ಹೈಲೈಟ್ಸ್:
- ಷೇರು ಮಾರುಕಟ್ಟೆಯ ದಿಕ್ಕನ್ನು ನಿರ್ಧರಿಸಲಿರುವ ಅಮೆರಿಕದ ಫೆಡರಲ್ ರಿಸರ್ವ್ ಘೋಷಣೆಗಳು
- ಕೇಂದ್ರ ಬ್ಯಾಂಕಿನ ಘೋಷಣೆಗಳನ್ನು ಎದುರುನೋಡುತ್ತಿರುವ ಹೂಡಿಕೆದಾರರು
- ಅಮೆರಿಕದಲ್ಲಿ ನವೆಂಬರ್‌ನಲ್ಲಿ ಹಣದುಬ್ಬರ ಮಟ್ಟ ಶೇ.6.8ಕ್ಕೆ ಜಿಗಿತ
ಅಮೆರಿಕದ ಫೆಡ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಇದೇ ಬುಧವಾರ ಕೊವಿಡ್ ಸೋಂಕಿನ ಹಿನ್ನೆಲೆಯಲ್ಲಿ ವಿಶೇಷ ಘೋಷಣೆ ಹೊರಡಿಸಲಿದ್ದಾರೆ ಎಂದು ಹೂಡಿಕೆದಾರರು ನಿರೀಕ್ಷಿಸುತ್ತಿದ್ದಾರೆ. ಕಳೆದ ಶುಕ್ರವಾರದ ಭಾರತೀಯ ವಹಿವಾಟಿನ ಸಮಯದ ನಂತರ ಅಮೆರಿಕವು ತನ್ನ ಹಣದುಬ್ಬರದ ಪ್ರಮಾಣವನ್ನು ಘೋಷಿಸಿದೆ. ಅಮೆರಿಕದಲ್ಲಿ ನವೆಂಬರ್‌ನಲ್ಲಿ ಹಣದುಬ್ಬರ ಮಟ್ಟ ಶೇ.6.8ಕ್ಕೆ ಜಿಗಿದಿದೆ. ಇದು ಕಳೆದ 39 ವರ್ಷಗಳಲ್ಲೇ ಅಮೆರಿಕದಲ್ಲಿ ದಾಖಲಾಗಿರುವ ಗರಿಷ್ಠ ಹಣದುಬ್ಬರ ಪ್ರಮಾಣವಾಗಿದೆ. ವಾಲ್‌ಸ್ಟ್ರೀಟ್ ಕೂಡ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈ ಎಲ್ಲ ಅಂಶಗಳು ಷೇರುಪೇಟೆ ಮೇಲೆ ಪರಿಣಾಮ ಬೀರಬಲ್ಲವು ಎನ್ನಲಾಗುತ್ತಿದೆ.
ಹೂಡಿಕೆದಾರರು ಮಾರುಕಟ್ಟೆ ಸುಸುಳಿವುಗಳನ್ನು ಎದುರುನೋಡುತ್ತಿದ್ದಾರೆ
ಬೆಲೆಗಳು ಗಗನಮುಖಿಯಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕ ಫೆಡ್ ರಿಸರ್ವ್ ಹೇಳಿಕೆಗಳನ್ನು ಹೂಡಿಕೆದಾರರು ಸೂಕ್ಷ್ಮವಾಗಿವಿಶ್ಲೇಷಣೆ ಮಾಡುತ್ತಿದ್ದಾರೆ. ಈ ಹೇಳಿಕೆಗಳಿಂದ ಮಾರುಕಟ್ಟೆ ಯಾವ ದಿಕ್ಕಿನತ್ತ ಚಲಿಸಲಿದೆ ಎಂಬ ಸುಳಿವುಗಳನ್ನು ಹುಡುಕುತ್ತಿದ್ದಾರೆ. ಬಾಂಡುಗಳ ಖರೀದಿಯಿಂದ ಹಿಂದೆ ಸರಿಯಬೇಕೆ? ಅಥವಾ ಬೇಡವೇ? ಎಂದು ನಿರ್ಧರಿಸಲು ಬಡ್ಡಿದರದಲ್ಲಿ ಏರಿಕೆಯಾಗಲಿದೆಯೇ ಎಂಬುದನ್ನು ನೋಡುತ್ತಿದ್ದಾರೆ.
“ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ(FOMC ) ಮುಂದಿನ ವಾರದೊಳಗೆ ಯಥಾಸ್ಥಿತಿ ಕಾಯ್ದುಕೊಳ್ಳು ನಿರೀಕ್ಷೆ ಇದೆ. ಟ್ಯಾಪರಿಂಗ್ ವೇಗವನ್ನು ದ್ವಿಗುಣಗೊಳಿಸಲಿದೆ. ತಾತ್ಕಾಲಿಕ ಹಣದುಬ್ಬರವೂ ಶಮನಗೊಳ್ಳಲಿದೆ. ಜತೆಗೆ ಡಾಟ್ ಪ್ಲಾಟ್‌ನಲ್ಲಿ ವೇಗವೂ ಹೆಚ್ಚಲಿದೆ” ಎಂದು ಜೋನಾಥನ್ ಸೇರಿದಂತೆ ಬಾರ್ಕ್ಲೇಸ್ ವಿಶ್ಲೇಷಕರು ಇತ್ತೀಚಿನ ಕ್ಲೈಂಟ್ ಟಿಪ್ಪಣಿಯಲ್ಲಿ ಬರೆದುಕೊಂಡಿದ್ದಾರೆ.
ಕಳೆದ ವಾರ, ಸೆನ್ಸೆಕ್ಸ್ ಮತ್ತು ನಿಫ್ಟಿ 1.8% ರಷ್ಟು ಏರಿಕೆ ಕಂಡಿತ್ತು. ಏಕೆಂದರೆ, ಓಮಿಕ್ರಾನ್ ಸೋಂಕಿನ ಕುರಿತ ಕಳವಳಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದವು ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ವಿತ್ತ ನೀತಿ ಸಮಿತಿ (ಎಂಪಿಸಿ) ಸಭೆಯ ನಿರ್ಧಾರಗಳು ನಿರೀಕ್ಷೆಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದ್ದವು. ಆದರೆ ಈಕ್ವಿಟಿಗಳು ವಾರದ ಕೊನೆಯಲ್ಲಿ ಏರಿಕೆಯನ್ನು ಕಾಪಾಡಿಕೊಳ್ಳಲು ಹೆಣಗಾಡಿದವು.
“ನಿಫ್ಟಿ ಸುಮಾರು 17,550 ರ ಪ್ರತಿರೋಧ ಎದುರಿಸುತ್ತಿದೆ ಮತ್ತು ಪ್ರಸ್ತುತ ಅದರ 20 DMA ಸುತ್ತಲೂ ವಹಿವಾಟು ನಡೆಸುತ್ತಿದೆ” ಎಂದು ಸ್ಯಾಮ್ಕೋ ಸೆಕ್ಯುರಿಟೀಸ್‌ನ ಇಕ್ವಿಟಿ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಯೆಶಾ ಶಾ ತಿಳಿಸಿದ್ದಾರೆ.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್’ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.