Karnataka news paper

ಭೂಸುಧಾರಣಾ ಕಾಯ್ದೆ ದುರ್ಬಳಕೆ ಬಗ್ಗೆ ಹೈಕೋರ್ಟ್ ಕಳವಳ; ಅದಮಾರು ಮಠದ ಅರ್ಜಿಗೆ ಮಾನ್ಯತೆ


ಬೆಂಗಳೂರು: ಅನರ್ಹರನ್ನು ಗೇಣಿದಾರರೆಂದು ತೋರಿಸಿ ಭೂ ಸುಧಾರಣಾ ಕಾಯಿದೆಯನ್ನು ದುರ್ಬಳಕೆ ಸಾಧನವನ್ನಾಗಿ ಮಾಡಿಕೊಳ್ಳಬಾರದು ಎಂದು ಹೈಕೋರ್ಟ್‌ ಆದೇಶಿಸಿದೆ. ಅಲ್ಲದೆ, ಭೂ ಮಂಜೂರಾತಿ ಪ್ರಶ್ನಿಸಿ ಉಡುಪಿಯ ಅದಮಾರು ಮಠ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದೆ.

ಭೂ ನ್ಯಾಯ ಮಂಡಳಿ ಆದೇಶ ಪ್ರಶ್ನಿಸಿ ಅದಮಾರು ಮಠ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಪಿ.ಎಸ್‌. ದಿನೇಶ್‌ ಕುಮಾರ್‌ ಮತ್ತು ನ್ಯಾ.ಪಿ ಕೃಷ್ಣಭಟ್‌ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ. ‘ಕರ್ನಾಟಕ ಭೂ ಸುಧಾರಣಾ ಕಾಯಿದೆ- 1961 ನಿಸ್ಸಂದೇಹವಾಗಿ ಪ್ರಯೋಜನಕಾರಿ ಶಾಸನವಾಗಿದೆ. ಅದರ ಉದ್ದೇಶ ನಿಜವಾಗಿಯೂ ಭೂಮಿಯನ್ನು ಗೇಣಿಗೆ ಮಾಡಿಕೊಂಡು ಕೃಷಿಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಫಾರಂ ನಂಬರ್‌ 7ರಲ್ಲಿಅರ್ಜಿ ಸಲ್ಲಿಸಿದರೆ ಆಗ ಅಂತಹವರ ಹಕ್ಕುಗಳನ್ನು ರಕ್ಷಿಸಲು ಹಾಗೂ ಅವರಿಗೆ ಪ್ರಯೋಜನವನ್ನು ಒದಗಿಸಿಕೊಡುವುದಾಗಿದೆ. ಆದರೆ ಅಂತಹ ಶಾಸನವನ್ನು ದುರುಪಯೋಗ ಮಾಡಿಕೊಳ್ಳಬಾರದು’ ಎಂದು ನ್ಯಾಯಪೀಠ ಹೇಳಿದೆ.
ಬಿಲ್ಡರ್‌ ವಿರುದ್ಧ ಸುಳ್ಳು ಸುದ್ದಿ ಪ್ರಕಟ; ಹನುಮಂತ ಕಾಮತ್‌ & ಮೇ ತುಳುನಾಡು ನ್ಯೂಸ್‌ಗೆ ₹1.5 ಕೋಟಿ ದಂಡ
‘ಈ ಪ್ರಕರಣದಲ್ಲಿ ಭೂ ಮಾಲೀಕರ ಜಾಗದಲ್ಲಿ ಮಠವಿದೆ. ಅದು ಧಾರ್ಮಿಕ ಮತ್ತು ಚಾರಿಟಬಲ್‌ ಸಂಸ್ಥೆಯಾಗಿದೆ. ಆ ಭೂಮಿಯಿಂದ ಬರುವ ಪ್ರಯೋಜನಗಳನ್ನು ಮಠದ ಭಕ್ತರ ಸೌಕರ್ಯಕ್ಕೆ ಬಳಸಬೇಕು. ಭಕ್ತರ ಆಶಯವೂ ಅದೇ ಆಗಿರುತ್ತದೆ. ಜೊತೆಗೆ ಭೂಮಿ ನಗರ ಪ್ರದೇಶದಲ್ಲಿದ್ದು, ಅದು ಕರ್ನಾಟಕ ಭೂ ಸುಧಾರಣಾ ಕಾಯಿದೆ ಸೆಕ್ಷನ್‌ 2 ಎ(18) ವ್ಯಾಪ್ತಿಗೆ ಒಳಪಡುವುದಿಲ್ಲ. ಮಠ ಹಾಗೂ ಅರ್ಜಿದಾರರ ನಡುವೆ ಗೇಣಿದಾರ ಸಂಬಂಧ ಇತ್ತು ಎನ್ನು್ನವುದಕ್ಕೆ ಯಾವುದೇ ಲಿಖಿತ ದಾಖಲೆಗಳೂ ಇಲ್ಲ,” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ:
ಅದಮಾರು ಮಠವು ಶಿವಳ್ಳಿ ಗ್ರಾಮದಲ್ಲಿ ( ಸದ್ಯ ಇದು ಉಡುಪಿ ನಗರದ ಹೃದಯ ಭಾಗದಲ್ಲಿದೆ) ತನಗೆ ಸೇರಿದ್ದ 3,267 ಚದರ ಅಡಿ ಜಾಗ ಮತ್ತು ಮನೆಯನ್ನು ಅಡುಗೆ ಕೆಲಸ ಮಾಡುತ್ತಿದ್ದ ಜಿ.ಅನಂತ ಭಟ್ಟನಿಗೆ ನೀಡಿತ್ತು. ಆತ ಭೂ ಸುಧಾರಣಾ ಕಾಯಿದೆಯಡಿ ಫಾರಂ ನಂಬರ್‌ 7 ಸಲ್ಲಿಸಿ ಭೂಮಿಯ ಹಕ್ಕು ಪತ್ರ ಕೇಳಿದ್ದರು. ಭೂ ನ್ಯಾಯಮಂಡಳಿ 2003ರಲ್ಲಿ ಅವರಿಗೆ ಹಕ್ಕು ನೀಡಿತ್ತು. ಅದನ್ನು ಪ್ರಶ್ನಿಸಿ ಅದಮಾರು ಮಠವು ಹೈಕೋರ್ಟ್‌ ಏಕಸದಸ್ಯ ಪೀಠದ ಮೊರೆ ಹೋಗಿತ್ತು, ಆದರೆ ಏಕಸದಸ್ಯ ಪೀಠವು ಮಠದ ಅರ್ಜಿಯನ್ನು ವಜಾಗೊಳಿಸಿತ್ತು. ಹಾಗಾಗಿ ಅದು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು.



Read more

[wpas_products keywords=”deal of the day sale today offer all”]