Karnataka news paper

ಬಿಡುಗಡೆಗೂ ಮುನ್ನ ‘ಆರ್​ಆರ್​ಆರ್​’ ಚಿತ್ರಕ್ಕೆ ಆಂಧ್ರ ಸರ್ಕಾರದ ನಿರ್ಧಾರದಿಂದ ದೊಡ್ಡ ಸಂಕಷ್ಟ!


Source : Online Desk

ಹೈದರಾಬಾದ್: ಆಂಧ್ರ ಪ್ರದೇಶ ಸರ್ಕಾರ ಇತ್ತೀಚೆಗೆ  ಕೈಗೊಂಡ ತೀರ್ಮಾನದ ವಿರುದ್ದ RRR ಸಿನಿಮಾ ತಂಡ ಅತೃಪ್ತಿ ವ್ಯಕ್ತಪಡಿಸಿದೆ.

ಆಂದ್ರ ಸರ್ಕಾರ ಸಿನಿಮಾ ಟಿಕೆಟ್ ದರಗಳನ್ನ ಇಳಿಸಿದ್ದೂ ಇದರಿಂದ ದೊಡ್ಡ ಬಜೆಟ್ ನ ಸಿನಿಮಾಗಳಿಗೆ ಲಾಭವಾಗುವುದಿಲ್ಲ ಎಂದು RRR ತಂಡ ಅಭಿಪ್ರಾಯಪಟ್ಟಿದೆ.

ವಿಡಿಯೋ ನೋಡಿ: ರೌದ್ರಂ, ರಣಂ, ರುಧಿರಂ: RRR ಚಿತ್ರದ ಟ್ರೈಲರ್ ಬಿಡುಗಡೆ

ಸರ್ಕಾರದ ಹಿರಿಯ ಮುಖಂಡರು ಇನ್ನೊಮ್ಮೆ ಟಿಕೆಟ್ ದರ ಕಡಿತದ ಆದೇಶವನ್ನು ಪರಿಶೀಲಿಸಿ ಟಿಕೆಟ್ ದರಗಳನ್ನ ಏರಿಸಬೇಕೆಂದು ಮನವಿ ಮಾಡಿದೆ. ಇದೇ ವಿಚಾರವಾಗಿ RRR ಸಿನಿಮಾ ನಿರ್ಮಾಪಕರಾದ ದಾನಯ್ಯ ಅವರು ಸಿಎಂ ಅನ್ನು ಭೇಟಿಮಾಡುವುದಾಗಿ ತಿಳಿಸಿದರು.

400 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಆರ್​ಆರ್​ಆರ್​ ಚಿತ್ರ 2022ರ ಜನವರಿ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. 

ಇನ್ನು ಇತ್ತೀಚೆಗಷ್ಟೇ ಚಿತ್ರತಂಡ ಬೆಂಗಳೂರಿನಲ್ಲಿ ಚಿತ್ರದ ಪ್ರಚಾರ ಕಾರ್ಯಕ್ರಮವನ್ನು ನಡೆಸಿತ್ತು.



Read more…