Karnataka news paper

ಬೆಳ್ಳಿತೆರೆ ಮೇಲೆ ಮತ್ತೆ ಒಟ್ಟಿಗೆ ಮಿಂಚಲಿದ್ದಾರೆ ಪೃಥ್ವಿ & ಖುಷಿ; ಆಲ್ಬಂ ಸಾಂಗ್‌ನಲ್ಲಿ ‘ದಿಯಾ’ ಜೋಡಿ


ಹೈಲೈಟ್ಸ್‌:

  • ‘ದಿಯಾ’ ಸಿನಿಮಾ ಮೂಲಕ ಯಶಸ್ಸು ಪಡೆದ ಖುಷಿ & ಪೃಥ್ವಿ
  • ಇದೀಗ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿರುವ ಈ ಜೋಡಿ
  • ಆಲ್ಬಂ ಸಾಂಗ್‌ ಮೂಲಕವೂ ಮೋಡಿ ಮಾಡಲಿದ್ದಾರೆ ಪೃಥ್ವಿ ಮತ್ತು ಖುಷಿ

ಹರೀಶ್‌ ಬಸವರಾಜ್‌
ದಿಯಾ‘ ಸಿನಿಮಾದ ಮೂಲಕ ದೊಡ್ಡ ಯಶಸ್ಸು ಪಡೆದ ಖುಷಿ ರವಿ ಮತ್ತು ಪೃಥ್ವಿ ಅಂಬಾರ್‌ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ಜತೆಗೆ ಇವರಿಬ್ಬರೂ ಆಲ್ಬಂ ಹಾಡೊಂದರಲ್ಲಿ ಒಟ್ಟಿಗೆ ನಟಿಸಿದ್ದಾರೆ. ‘ದಿಯಾ’ ಚಿತ್ರದ ನಂತರ ಪೃಥ್ವಿ ಅಂಬಾರ್‌ ಮತ್ತು ಖುಷಿ ಇಬ್ಬರಿಗೂ ಹಲವು ಸಿನಿಮಾ ಆಫರ್‌ಗಳು ಬಂದವು. ಪೃಥ್ವಿ ಏನಿಲ್ಲವೆಂದರೂ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದರು. ಈಗಲೂ ಅವರಿಗೆ ಸಿಕ್ಕಾಪಟ್ಟೆ ಅವಕಾಶಗಳು ಬರುತ್ತಲೇ ಇವೆ. ಖುಷಿ ಅವರು ಸಹ ನಕ್ಷೆ, ಸ್ಪೂಕಿ ಕಾಲೇಜು ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು.

ಇದೀಗ ಖುಷಿ ಅವರ ತೆಲುಗು ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಇಬ್ಬರಿಗೂ ಒಳ್ಳೆಯ ಸಕ್ಸಸ್‌ ಸಿಕ್ಕರೂ ತೆರೆ ಮೇಲೆ ಮತ್ತೆ ಬರುವಂತಹ ಅವಕಾಶ ಇನ್ನೂ ಸಿಕ್ಕಿಲ್ಲ. ಆದರೆ, ದಿನೇಶ್‌ ಎಂಬವರು ಮಾಡಿರುವ ಆಲ್ಬಂ ಹಾಡೊಂದರಲ್ಲಿಇವರಿಬ್ಬರೂ ಒಟ್ಟಿಗೆ ನಟಿಸಿದ್ದಾರೆ. ‘ನಾನು ಮತ್ತು ಪೃಥ್ವಿ ಇಬ್ಬರೂ ಎರಡು ವರ್ಷಗಳಿಂದ ಬರೀ ‘ದಿಯಾ’ ಬಗ್ಗೆ ಮಾತನಾಡುತ್ತಿದ್ದೇವೆ. ಕೊರೊನಾದಿಂದಾಗಿ ಯಾವ ಸಿನಿಮಾವೂ ಬಿಡುಗಡೆಯಾಗುತ್ತಿಲ್ಲ. ಈ ನಡುವೆ ಸಿನಿದನಿಯ ದಿನೇಶ್‌ ನಿರ್ಮಾಣ ಮಾಡಿರುವ ರೊಮ್ಯಾಂಟಿಕ್‌ ಆಲ್ಬಂ ಹಾಡೊಂದರಲ್ಲಿ ನಾವಿಬ್ಬರೂ ನಟಿಸಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಖುಷಿ.

‘ ಈ ಹಾಡು ಬಹಳ ಚೆನ್ನಾಗಿ ಮೂಡಿ ಬಂದಿದೆ. ರವೀಂದ್ರ ಎಂಬುವರು ನಿರ್ದೇಶನ ಮಾಡಿದ್ದಾರೆ. ಜಗದೀಶ್‌ ಅವರ ಲಿರಿಕ್ಸ್‌ ಮತ್ತು ಸಂಗೀತ ಸಂಯೋಜನೆ ಈ ಹಾಡಿಗಿದೆ. ಸದ್ಯದಲ್ಲೇ ರಿಲೀಸ್‌ ಆಗಬಹುದು. ಹಾಡಿನ ಜತೆಗೆ ಪೃಥ್ವಿಯ ಜತೆ ನಟಿಸುತ್ತಿದ್ದ ಸಿನಿಮಾದ ಚಿತ್ರೀಕರಣ ಮೊದಲ ಹಂತ ಮುಗಿದಿದೆ. ದರ್ಶನ್‌ ಅಪೂರ್ವ ಎಂಬುವರ ನಿರ್ದೇಶನ ಅದಕ್ಕಿದೆ. ಇದರ ಜತೆಗೆ ಸಿನಿಮಾಗಳ ರಿಲೀಸ್‌ಗಾಗಿ ಕಾಯುತ್ತಿದ್ದೇನೆ’ ಎನ್ನುತ್ತಾರೆ ಖುಷಿ.

‘ಸಂದೀಪ್‌ ಕಿಶನ್‌ ಅವರ ತೆಲುಗು ಸಿನಿಮಾದ ಪಾತ್ರ ಬಹಳ ಚೆನ್ನಾಗಿದೆ’ ಎಂದಿರುವ ಖುಷಿ ಅದರ ಬಗ್ಗೆ ಹೆಚ್ಚು ವಿಷಯ ರಿವೀಲ್‌ ಮಾಡುವಂತಿಲ್ಲ ಎಂದರು. ‘ತೆಲುಗು ಮತ್ತು ತಮಿಳು ಸಿನಿಮಾಗಳಿಂದ ಆಫರ್‌ಗಳು ಬರುತ್ತಿವೆ. ತೆಲುಗಿನಲ್ಲಿ ನಾನು ನಟಿಸುತ್ತಿರುವ ಸಿನಿಮಾ ನನಗೆ ಒಳ್ಳೆಯ ಡೆಬ್ಯೂ ಆಗುತ್ತದೆ. ಇದಾದ ನಂತರ ಎರಡು ಸಿನಿಮಾಗಳ ಡಿಸ್ಕಷನ್‌ ನಡೆಯುತ್ತಿದೆ. ಹತ್ತು ಸಿನಿಮಾಗಳನ್ನು ಮಾಡುವುದಕ್ಕಿಂತಲೂ ಮೂರು ಒಳ್ಳೆಯ ಸಿನಿಮಾ ಮಾಡಬೇಕು ಎಂದು ತಿರ್ಮಾನಿಸಿ ಒಳ್ಳೆಯ ಕಥೆ ಆಯ್ಕೆಯಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ಹೇಳಿದರು ಖುಷಿ.

Pruthvi Ambaar: ಕಾಲಿವುಡ್ & ಬಾಲಿವುಡ್‌ಗೂ ಎಂಟ್ರಿ ಕೊಟ್ಟ ‘ದಿಯಾ’ ನಟ ಪೃಥ್ವಿ ಅಂಬಾರ್!

ಕೋಟ್‌:
ಪೃಥ್ವಿ ಜತೆಗಿನ ಹಾಡು ಬಹಳ ಚೆನ್ನಾಗಿ ಬಂದಿದೆ. ಜನರಿಗೆ ಇಷ್ಟವಾಗಲಿದೆ, ನನ್ನ ಮತ್ತು ಪೃಥ್ವಿ ಜೋಡಿಯನ್ನು ಇಷ್ಟಪಡುವವರು ಈ ಹಾಡಿನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಇದು ರೊಮ್ಯಾಂಟಿಕ್‌ ಹಾಡು.
-ಖುಷಿ ರವಿ, ನಟಿ

ಕಥೆ ಬರೆಯಲು ಆರಂಭಿಸಿದ ‘ದಿಯಾ’ ಸಿನಿಮಾ ನಟ ಪೃಥ್ವಿ ಅಂಬರ್!



Read more

[wpas_products keywords=”deal of the day party wear dress for women stylish indian”]