Karnataka news paper

ಮುಖ್ಯಮಂತ್ರಿ ಹಣ ಕೊಟ್ರೆ ಓಡುತ್ತದೆ ರೈಲು: ಯಲವಗಿ-ಗದಗ ಮಾರ್ಗ ನೆನೆಗುದಿಗೆ!


ಹೈಲೈಟ್ಸ್‌:

  • ಕೇಂದ್ರ ಒಪ್ಪಿದ್ದರೂ ರಾಜ್ಯ ಸರಕಾರ ತನ್ನ ಪಾಲಿನ ಹಣ ನೀಡದಿರುವುದಕ್ಕೆ ಯಲವಗಿ-ಗದಗ ರೈಲ್ವೆ ಕನಸು ಕಂಡವರು ಆಕ್ರೋಶಗೊಂಡಿದ್ದಾರೆ
  • 2017 ರ ರೈಲ್ವೆ ಬಜೆಟ್‌ನಲ್ಲಿ 650 ಕೋಟಿ ರೂಪಾಯಿಗಳ ಕಾಮಗಾರಿಗೆ ಕೇಂದ್ರ ಗ್ರೀನ್‌ ಸಿಗ್ನಲ್‌ ನೀಡಿದೆ
  • ಕೆಲಸ ಆರಂಭಿಸಲು ರಾಜ್ಯ ಸರಕಾರದ ಅರ್ಧ ಪಾಲಿನ ವಂತಿಕೆಗೆ ರೈಲ್ವೆ ಬೋರ್ಡ್‌ ಕಾಯುತ್ತಿದೆ

ರಾಜು ನದಾಫ ಹಾವೇರಿ
ಹಾವೇರಿ: ಕೇಂದ್ರ ಒಪ್ಪಿದ್ದರೂ ರಾಜ್ಯ ಸರಕಾರ ತನ್ನ ಪಾಲಿನ ಹಣ ನೀಡದಿರುವುದಕ್ಕೆ ಯಲವಗಿ-ಗದಗ ರೈಲ್ವೆ ಕನಸು ಕಂಡವರು ಆಕ್ರೋಶಗೊಂಡಿದ್ದಾರೆ. ಬಜೆಟ್‌ ಸಮೀಪಿಸುತ್ತಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಣ ಕೊಟ್ಟರೆ ಮಾತ್ರ ಈ ರೈಲು ಓಡಬಹುದಾಗಿದೆ.

ರೈಲ್ವೆ ಮಾರ್ಗಕ್ಕೆ 650 ಕೋಟಿ

2017 ರ ರೈಲ್ವೆ ಬಜೆಟ್‌ನಲ್ಲಿ 650 ಕೋಟಿ ರೂಪಾಯಿಗಳ ಕಾಮಗಾರಿಗೆ ಕೇಂದ್ರ ಗ್ರೀನ್‌ ಸಿಗ್ನಲ್‌ ನೀಡಿದೆ. ಹೊಸ ಮಾರ್ಗ ಸರ್ವೆ ಕಾರ್ಯ ಮುಕ್ತಾಯಗೊಂಡಿದೆ. ಕೆಲಸ ಆರಂಭಿಸಲು ರಾಜ್ಯ ಸರಕಾರದ ಅರ್ಧ ಪಾಲಿನ ವಂತಿಕೆಗೆ ರೈಲ್ವೆ ಬೋರ್ಡ್‌ ಕಾಯುತ್ತಿದೆ. ಸಕಾಲಕ್ಕೆ ಹಣ ಬಂದಲ್ಲಿ 3 ವರ್ಷದಲ್ಲಿ ಹೊಸ ಮಾರ್ಗದಲ್ಲಿ ರೈಲು ಓಡಲಿದೆ. ಈ ಯೋಜನೆ ಜತೆಗೆ ಘೋಷಣೆಯಾದ ರಾಣೇಬೆನ್ನೂರ-ಶಿವಮೊಗ್ಗ ನಂತರ ಘೋಷಣೆಯಾದ ಗದಗ-ವಾಡಿ ರೈಲು ಮಾರ್ಗಕ್ಕೆ ರಾಜ್ಯ ಸರಕಾರ ತನ್ನ ಪಾಲಿನ ಶೇ.50 ರಷ್ಟು ವಂತಿಕೆ ನೀಡಿದ್ದು, ಗದಗ-ಯಲವಗಿ ರೈಲು ಮಾರ್ಗಕ್ಕೆ ಅನುದಾನ ನೀಡುವಲ್ಲಿ ನಿರ್ಲಕ್ಷ್ಯ ತೋರಿರುವುದೇ ಯಕ್ಷ ಪ್ರಶ್ನೆಯಾಗಿದೆ.
ಹರಿಹರ – ಶಿವಮೊಗ್ಗ ರೈಲು ಮಾರ್ಗ ಕನಸಾಗೇ ಉಳಿಯುತ್ತಾ..? ಭತ್ತದ ಕಣಜದ ದಶಕದ ಬೇಡಿಕೆ ಈಡೇರಲ್ವಾ..?
ಮಾರ್ಗ ಸಂಚಾರ ಹೇಗೆ?
ಯಲವಗಿ-ಮಂಜಲಾಪುರ, ಮಾಗಡಿ, ಮುಳಗುಂದ ಹಾಗೂ ಗದಗ ರೈಲ್ವೆ ನಿಲ್ದಾಣ ತಲಪುವ ಈ ಮಾರ್ಗ 52 ಕಿ.ಮೀ. ವಿಸ್ತೀರ್ಣ ಒಳಗೊಂಡಿದೆ. ಭೂಸ್ವಾಧೀನಕ್ಕೂ ಯಾವ ಅಡ್ಡಿ-ಆತಂಕಗಳಿಲ್ಲ ಎನ್ನುವುದು ಸಹ ಸಾಬೀತಾಗಿದೆ. ಗದಗ-ಯಲವಗಿ ರೈಲು ಮಾರ್ಗದಿಂದ ಬಾಗಲಕೋಟೆ ಮತ್ತು ಯಲವಗಿ ಭಾಗದ ಪ್ರಯಾಣಿಕರು ಬೆಂಗಳೂರು ತಲುಪಲು 100 ಕಿ.ಮೀ. ದೂರ ಜತೆಗೆ ಪ್ರಯಾಣ ವೆಚ್ಚ ಸಹ ಕಡಿಮೆಯಾಗಲಿದೆ. ಈ ಎಲ್ಲ ಕಾರಣಗಳಿಗಾಗಿ ಹೊಸ ರೈಲು ಮಾರ್ಗ ಬೇಕೆನ್ನುವುದು ಪ್ರಯಾಣಿಕರ ಸಮರ್ಥನೆ.
ಮೊದಲ ರೈಲಿಗೆ ಗ್ರೀನ್‌ ಸಿಗ್ನಲ್‌?; ಫೆಬ್ರವರಿಯಲ್ಲಿ ಹುಬ್ಬಳ್ಳಿ- ತಳಕಲ್‌- ಕುಕನೂರು ಮಾರ್ಗವಾಗಿ ಯಲಬುರ್ಗಾವರೆಗೆ ಸಂಚಾರ!
ಒಟ್ಟಿನಲ್ಲಿ ಈಗ ರಾಜ್ಯದ ಬಜೆಟ್‌ ಮಂಡನೆಯಾಗಲಿದೆ. ಈ ವೇಳೆ ಗದಗ-ಯಲವಗಿ ರೈಲು ಮಾರ್ಗದ ಕನಸು ನನಸಾಗಿಸುವಲ್ಲಿ ಸಂಸದ ಶಿವಕುಮಾರ ಉದಾಸಿ ಹಾಗೂ ರಾಜ್ಯದ ಪಾಲು ಕೊಡಿಸುವಲ್ಲಿ ಸಿ.ಎಂ. ಬೊಮ್ಮಾಯಿ ಮತ್ತು ಗದಗ ಜಿಲ್ಲಾಉಸ್ತುವಾರಿ ಸಚಿವರ ಕ್ರಮ ಏನು? ಕಾದು ನೋಡಬೇಕಿದೆ.

ನಿತ್ಯದ ಆದಾಯ ಲಕ್ಷ!
ಲಕ್ಷ್ಮೇಶ್ವರ ದೂದ್‌ ನಾನಾ ದರ್ಗಾ, ಕಲ್ಲುಮುಳಗುಂದದ ದಾವಲ್‌ ಮಲ್ಲಿಕ್‌ ದರ್ಗಾ, ಮುಕ್ತಿಮಂದಿರ ಹಾಗೂ ತ್ರಿಕೋಟೇಶ್ವರ ಯಾತ್ರಾ ಸ್ಥಳಗಳಿಗೆ ಅಮಾವಾಸ್ಯ ವೇಳೆಗೆ ಯಲವಗಿಗೆ ಬಂದಿಳಿವ ಪ್ರಯಾಣಿಕರ ಸಂಖ್ಯೆ ಕನಿಷ್ಠ 5 ಸಾವಿರ. ಆದಾಯ ಸಹ 4 ರಿಂದ 5 ಲಕ್ಷ. ಉಳಿದ ದಿನಗಳಲ್ಲೂ ಹಾವೇರಿ ಮತ್ತು ಗದಗ ಜಿಲ್ಲೆಗಳ ದಾರ್ಶನಿಕರ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲಿರುವ ಪ್ರವಾಸಿಗರಿಂದ ಕನಿಷ್ಠ 80 ಸಾವಿರದಿಂದ 1 ಲಕ್ಷ ರೂಪಾಯಿವರೆಗೂ ಕಲೆಕ್ಷನ್‌ ಕಟ್ಟಿಟ್ಟ ಬುತ್ತಿ.
ಚಿಕ್ಕಮಗಳೂರು -ಬೆಂಗಳೂರು ರೈಲು ಜನವರಿ ಮೊದಲ ವಾರ ಪುನಾರಂಭಗದಗ-ಯಲವಗಿ ಮಾರ್ಗ 52 ಕಿ.ಮೀ. ವಿಸ್ತೀರ್ಣ ಹೊಂದಿದ್ದು, 650 ಕೋಟಿ. ಯೋಜನೆಗೆ ಕೇಂದ್ರ ಸರಕಾರ ಈಗಾಗಲೇ ಅನುಮೋದನೆ ನೀಡಿದೆ. ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರಕಾರದ ಪಾಲಿನ ಶೇ.50 ರಷ್ಟು ಅನುದಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಕಾಮಗಾರಿ ಆರಂಭಗೊಳ್ಳುತ್ತದೆ.
ಶಿವಕುಮಾರ ಉದಾಸಿ, ಸಂಸದ ಹಾವೇರಿ



Read more

[wpas_products keywords=”deal of the day sale today offer all”]