Karnataka news paper

50ರ ದಶಕದಲ್ಲಿ ಪುಸ್ತಕ ಕೊಂಡು ಓದಲಾಗದ ಬಾಲಕ, ಇಂದು 2 ಲಕ್ಷ ಪುಸ್ತಕಗಳಿರುವ ಗ್ರಂಥಾಲಯ ಸ್ಥಾಪಕ


Source : The New Indian Express

ಹೈದರಾಬಾದ್: ಬಹಳ ಹಿಂದೆ ಭಾರತ ಸರ್ಕಾರದೊಡನೆ ಹೈದರಾಬಾದ್ ರಾಜ್ಯ ವಿಲೀನವಾಗುವುದನ್ನು ವಿರೋಧಿಸಿದ್ದ ರಜಾಕರು, ರಾಜ್ಯದಲ್ಲಿ ದೊಂಬಿ ನಡೆಸಿದ್ದರು. ಆ ಸಮಯದಲ್ಲಿ ಬಾಲಕನೋರ್ವ ತನ್ನ ಹಳ್ಳಿಯಲ್ಲಿ ಒಂದು ಗ್ರಂಥಾಲಯವನ್ನು ತೆರೆದಿದ್ದ.

ಇದನ್ನೂ ಓದಿ: ಕಪ್ಪೆಗಳ ಉಳಿವಿಗಾಗಿ ಜಾಗೃತಿ ಮೂಡಿಸಲು ಕರ್ನಾಟಕದಲ್ಲಿ ಕಪ್ಪೆಗಳ ಹಬ್ಬ ಆಯೋಜನೆ

ಹಳ್ಳಿಗರು ವಿದ್ಯಾವಂತರಾದರೆ ತನಗೇ ಕಂಟಕ ಎಂದು ತಿಳಿದ ಜಮೀನ್ದಾರರು ಆ ಗ್ರಂಥಾಲಯವನ್ನು ಮುಚ್ಚಿಹಾಕಿದ್ದರು. ಮುಂದೆ ಅದೇ ಬಾಲಕ ಓದಿ ವಿದ್ಯಾವಂತನಾಗಿ ಉಪನ್ಯಾಸಕನಾಗಿ ಕೆಲಸಕ್ಕೆ ಸೇರುತ್ತಾರೆ. ತೆಲುಗು ಸಾಹಿತ್ಯ ವಲಯದಲ್ಲಿ ಉತ್ತಮ ಬರಹಗಾರ ಎಂದು ಹೆಸರು ಪಡೆಯುತ್ತಾರೆ. ಅನೇಕ ಪ್ರತಿಷ್ಟಿತ ಪ್ರಶಸ್ತಿಗಳು, ಬಿರುದುಗಳು ಅವರನ್ನರಸಿ ಬರುತ್ತವೆ. 

ಇದನ್ನೂ ಓದಿ: ಕೇರಳ: ತೈಲ ಟ್ಯಾಂಕರ್ ಡ್ರೈವರ್ ಪರವಾನಗಿ ಪಡೆದ ರಾಜ್ಯದ ಎರಡನೇ ಮಹಿಳೆ 25 ವರ್ಷದ ಬರ್ಕತ್ ನಿಶಾ

ಇಂದು ಆ ಮಹನೀಯರು ಸ್ಥಾಪಿಸಿರುವ ಗ್ರಂಥಾಲಯದಲ್ಲಿ 2 ಲಕ್ಷ ಪುಸ್ತಕಗಳಿವೆ. ಆ ಮಹನೀಯರ ಹೆಸರು ಕುರೆಲ್ಲ ವಿಟ್ಠಲಾಚಾರ್ಯ. ಅವರಿಗೀಗ 84 ವರ್ಷ ವಯಸ್ಸು. ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿದ್ದ ಅವರು ಕಾಲೇಜು ಪ್ರಿನ್ಸಿಪಾಲರಾಗಿ ನಿವೃತ್ತರಾಗಿದ್ದಾರೆ. ಭುವನಗಿರಿ ಜಿಲ್ಲೆಯ ರಾಮಣ್ಣ ಪೇಟ್ ಎಂಬಲ್ಲಿ ಅವರು ನೆಲೆಸಿದ್ದಾರೆ. 

ಇದನ್ನೂ ಓದಿ: ನ್ಯೂಕ್ಲಿಯರ್ ದಾಳಿಯಿಂದ ರಕ್ಷಣೆ ಪಡೆಯಲು ನಿರ್ಮಿಸಿದ್ದ ಬಂಕರ್ ಗಳು ನೀರು ಪಾಲು: ಸಮುದ್ರ ಮಟ್ಟ ಏರಿಕೆ ಕಾರಣ!

ಇದುವರೆಗೂ ಅವರು ಒಟ್ಟು 22 ಪುಸ್ತಕಗಳನ್ನು ರಚಿಸಿದ್ದಾರೆ. ತಾವು ಚಿಕ್ಕವರಾಗಿದ್ದಾಗ ಪುಸ್ತಕ ಕೊಂಡು ಓದಲು ಶಕ್ತರಾಗಿರಲಿಲ್ಲ. ಹೀಗಾಗಿ ನೆರೆಹೊರೆಯವರು, ಸ್ನೇಹಿತರಿಂದ ಪುಸ್ತಕ ಪಡೆದು ಒಂದೇ ದಿನದಲ್ಲಿ ಓದಿ ಹಿಂದಿರುಗಿಸುತ್ತಿದ್ದರು. ಈ ಕಷ್ಟ ಇನ್ನೊಬ್ಬರಿಗೆ ಬರಬಾರದು ಎನ್ನುವ ಉದ್ದೇಶವೇ ಗ್ರಂಥಾಲಯ ಸ್ಥಾಪನೆಗೆ ಕಾರಣವಾಯಿತು.  ಈ ಗ್ರಂಥಾಲಯ ಸ್ಥಾಪನೆಗೆ ವಿಟ್ಠಲಾಚಾರ್ಯ ಅವರ್ ವಿದ್ಯಾರ್ಥಿಗಳೂ ಕಾಣಿಕೆ ನೀಡಿದ್ದಾರೆ ಎನ್ನುವುದು ವಿಶೇಷ.

ಇದನ್ನೂ ಓದಿ: ಸಿಪಿಆರ್ ಮೂಲಕ 20 ವರ್ಷದ ಯುವಕನ ಜೀವ ಉಳಿಸಿದ ನರ್ಸ್!



Read more