Karnataka news paper

ಟ್ವಿಟರ್‌ನಲ್ಲಿ ದಾಖಲೆ ಬರೆದ ‘ಬೀಸ್ಟ್’ ಪೋಸ್ಟರ್‌; ‘ಪುಷ್ಪ’ ತಂಡಕ್ಕೆ ದುಬಾರಿ ಗಿಫ್ಟ್ ನೀಡಿದ ‘ಐಕಾನ್ ಸ್ಟಾರ್’!


ಹೈಲೈಟ್ಸ್‌:

  • ‘ಪುಷ್ಪ’ ಚಿತ್ರತಂಡಕ್ಕೆ ದುಬಾರಿ ಉಡುಗೋರೆ ನೀಡಿದ ನಟ ಅಲ್ಲು ಅರ್ಜುನ್
  • ಈ ವರ್ಷ ಅತೀ ಹೆಚ್ಚು ಟ್ವೀಟ್ ಆದ ಸಿನಿಮಾ ಪೋಸ್ಟರ್‌ಗಳ ಪಟ್ಟಿ ರಿಲೀಸ್ ಮಾಡಿದ ಟ್ವಿಟರ್‌
  • ಬಾಕ್ಸ್ ಆಫೀಸ್‌ನಲ್ಲಿ ‘ಅಖಂಡ’ ಮಾಡಿರುವ ದಾಖಲೆ ಕಂಡು ಟಾಲಿವುಡ್‌ ಶಾಕ್‌

ಮದಿರಿ
‘ದಳಪತಿ’ ವಿಜಯ್‌ ಅಭಿನಯದ ‘ಬೀಸ್ಟ್‌’ ಸಿನಿಮಾದ ಪೋಸ್ಟರ್‌ ಸೃಷ್ಟಿಸಿದ ಸಂಚಲನ ಕಂಡು ಟ್ವಿಟರ್‌ ದಂಗಾಗಿದೆ. ತಮಿಳು ಚಿತ್ರರಂಗದ ಎಂಟರ್ಟೇನ್‌ಮೆಂಟ್‌ ವಿಭಾಗದಲ್ಲಿ ಮೂರನೇ ಮೋಸ್ಟ್‌ ಟ್ವೀಟೆಡ್‌ ಪೋಸ್ಟರ್‌ ಎಂದು ಅದು ಅಧಿಕೃತವಾಗಿ ಹೇಳಿಕೆ ಕೊಟ್ಟಿದೆ. ತಮಿಳು ಮಾತ್ರವಲ್ಲ, ತೆಲುಗಿನಲ್ಲೂ ಈ ಚಿತ್ರದ ಪೋಸ್ಟರ್‌ಗಳು ಹವಾ ಸೃಷ್ಟಿಸಿವೆ. ಪವನ್‌ ಕಲ್ಯಾಣ್‌ ಅಭಿನಯದ ‘ವಕೀಲ್‌ ಸಾಬ್‌’ ಚಿತ್ರದ ಪೋಸ್ಟರ್‌ ಹಾಗೂ ಮಹೇಶ್‌ ಬಾಬು ಅಭಿನಯದ ‘ಸರ್ಕಾರು ವಾರಿ ಪಾಠ’ ಚಿತ್ರದ ಪೋಸ್ಟರ್‌ಗಳು ಅತಿ ಹೆಚ್ಚು ಟ್ವೀಟ್‌ ಆದ ಪೋಸ್ಟರ್‌ಗಳಾಗಿವೆ. ನಿರ್ಮಾಪಕರು ಜನವರಿಯಲ್ಲಿ ಈ ಚಿತ್ರಗಳನ್ನು ರಿಲೀಸ್‌ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಚಿನ್ನದ ಉಡುಗೊರೆ!
ಅಲ್ಲುಅರ್ಜುನ್‌ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗಲಿದೆ. ಇದು ಹೊಸ ವಿಷಯವೇನೂ ಅಲ್ಲ. ವಿಷಯ ಏನಂದ್ರೆ, ನಟ ಅಲ್ಲುಅರ್ಜುನ್‌ ಈ ಚಿತ್ರದಲ್ಲಿ ದುಡಿದ ನಿಷ್ಠಾವಂತ ಕಾರ್ಮಿಕರಿಗೆ 10 ಗ್ರಾಂ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಸಿನಿಮಾದಲ್ಲಿ ನಟಿ ಸಮಂತಾ ಹಾಗೂ ಅಲ್ಲು ಅಭಿನಯದ ಸ್ಪೆಷಲ್‌ ಸಾಂಗ್‌ಗೆ ರಾಮೋಜಿ ರಾವ್‌ ಸ್ಟುಡಿಯೋದಲ್ಲಿಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗಿತ್ತು. ಅಲ್ಲುಅವರು ಇದರ ಶೂಟಿಂಗ್‌ ನೋಡಿ ಇಂಪ್ರೆಸ್‌ ಆಗಿದ್ದು, ಈ ಹಾಡಿನ ಚಿತ್ರೀಕರಣ ಇಷ್ಟೊಂದು ಚೆನ್ನಾಗಿ ಬರಲು ಕಾರಣರಾದವರಿಗೆ ಚಿನ್ನದ ಉಂಗುರ ನೀಡಿದ್ದಾರೆ.

ಅಖಂಡ ಹವಾ
ಬಾಲಕೃಷ್ಣ ಅಭಿನಯದ ‘ಅಖಂಡ’ ಚಿತ್ರ ತೆಲುಗಿನಲ್ಲಿ ಸೂಪರ್‌ಹಿಟ್‌ ಆಗಿದೆ. ಇದು ಹಿಂದಿಯಲ್ಲೂ ರಿಮೇಕ್‌ ಆಗಲಿದೆ. ಈ ಸಿನಿಮಾದ ಹವಾ ಕಂಡು ತೆಲುಗು ಚಿತ್ರರಂಗ ಮೂಕವಿಸ್ಮಿತವಾಗಿದೆ. ಇದೇ ರೀತಿ ಮಾಲಿವುಡ್‌ ಚಿತ್ರರಂಗದವರು ಹಿಂದಿ ಚಿತ್ರರಂಗಕ್ಕೆ ಹೋಗುವುದು ಹೊಸ ವಿಷಯವೇನೂ ಅಲ್ಲ. ಮೋಹನ್‌ಲಾಲ್‌ ಅವರಿಂದ ಹಿಡಿದು ದುಲ್ಕರ್‌ ಸಲ್ಮಾನ್‌ರವರೆಗೆ ಎಲ್ಲರೂ ಹಿಂದಿ ಚಿತ್ರರಂಗದ ರುಚಿ ನೋಡಿ ಬಂದವರೇ ಆಗಿದ್ದಾರೆ. ಇದಕ್ಕೆ ಈಗ ಹೊಸ ಸೇರ್ಪಡೆ ರೆಹಮಾನ್‌. ಮಾಲಿವುಡ್‌ನ ಎವರ್‌ಗ್ರೀನ್‌ ಹೀರೋ ಆಗಿರುವ ಅವರು ಬಾಲಿವುಡ್‌ನಲ್ಲಿ ನಟ ಟೈಗರ್‌ ಶ್ರಾಫ್‌ ಜತೆಗೆ ‘ಗಣ್‌ಪತ್‌’ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಲಂಡನ್‌ನಲ್ಲಿ ಶೂಟಿಂಗ್‌ ಮುಗಿಸಿಕೊಂಡು ಬಂದಿರುವ ಅವರು ಆ ಚಿತ್ರರಂಗದವರ ಶಿಸ್ತನ್ನು ಕೊಂಡಾಡಿದ್ದಾರೆ.

2021ರಲ್ಲಿ ಟ್ವಿಟರ್‌ನಲ್ಲಿ ಚರ್ಚೆಯಾದ ‘ದಕ್ಷಿಣ ಭಾರತದ ಟಾಪ್ 10’ ಸಿನಿಮಾಗಳ ಪಟ್ಟಿ ಇಲ್ಲಿದೆ

‘ಪೊನ್ನಿಯನ್ ಸೆಲ್ವನ್’ ಚಿತ್ರ ಯಾವಾಗ ರಿಲೀಸ್?
ಮಣಿರತ್ನಂ ನಿರ್ದೇಶನದ ‘ಪೊನ್ನಿಯನ್ ಸೆಲ್ವನ್’ ಚಿತ್ರ ಯಾವಾಗ ರಿಲೀಸ್‌ ಆಗಲಿದೆ? ಈ ಪ್ರಶ್ನೆಗೆ ಸ್ವತಃ ಮಣಿರತ್ನಂ ಬಳಿಯೇ ಉತ್ತರವಿಲ್ಲ. ಯಾಕೆಂದರೆ ಈ ಚಿತ್ರದ ಕಥೆಯೇ ಅಂಥದ್ದು. ಕಲ್ಕಿ ಕೃಷ್ಣಮೂರ್ತಿ ಕಾದಂಬರಿ ಆಧರಿತ ‘ಪೊನ್ನಿಯನ್ ಸೆಲ್ವನ್’ ಸಿನಿಮಾ ಕಥೆಯನ್ನು ಎರಡು ಭಾಗಗಳಲ್ಲಿ ಶೂಟಿಂಗ್‌ ಮಾಡಲಾಗಿದೆ. ಈಗ ಶೂಟಿಂಗ್‌ ಮುಗಿಸಿ, ರೀ-ರೆಕಾರ್ಡಿಂಗ್‌ ಕೆಲಸ ನಡೆಯುತ್ತಿದೆ. ಇತ್ತೀಚೆಗೆ ಈ ಚಿತ್ರದ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಅವರು ಮಣಿರತ್ನಂ ಯಾವ ರೀತಿಯ ಸಂಗೀತ ಬೇಕು ಎಂದು ವಿವರಣೆ ಕೊಡುತ್ತಿದ್ದ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಮತ್ತು ಅವರಿಗಿರುವ ಸಂಗೀತ ಜ್ಞಾನವನ್ನು ಕೊಂಡಾಡಿದ್ದರು. ಈ ಚಿತ್ರದಲ್ಲಿ ವಿಕ್ರಮ್‌, ಐಶ್ವರ್ಯಾ ರೈ, ಜಯಂ ರವಿ, ಕಾರ್ತಿ ಮುಂತಾದ ದೊಡ್ದ ಸ್ಟಾರ್‌ಗಳೇ ಇದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ.

‘ಪುಷ್ಪ’ ಚಿತ್ರದ ಐಟಂ ಸಾಂಗ್ ಮೂಲಕ ಸದ್ದು ಮಾಡಿದ ಗಾಯಕಿ ಮಂಗ್ಲಿ ಸಹೋದರಿ ಇಂದ್ರವತಿ!



Read more