ಹೈಲೈಟ್ಸ್:
- ಬೆಂಗಳೂರಿನಲ್ಲಿ ನಡೆಯುತ್ತಿರುವ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್.
- ಜೈಪುರ ಪಿಂಕ್ ಪ್ಯಾಂಥರ್ಸ್ ಸದ್ದಡಗಿಸಿದ ಬೆಂಗಳೂರು ಬುಲ್ಸ್ ತಂಡ.
- ಬರೋಬ್ಬರಿ 18 ಅಂಕಗಳನ್ನು ಕಲೆಹಾಕಿ ಮಿಂಚಿದ ಬೆಂಗಳೂರು ನಾಯಕ ಪವನ್.
ಈ ಜಯದೊಂದಿಗೆ ಬೆಂಗಳೂರು ಬುಲ್ಸ್ 12 ತಂಡಗಳಿರುವ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಅಲಂಕರಿಸಿತು. ಆಡಿದ 7 ಪಂದ್ಯಗಳಲ್ಲಿ ಬುಲ್ಸ್ 5 ಜಯ ದಾಖಲಿಸಿರುವ ಬುಲ್ಸ್ ಒಟ್ಟಾರೆ 28 ಅಂಕಗಳನ್ನು ಕಲೆಹಾಕಿದೆ. ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್ ಆವರಣದಲ್ಲಿ ಗುರುವಾರ ನಡೆದ ದ್ವಿತೀಯ ಹಣಾಹಣಿಯಲ್ಲಿ ಬೆಂಗಳೂರು ತಂಡ 38-31 ಅಂಕಗಳಿಂದ ಪ್ಯಾಂಥರ್ಸ್‌ಗೆ ಸೋಲುಣಿಸಿತು.
ಪಂದ್ಯದ ಆರಂಭದಿಂದಲೇ ಚುರುಕಿನ ರೇಡಿಂಗ್ ಮತ್ತು ಟ್ಯಾಕಲ್‌ನಲ್ಲಿಮೇಲುಗೈ ಸಾಧಿಸಿದ ಬುಲ್ಸ್ ಆಟಗಾರರು, ವಿರಾಮಕ್ಕೆ 6 ಅಂಕ ಮುನ್ನಡೆ ಕಾಯ್ದುಕೊಂಡರು (20-14). ನಂತರವೂ ಅದೇ ಪ್ರದರ್ಶನ ನೀಡಿದ ಬುಲ್ಸ್ 7 ಅಂಕಗಳ ಅಂತದಿಂದ 5ನೇ ಜಯ ದಾಖಲಿಸಿತು. ಜೈಪುರ ತಂಡದ ಪರ 13 ಅಂಕ ಗಳಿಸಿದ ಅರ್ಜುನ್ ದೇಶ್ವಾಲ್ ತಂಡದ ಪ್ರತಿ ಹೋರಾಟಕ್ಕೆ ನೆರವಾದರು.
ಬೆಂಗಳೂರು ಬುಲ್ಸ್ ಗೆ ಮತ್ತೆ ಅಗ್ರಸ್ಥಾನಕ್ಕೇರುವ ಗುರಿ
ಪೈರೇಟ್ಸ್-ತಲೈವಾಸ್ ಪಂದ್ಯ ಸಮಬಲ
ಪೂರ್ವಾರ್ಧದಲ್ಲಿ ಲಭಿಸಿದ ಮುನ್ನಡೆಯನ್ನು ಕಾಪಾಡುಕೊಳ್ಳುವಲ್ಲಿ ವಿಫಲಗೊಂಡ ಪಟನಾ ಪೈರೇಟ್ಸ್ ತಂಡ, 36ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡದ ವಿರುದ್ಧ ಡ್ರಾಗಷ್ಟೇ ಸಮಾಧಾನ ಪಟ್ಟುಕೊಂಡಿತು. 30-30 ಅಂಕಗಳಿಂದ ಸಮಬಲ ಸಾಧಿಸಿದ ಉಭಯ ತಂಡಗಳು ತಲಾ ಮೂರು ಅಂಕ ಹಂಚಿಕೊಂಡವು.
ಇದರೊಂದಿಗೆ ಮೂರು ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ಆಡಿದ ಆರು ಪಂದ್ಯಗಳಿಂದ ಒಟ್ಟಾರೆ 24 ಅಂಕ ಕಲೆಹಾಕಿದರೆ, ತಲೈವಾಸ್ 7 ಪಂದ್ಯಗಳಿಂದ ಒಟ್ಟಾರೆ 22 ಅಂಕ ಸಂಪಾದಿಸಿ ಅಗ್ರ ನಾಲ್ಕರಲ್ಲೇ ಉಳಿದವು. ಪಟನಾ ಪೈರೇಟ್ಸ್ ಪರ ಮೋನು ಗೋಯೆಟ್ (9 ಅಂಕ), ನಾಯಕ ಪ್ರಶಾಂತ್ ಕುಮಾರ್ ರೈ (7 ಅಂಕ) ಗಮನ ಸೆಳೆದರೆ, ತಲೈವಾಸ್ ಪರ ಅಜಿಂಕ್ಯ ಪವಾರ್ (12 ಅಂಕ) ಮತ್ತು ಅತುಲ್ ಎಂಎಸ್ (6 ಅಂಕ) ದಿಟ್ಟ ಹೋರಾಟ ನೀಡಿ 2ನೇ ಸೋಲಿನಿಂದ ತಂಡವನ್ನು ಪಾರು ಮಾಡಿದರು.
ಜಯಂಟ್ಸ್ ಸೋಲಿಸಿ ಅಂಕಪಟ್ಟಿಯ ಪಾತಾಳದಿಂದ ಮೇಲೆದ್ದ ಪಲ್ಟನ್!
ಶುಕ್ರವಾರದ ಪಂದ್ಯಗಳು
ಬೆಂಗಾಲ್ ವಾರಿಯರ್ಸ್ – ಹರಿಯಾಣ ಸ್ಟೀಲರ್ಸ್
ಪಂದ್ಯ ಆರಂಭ: ರಾತ್ರಿ 7.30
ಜೈಪುರ ಪಿಂಕ್ ಪ್ಯಾಂಥರ್ಸ್ – ಪುಣೇರಿ ಪಲ್ಟನ್
ಪಂದ್ಯ ಆರಂಭ: ರಾತ್ರಿ 8.30
ಬೆಂಗಳೂರು ಬುಲ್ಸ್ ಪಂದ್ಯಗಳ ವೇಳಾಪಟ್ಟಿ
ಮೊದಲ ಚರಣದ ಹನ್ನೊಂದು ಪಂದ್ಯಗಳ ವಿವರ
- ಬೆಂಗಳೂರು ಬುಲ್ಸ್ vs ಯು ಮುಂಬಾ (ಡಿ.22): ಸೋಲು
- ಬೆಂಗಳೂರು ಬುಲ್ಸ್ vs ತಮಿಳ್ ತಲೈವಾಸ್ (ಡಿ.24): ಜಯ
- ಬೆಂಗಳೂರು ಬುಲ್ಸ್ vs ಬೆಂಗಾಲ್ ವಾರಿಯರ್ಸ್ (ಡಿ.26): ಜಯ
- ಬೆಂಗಳೂರು ಬುಲ್ಸ್ vs ಹರಿಯಾಣ ಸ್ಟೀಲರ್ಸ್ (ಡಿ.30): ಜಯ
- ಬೆಂಗಳೂರು ಬುಲ್ಸ್ vs ತೆಲುಗು ಟೈಟನ್ಸ್ (ಜ.01): ಸಮಬಲ
- ಬೆಂಗಳೂರು ಬುಲ್ಸ್ vs ಪುಣೇರಿ ಪಲ್ಟನ್ (ಜ.02): ಜಯ
- ಬೆಂಗಳೂರು ಬುಲ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ (ಜ.06): ಜಯ
- ಬೆಂಗಳೂರು ಬುಲ್ಸ್ vs ಯುಪಿ ಯೋಧಾ (ಜ.09)
- ಬೆಂಗಳೂರು ಬುಲ್ಸ್ vs ದಬಾಂಗ್ ಡೆಲ್ಲಿ (ಜ.12)
- ಬೆಂಗಳೂರು ಬುಲ್ಸ್ vs ಗುಜರಾತ್ ಜಯಂಟ್ಸ್ (ಜ.14)
- ಬೆಂಗಳೂರು ಬುಲ್ಸ್ vs ಪಟನಾ ಪೈರೇಟ್ಸ್ (ಜ.16)
Read more
[wpas_products keywords=”deal of the day sale today offer all”]