PTI
ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ ನಲ್ಲಿ 266 ರನ್ ಗಳಿಗೆ ಆಲೌಟ್ ಆಗಿದ್ದು ಆಫ್ರಿಕಾಗೆ 240 ರನ್ ಗಳ ಗುರಿ ನೀಡಿದೆ.
ಜೋಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 202 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾಗೆ ಶಾರ್ದೂಲ್ ಠಾಕೂರ್ ಕಂಟಕರಾದರು. ಹೌದು 7 ವಿಕೆಟ್ ಪಡೆಯುವ ಮೂಲಕ ಆಫ್ರಿಕಾ ತಂಡ 229 ರನ್ ಗಳಿಗೆ ಸರ್ವಪತನಕ್ಕೆ ಕಾರಣವಾದರು.
ಇನ್ನು 27 ರನ್ ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಇಂದು 226 ರನ್ ಗಳಿಗೆ ಆಲೌಟ್ ಆಯಿತು. ಭಾರತ ಪರ ಕೆಎಲ್ ರಾಹುಲ್ 8, ಮಾಯಾಂಕ್ ಅಗರವಾಲ್ 23, ಚೇತೇಶ್ವರ ಪೂಜಾರ 53, ಅಜಿಂಕ್ಯ ರಹಾನೆ 58, ಹನುಮ ವಿಹಾರಿ 40, ರಿಷಬ್ ಪಂತ್ 0, ರವಿಚಂದ್ರನ್ ಅಶ್ವಿನ್ 16 ಹಾಗೂ ಶಾರ್ದೂಲ್ ಠಾಕೂರ್ 28 ರನ್ ಬಾರಿಸಿದರು.
ಭಾರತ ನೀಡಿದ 240 ರನ್ ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಮೂರನೇ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 118 ರನ್ ಬಾರಿಸಿದೆ. ಇನ್ನು ಗೆಲ್ಲಲು 122 ರನ್ ಗಳ ಅವಶ್ಯಕತೆ ಇದೆ.
ದಕ್ಷಿಣ ಆಫ್ರಿಕಾದ ದುಸೆನ್ ಅಜೇಯ 11 ರನ್ ಹಾಗೂ ಎಲ್ಗರ್ ಅಜೇಯ 46 ರನ್ ಬಾರಿಸಿದ್ದು ನಾಲ್ಕನೇ ದಿನದಾಟವನ್ನು ಆರಂಭಿಸಲಿದ್ದಾರೆ.
Read more…
[wpas_products keywords=”deal of the day sports items”]