ಮೇಕೆದಾಟು ಕನಸು ಕಂಡವರು 1995ರಲ್ಲಿ ಸಿಎಂ ಆಗಿದ್ದ ಹೆಚ್.ಡಿ.ದೇವೇಗೌಡರು ಎಂದಿರುವ ಜೆಡಿಎಸ್, ಆ ಯೋಜನೆಯ ಸಮಗ್ರ ಯೋಜನಾ ವರದಿ -DPR ಮಾಡಿ ಕೇಂದ್ರಕ್ಕೆ ಕಳಿಸಿದ್ದು 2018ರಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು. 2017ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಳಿಸಿದ್ದು ಕೇವಲ PFR ಮಾತ್ರ. ಬೆಂಗಳೂರಿನಲ್ಲೇ ಇದ್ದ ಕೇಂದ್ರ ಜಲ ಆಯೋಗದ ಪ್ರಾದೇಶಿಕ ಕಚೇರಿಗೆ PFR ಕೊಟ್ಟು ಕೈ ತೊಳೆದುಕೊಂಡ ಅವರ ಸರಕಾರ, ಆ ಪ್ರಾದೇಶಿಕ ಕಚೇರಿ ಕೇಳಿದ ಯಾವ ಪ್ರಶ್ನೆಗೂ ಉತ್ತರ ಕೊಡಲಿಲ್ಲ ಎಂದು ಟೀಕಿಸಿದೆ.
ಅಲ್ಲದೇ, 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಅದ ಮೇಲೆ ಪುನಃ PFR ಸಲ್ಲಿಸಿದ ಮೇಲೆ DPR ಸಲ್ಲಿಕೆಗೆ ಅವಕಾಶ ಸಿಕ್ಕಿತು. ಆಗ ಕುಮಾರಸ್ವಾಮಿ ಅವರ ಸರಕಾರ ತಡ ಮಾಡದೇ DPR ಸಿದ್ದಪಡಿಸಿ ಸಲ್ಲಿಸಿತು. ಮೇಕೆದಾಟು ಯೋಜನೆಗೆ DPR ಮಾಡಿದ್ದು ಹೆಚ್.ಡಿ.ಕುಮಾರಸ್ವಾಮಿ ಅವರ ಸರಕಾರ ಎಂದು ನಿನ್ನೆ ಜಲ ಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳ ಅವರೇ ದಾಖಲೆಗಳ ಸಮೇತ ಹೇಳಿದ್ದಾರೆ. ಐದು ವರ್ಷ ಸುಳ್ಳು ಸಿದ್ದಯ್ಯ ಮಾಡಿದ್ದೇನು ಇಲ್ಲ ಎಂದು ಕಡ್ಡಿ ಮುರಿದಂತೆ ತಿಳಿಸಿದ್ದಾರೆ. ಹೀಗಿದ್ದರೂ ಸುಳ್ಳು ಸಿದ್ದಯ್ಯ ನಾವೇ DPR ಮಾಡಿದ್ದು ಎಂದು ಬೂಸಿ ಬಿಡುತ್ತಿದ್ದಾರೆ. ಅವರಿಗೆ PFR ಎಂಬುದು DPR ಆಗಿದ್ದು ಹೇಗೆ? ಐದು ವರ್ಷ ಸಿಎಂ ಆಗಿದ್ದ ವ್ಯಕ್ತಿಗೆ ಇವೆರಡಕ್ಕೂ ಇರುವ ವ್ಯತ್ಯಾಸ ತಿಳಿಯದೇ? ಎಂದು ಪ್ರಶ್ನಿಸಿದೆ.
ತಮ್ಮ ತಪ್ಪು ಮುಚ್ಚಿಕೊಳ್ಳಲು ಈಗ ದೇವೇಗೌಡರನ್ನು ಸುಳ್ಳು ಸಿದ್ದಯ್ಯ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿರುವ ಜೆಡಿಎಸ್, ಮೋದಿ ಅವರಿಗೆ ಗೌಡರು ಅಪ್ತರು. ಮೇಕೆದಾಟು ಯೋಜನೆಗೆ ಕೇಂದ್ರದ ಒಪ್ಪಿಗೆಯನ್ನು ಗೌಡರೇ ಕೊಡಿಸಲಿ ಎಂದು ಹೇಳಿದ್ದಾರೆ. ಹಾಗಾದರೆ, ಈ ಕೆಲಸ ಗೌಡರಿಂದ ಮಾತ್ರ ಆಗುವುದು ಎಂದು ಅವರು ಒಪ್ಪಿಕೊಂಡ ಹಾಗಾಯಿತು. ಹಾಗಾದರೆ ಪಾದಯಾತ್ರೆ ಏತಕ್ಕೆ? ಆಡಳಿತಾತ್ಮಕ, ಕಾನೂನು ಹಾಗೂ ತಾಂತ್ರಿಕ ಅಂಶಗಳ ಆಧಾರದ ಮೇಲೆ ದೇವೇಗೌಡರಿಗೆ ಯಾವಾಗ ಏನು ಹೆಜ್ಜೆ ಇಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಅದು ಅನೇಕ ಯೋಜನೆಗಳಲ್ಲಿ ಸಾಬೀತಾಗಿದೆ. ಆ ಬಗ್ಗೆ ಸಿದ್ದರಾಮಯ್ಯ ಅವರು ಹೇಳಬೇಕಾದ ಅಗತ್ಯ ಇಲ್ಲ ಎಂದು ಟ್ವೀಟ್ ಮಾಡಿದೆ.
ಹೀಗಿದ್ದರೂ ರಾಜ್ಯ ನೀರಾವರಿಗೆ ಹೆಚ್.ಡಿ.ದೇವೇಗೌಡರ ಕೊಡುಗೆಯನ್ನು ಉಪೇಕ್ಷಿಸಿ ಸುಳ್ಳುಗಳ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುವುದು ರಾಜ್ಯಕ್ಕೆ ಮಾಡುವ ದ್ರೋಹ ಎಂದಿರುವ ಜೆಡಿಎಸ್, ಇನ್ನಾದರೂ ಸುಳ್ಳು ಹೇಳುವುದು ಬಿಟ್ಟರೆ ಒಳಿತು. ಇಲ್ಲವಾದರೆ ಜನರೇ ಸುಳ್ಳಯ್ಶನ ನಾಲಿಗೆಗೆ ಬುದ್ಧಿ ಕಲಿಸಲಿದ್ದಾರೆ. ಪಾದಯಾತ್ರೆಯಿಂದ ಮೇಕೆದಾಟು ಯೋಜನೆಗೆ ಚಿಕ್ಕಾಸು ಉಪಯೋಗವಿಲ್ಲ. ಆ ಪಾದಯಾತ್ರೆಯ ಪೆಟ್ಟು ಜನರ ಮೇಲೆ ಬೀಳಲಿದೆ. ಅದರ ತೀವ್ರತೆ ಗೊತ್ತಾದ ಮೇಲೆ ಮುಂದೆ ಜನರೇ ಕಾಂಗ್ರೆಸ್ ನಾಯಕರ ಮುಖಕ್ಕೆ ಮಂಗಳಾರತಿ ಮಾಡಲಿದ್ದಾರೆ ಎಂದು ಟೀಕಿಸಿದೆ.
Read more
[wpas_products keywords=”deal of the day sale today offer all”]