸನ್ ಕೆ. ಟಿ., ಚಂದ್ರಶೇಖರ ಗೌಡ ಕೋಡಿಬೈಲ್ , ಕೆ. ಎಂ. ಹನೀಫ್, ಶಿವರಾಮ್ ಗೌಡ ಕಲ್ಕಾಲ, ಚಂದ್ರಶೇಖರ ಪೆಲೊತ್ತೋಡಿ ಮತ್ತಿತರರು ಉಪಸ್ಥಿತರಿದ್ದರು.
Read more
[wpas_products keywords=”deal of the day sale today offer all”]