ಹೈಲೈಟ್ಸ್:
- ತಮ್ಮನಿಂದಲೇ ಅಣ್ಣನ ಮತಾಂತರಕ್ಕೆ ಯತ್ನ
- ಮೈಸೂರಿನಲ್ಲಿ ಅಣ್ಣನಿಂದ ಪೊಲೀಸರಿಗೆ ದೂರು
- ಮತಾಂತರ ಆಗದಕ್ಕೆ ಅಣ್ಣನ ಮೇಲೆಯೇ ಹಲ್ಲೆ
”ಓಡಿ ಹೋಗಿದ್ದ ನನ್ನ ತಮ್ಮ ಮನೋಹರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿ 10 ವರ್ಷಗಳ ಹಿಂದೆ ಮರಳಿದ್ದ. ಆಗಿನಿಂದಲೂ ಮತಾಂತರ ಆಗುವಂತೆ ಆಮಿಷ ತೋರಿಸಿ ನನ್ನನ್ನು ಒತ್ತಾಯಿಸುತ್ತಿದ್ದ. ಇದಕ್ಕೆ ಒಪ್ಪದಿದ್ದಾಗ ಕಿರುಕುಳ ನೀಡಲು ಶುರು ಮಾಡಿದ್ದ. ನೀರಿನ ವಿಷಯ ಮತ್ತು ಕ್ಷುಲ್ಲಕ ಕಾರಣಕ್ಕೆ ಕ್ಯಾತೆ ತೆಗದು ಜಗಳ ಮಾಡುತ್ತಿದ್ದ. ನಾನಿಲ್ಲದ ಸಮಯದಲ್ಲಿ ನನ್ನ ಪತ್ನಿಯನ್ನು ಏಕೆ ನಿಂದಿಸಿದೆ ಎಂದು ಪ್ರಶ್ನಿಸಿದ್ದಕ್ಕೆ ನಾಲ್ಕು ಜನರೊಂದಿಗೆ ಬಂದು ನನ್ನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ನನ್ನ ಎದುರೇ ನನ್ನ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಲ್ಲದೆ ಬಟ್ಟೆ ಹರಿದು, ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ,” ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟರು.
”ಹಲ್ಲೆಯಿಂದ ನನ್ನ ಎಡಗೈ ಮುರಿದಿದೆ. ಪತ್ನಿಯ ಕಾಲಿಗೆ ತೀವ್ರ ಗಾಯವಾಗಿದ್ದು ನಡೆಯಲೂ ಸಾಧ್ಯವಾಗುತ್ತಿಲ್ಲ. ಮತಾಂತರಕ್ಕೆ ನನ್ನ ತಮ್ಮ ಕಿರುಕುಳ ನೀಡುತ್ತಿದ್ದಾನೆ ಎಂದು ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನ ಆಗುತ್ತಿಲ್ಲ. ಅಣ್ಣ-ತಮ್ಮನ ಜಗಳ ಎಂದು ನೀವೇ ರಾಜಿ ಮಾಡಿಕೊಳ್ಳಿ ಎಂದು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈಗ ಹಲ್ಲೆಯ ಬಳಿಕ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ.
ಕೂಡಲೇ ಆತನನ್ನು ಬಂಧಿಸಿ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು,” ಮನವಿ ಮಾಡಿದರು. ಯದುನಂದನ್ ಪತ್ನಿ ಸುಧಾರಾಣಿ ಮಾತನಾಡಿ, ”ನನ್ನ ಪತಿ ಇಲ್ಲದ ಸಮಯದಲ್ಲಿ ಮನೋಹರ ಕಿರುಕುಳ ನೀಡುತ್ತಿದ್ದರು. ಮತಾಂತರಕ್ಕೆ ಒಪ್ಪದಿದ್ದಾಗ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸಿ ಕಿರುಕುಳ ನೀಡುತ್ತಿದ್ದಾರೆ,”ಎಂದು ದೂರಿದರು.
40 ಕುಟುಂಬ ಮತಾಂತರ!
ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕಿನಲ್ಲಿ ವಾಸವಿರುವ 300 ಕುಟುಂಬಗಳ ಪೈಕಿ 40 ಕುಟುಂಬಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದೂ ಅಲ್ಲಿನ ನಿವಾಸಿ ಕೆ.ಯದುನಂದನ್ ಆರೋಪಿಸಿದರು. ಗೋಷ್ಠಿಯಲ್ಲಿ ಯದುನಂದನ್ ಪುತ್ರಿ ಶಿಲ್ಪಾ, ಅಳಿಯ ಚಂದ್ರಶೇಖರ್ ಇದ್ದರು.
ಮತಾಂತರ ನಿಷೇಧ ಕಾಯ್ದೆ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಈ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಇದೀಗ ಭಾರೀ ಸಂಚಲನ ಸೃಷ್ಟಿಸಿದೆ.
Read more
[wpas_products keywords=”deal of the day sale today offer all”]