Karnataka news paper

ಬೆಳಗಾವಿ ಚಳಿಗಾಲ ಅಧಿವೇಶನ: ಪೊಲೀಸ್ ಅಧಿಕಾರಿಗಳೊಂದಿಗೆ ಆರಗ ಜ್ಞಾನೇಂದ್ರ ಸಭೆ


ಹೈಲೈಟ್ಸ್‌:

  • ಬೆಳಗಾವಿ ಚಳಿಗಾಲ ಅಧಿವೇಶನ ಹಿನ್ನೆಲೆ
  • ಪೊಲೀಸ್ ಅಧಿಕಾರಿಗಳೊಂದಿಗೆ ಆರಗ ಜ್ಞಾನೇಂದ್ರ ಸಭೆ
  • ಭದ್ರತೆಗಾಗಿ ಸುಮಾರು 4000 ಕ್ಕೂ ಅಧಿಕ ಪೊಲೀಸರ ನಿಯೋಜನೆ

ಬೆಳಗಾವಿ: ಬೆಳಗಾವಿ ಅಧಿವೇಶನದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ, ಅಧಿವೇಶನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ, ಅವಕಾಶವಿಲ್ಲದಂತೆ, ಸುಲಲಿತವಾಗಿ ನಡೆಯಲು, ತೆಗೆದುಕೊಂಡಿರುವ ರಕ್ಷಣಾ ಕ್ರಮಗಳ ಬಗ್ಗೆ, ಸಚಿವರು ಮಾಹಿತಿ ಪಡೆದುಕೊಂಡರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಒಳಾಡಳಿತ, ರಜನೀಶ್ ಗೋಯಲ್, ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ, ಪ್ರತಾಪ್ ರೆಡ್ಡಿ, ಸತೀಶ್ ಕುಮಾರ್, ಐಜಿ ಬೆಳಗಾವಿ ವೃತ್ತ ಹಾಗೂ ಬೆಳಗಾವಿ ಪೊಲೀಸ್ ಆಯುಕ್ತ ತ್ಯಾಗರಾಜ್ ಉಪಸ್ಥಿತರಿದ್ದರು. ಬೆಳಗಾವಿಯಲ್ಲಿ ಅಧಿವೇಶನದ ಹಿನ್ನೆಲೆಯಲ್ಲಿ ಹಲವು ಸಂಘಟನೆಗಳು ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ ಸುಮಾರು 4000 ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಬೆಳಗಾವಿ: ‘ಸುವರ್ಣ’ ಅಧಿವೇಶನ, ಹಬ್ಬದ ವಾತಾವರ

ವರುಣ್‌ ಸಿಂಗ್‌ ಆರೋಗ್ಯ ಸ್ಥಿತಿ ಮಾಹಿತಿ ಪಡೆದ ಗೃಹ ಸಚಿವರು
ಬೆಂಗಳೂರು: ಬೆಂಗಳೂರಿನ ಕಮಾಂಡೊ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಇತ್ತೀಚೆಗೆ ತಮಿಳುನಾಡಿನ ಕುನೂರ್‌ ಬಳಿಕ ಸಂಭವಿಸಿದ ಸೇನಾ ಹೆಲಿಕಾಪ್ಟರ್‌ ದುರಂತ ಘಟನೆಯಲ್ಲಿಬದುಕುಳಿದಿರುವ ವರುಣ್‌ ಸಿಂಗ್‌ ಅವರಿಗೆ ಕಮಾಂಡೋ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿದೆ.

ವರುಣ್‌ ಸಿಂಗ್‌ ಅವರ ತಂದೆ, ತಾಯಿಯನ್ನೂ ಭೇಟಿಯಾದ ಸಚಿವರು ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಹಾಗೆಯೇ ವೈದ್ಯಾಧಿಕಾರಿಗಳಿಂದ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಹೆಚ್ಚಿನ ಚಿಕಿತ್ಸೆ ಸೇರಿದಂತೆ ಎಲ್ಲರೀತಿಯ ನೆರವು, ಸಹಕಾರ ನೀಡಲು ಸರಕಾರ ಸಿದ್ಧವಿರುವುದಾಗಿ ಆರಗ ಜ್ಞಾನೇಂದ್ರ ಭರವಸೆ ನೀಡಿದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಉಪಸ್ಥಿತರಿದ್ದರು.



Read more