Karnataka news paper

ಒಂದಲ್ಲ, ಎರಡಲ್ಲ, 11 ಡೋಸ್ ಕೋವಿಡ್ ಲಸಿಕೆ ಪಡೆದ ಅಜ್ಜ!: ತನಿಖೆಗೆ ಆದೇಶ


ಹೈಲೈಟ್ಸ್‌:

  • 11 ಡೋಸ್ ಲಸಿಕೆ ಪಡೆದಿರುವುದಾಗಿ ಬಿಹಾರದ ಮಾಧೆಪುರದ ಅಜ್ಜನ ಹೇಳಿಕೆ
  • ಪ್ರತಿ ಡೋಸ್ ಬಳಿಕವೂ ಆರೋಗ್ಯದಲ್ಲಿ ಬಹಳ ಸುಧಾರಣೆಯಾಗಿದೆ ಎಂದ ವೃದ್ಧ
  • 12ನೇ ಡೋಸ್ ಲಸಿಕೆ ಪಡೆಯಲು ನೋಂದಣಿ ಮಾಡುವಾಗ ಸಿಕ್ಕಿಕೊಂಡ ವ್ಯಕ್ತಿ
  • ಒಂದೇ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಬಳಸಿದ್ದ ಚಾಲಾಕಿ ವೃದ್ಧ

ಪಟ್ನಾ: ತಾನು ಕೋವಿಡ್ 19 ಲಸಿಕೆಯ 11 ಡೋಸ್‌ಗಳನ್ನು ಪಡೆದುಕೊಂಡಿರುವುದಾಗಿ ಬಿಹಾರದ 84 ವರ್ಷದ ವ್ಯಕ್ತಿಯೊಬ್ಬರು ಹೇಳಿಕೊಂಡಿರುವುದು ತೀವ್ರ ಚರ್ಚೆಗೆ ಒಳಗಾಗಿದೆ. ಮಾಧೆಪುರ ಜಿಲ್ಲೆಯ ಪುರೈನಿ ಪೊಲೀಸ್ ಠಾಣೆ ವ್ಯಾಪ್ತಿಯ ಓರಾಯ್ ಗ್ರಾಮದ ವೃದ್ಧ ಬ್ರಹ್ಮದೇವ್ ಮಂಡಲ್ ಎಂಬುವವರು ತಾವು ಈವರೆಗೂ 11 ಡೋಸ್ ಕೋವಿಡ್ ಲಸಿಕೆ ಪಡೆದಿಕೊಂಡಿರುವುದಾಗಿ ತಿಳಿಸಿದ್ದರು. ಅಲ್ಲದೆ, ಹಲವು ಡೋಸ್‌ಗಳನ್ನು ಪಡೆದುಕೊಂಡ ಬಳಿಕ ತಮ್ಮ ವಿವಿಧ ಆರೋಗ್ಯ ಸಮಸ್ಯೆಗಳು ಸುಧಾರಿಸಿರುವುದಾಗಿ ಹೇಳಿಕೊಂಡಿದ್ದರು.

ಮಂಡಲ್ ಅವರ ಹೇಳಿಕೆ ನಿಜವೋ ಅಥವಾ ಸುಳ್ಳೋ. ಆದರೆ ತನಿಖೆಗೆ ಒಳಪಡಬೇಕಿದೆ. ಆಸ್ಪತ್ರೆಯ ದಾಖಲೆಗಳನ್ನು ನಾವು ಪರಿಶೀಲಿಸುತ್ತೇವೆ. ಅವರು ಹೇಳಿಕೊಂಡಿರುವುದು ಸತ್ಯ ಎನ್ನುವುದು ಸಾಬೀತಾದರೆ ಇದಕ್ಕೆ ಸಂಬಂಧಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಧೆಪುರ ಸಿವಿಲ್ ಸರ್ಜನ್ ಡಾ. ಅಮರೇಂದ್ರ ಪ್ರತಾಪ್ ಶಾಹಿ ತಿಳಿಸಿದ್ದಾರೆ.
ಏಳು ತಿಂಗಳ ಬಳಿಕ ಮತ್ತೆ ಲಕ್ಷದ ಗಡಿ ದಾಟಿದ ಕೋವಿಡ್ ಕೇಸ್: ಶೇ 28ರಷ್ಟು ಏರಿಕೆ
ಬ್ರಹ್ಮದೇವ್ ಅವರ ತಮ್ಮ 12 ಡೋಸ್ ಲಸಿಕೆ ಪಡೆದುಕೊಳ್ಳುವುದಕ್ಕಾಗಿ ಮಂಗಳವಾರ ತೆರಳಿದ್ದಾಗ ಈ ವಿಚಿತ್ರ ಸಂಗತಿ ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿ ಒಂದೇ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಫೋನ್ ಸಂಖ್ಯೆ ಬಳಸಿ ಅಷ್ಟೊಂದು ಡೋಸ್ ಲಸಿಕೆ ಪಡೆಯುವುದು ಹೇಗೆ ಸಾಧ್ಯ ಎನ್ನುವುದು ಅಧಿಕಾರಿಗಳಿಗೆ ಸವಾಲಿನ ಪ್ರಶ್ನೆಯಾಗಿದೆ. ವಿಶೇಷವೆಂದರೆ ಅವರು ಎಲ್ಲ ಕಡೆಯೂ ಕೋವ್ಯಾಕ್ಸಿನ್ ಲಸಿಕೆಯನ್ನೇ ಪಡೆದುಕೊಂಡಿದ್ದಾರೆ.

ಬ್ರಹ್ಮದೇವ್ ಅವರು ವಿಭಿನ್ನ ದಿನಾಂಕಗಳಲ್ಲಿ ಬೇರೆ ಬೇರೆ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆದುಕೊಂಡಿದ್ದಾರೆ. ‘ನಾನು ಎಲ್ಲ ಲಸಿಕೆ ಕೇಂದ್ರಗಳಲ್ಲಿಯೂ ಒಂದೇ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಗಳನ್ನು ನೀಡಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ತಾವು ಲಸಿಕೆ ಪಡೆದ ಎಲ್ಲ ದಿನಾಂಕಗಳನ್ನೂ ಅವರು ದಿನಚರಿಯಲ್ಲಿ ಬರೆದಿಟ್ಟಿದ್ದು, ಅದನ್ನು ಮಾಧ್ಯಮಗಳಿಗೆ ತೋರಿಸಿದರು. 2021ರ ಫೆಬ್ರವರಿ 13ರಂದು ಅವರು ಮೊದಲ ಡೋಸ್ ಲಸಿಕೆ ಪಡೆದಿದ್ದರು. ಬಳಿಕ ಮಾರ್ಚ್ 13ರಂದು ಅದೇ ಕೇಂದ್ರದಲ್ಲಿ ಎರಡನೇ ಡೋಸ್ ಪಡೆದಿದ್ದರು. ಮೇ 19ರಂದು ಲಸಿಕೆ ಪಡೆಯಲು ಬೇರೆ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಜೂನ್ 16ರಂದು ಸ್ಥಳೀಯ ಪಿಡಿಎಸ್ ನಾಯಕ ಭೂಪೇಂದ್ರ ಭಗತ್ ಅವರ ಮನೆ ಬಾಗಿಲಿನಲ್ಲಿ ಸ್ಥಾಪಿಸಿದ್ದ ಕೇಂದ್ರದಲ್ಲಿ ನಾಲ್ಕನೇ ಡೋಸ್ ಪಡೆದಿದ್ದರು.
Precaution Dose: 60 ವರ್ಷ ದಾಟಿದವರಿಗೆ ‘ಮುಂಜಾಗ್ರತಾ ಡೋಸ್‌’ನಲ್ಲಿ ವಿಶೇಷ ವಿನಾಯಿತಿ
ಜುಲೈ 24ರಂದು ಪುರೈನಿ ಬಡಿ ಹಾತ್ ಶಿಬಿರಕ್ಕೆ ತೆರಳಿ ಐದನೇ ಡೋಸ್ ಪಡೆದಿದ್ದರು. ಆಗಸ್ಟ್ 31ರಂದು ಸ್ಥಳೀಯ ನಾತ್ ಬಾಬಾ ದೇಗುಲದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಆರನೇ ಡೋಸ್ ತೆಗೆದುಕೊಂಡಿದ್ದರು. ಸೆ. 11 ಮತ್ತು 22ರಂದು ಹತ್ತೇ ದಿನಗಳ ಅಂತರದಲ್ಲಿ ಬರಿ ಹಾತ್ ಶಾಲಾ ಶಿಬಿರದಲ್ಲಿ 7 ಮತ್ತು 8ನೇ ಡೋಸ್ ಪಡೆದುಕೊಂಡಿದ್ದರು. ಸೆ. 24ರಂದು ಕಲಾಸನ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 9ನೇ ಡೋಸ್ ಪಡೆದಿದ್ದರು.

‘ಮೊದಲ ಡೋಸ್ ಪಡೆಯುವ ಮುನ್ನ ನನಗೆ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಎರಡನೇ ಡೋಸ್ ಬಳಿಕ ನನ್ನ ಆರೋಗ್ಯ ಸಾಕಷ್ಟು ಸುಧಾರಿಸಿತು. ಹೀಗಾಗಿ ಮತ್ತೊಂದು ಡೋಸ್ ಪಡೆಯಲು ಬಯಸಿದ್ದೆ. ನಾಲ್ಕು ಬಾರಿ ಆಧಾರ್ ಕಾರ್ಡ್ ಮತ್ತು ಎರಡು ಬಾರಿ ವೋಟರ್ ಐಡಿಯನ್ನು ಬಳಸಿ ಲಸಿಕೆ ತೆಗೆದುಕೊಂಡಿದ್ದೆ. ಪ್ರತಿ ಬಾರಿಯೂ ಆನ್‌ಲೈನ್‌ನಲ್ಲಿ ನೋಂದಣಿ ಮಾಡುತ್ತಿದ್ದು, ಲಸಿಕೆಯ ಇತಿಹಾಸವನ್ನು ಗುರುತಿಸುವಲ್ಲಿ ಅದು ವಿಫಲವಾಗಿರಬಹುದು. ಜ. 4ರಂದು 12ನೇ ಡೋಸ್ ಪಡೆಯುವಾಗ ಮಾತ್ರವೇ ಅದು ಗೊತ್ತಾಗಿದೆ’ ಎಂದು ತಿಳಿಸಿದ್ದಾರೆ.
ಇಟಲಿಯಿಂದ ಅಮೃತಸರಕ್ಕೆ ಬಂದ 125 ವಿಮಾನ ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್!
ಅಂಚೆ ಇಲಾಖೆಯಲ್ಲಿ ನೌಕರರಾಗಿ ನಿವೃತ್ತರಾಗಿರುವ ಬ್ರಹ್ಮದೇವ್ ಅವರು, ತಮ್ಮ ಸಾಮಾನ್ಯ ಆರೋಗ್ಯ ಸ್ಥಿತಿ ಸಾಕಷ್ಟು ಸುಧಾರಿಸಿದೆ. ಸಂಧು ನೋವು ಬಹಳ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಅವರು ತಾವು ಪಡೆದುಕೊಂಡ ಎಲ್ಲ 11 ಡೋಸ್‌ಗಳ ಪ್ರಮಾಣಪತ್ರಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ. ಲಸಿಕೆ ಅಭಿಯಾನ ಆರಂಭವಾಗಿ ಒಂದು ವರ್ಷ ಕಳೆದರೂ ಅನೇಕರು ಈಗಲೂ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವು ಕಡೆ ಬೇರೆಯವರ ಹೆಸರಿನಲ್ಲಿ ನಕಲಿ ಪ್ರಮಾಣಪತ್ರಗಳು ತಯಾರಾಗುತ್ತಿವೆ. ಈ ನಡುವೆ ವೃದ್ಧರೊಬ್ಬರು ಪದೇ ಪದೇ ಲಸಿಕೆ ಪಡೆದುಕೊಂಡು, ತಮ್ಮ ಆರೋಗ್ಯ ಸುಧಾರಣೆ ಆಗಿದೆ ಎನ್ನುತ್ತಿರುವುದು ಕುತೂಹಲ ಮೂಡಿಸಿದೆ.



Read more

[wpas_products keywords=”deal of the day sale today offer all”]