ಹೈಲೈಟ್ಸ್:
- ಸಮ್ಮಿಶ್ರ ಸರಕಾರ ಇದ್ದಾಗ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಕೇಂದ್ರ ಸರಕಾರ ಮತ್ತು ತಮಿಳುನಾಡು ಸರಕಾರದ ಜೊತೆ ಮಾತುಕತೆ ನಡೆಸಿದ್ದರು
- ಅಂದೇ ಮೇಕೆದಾಟು ಯೋಜನೆಗೆ ಡಿಪಿಆರ್ ಸಿದ್ಧಪಡಿಸಿದ್ದರು ಎಂದ ಶಾಸಕಿ ಅನಿತಾ ಕುಮಾರಸ್ವಾಮಿ
- ತಮಿಳುನಾಡು ಸರಕಾರದ ಜತೆ ಮಾತುಕತೆ ನಡೆಸಿ ಸೌಹಾರ್ದ ವಾತಾವರಣ ನಿರ್ಮಿಸಲಾಗಿತ್ತೆಂದ ಎಚ್‌ಡಿಕೆ ಪತ್ನಿ
ಕನಕಪುರ ತಾಲೂಕಿನ ಮರಳವಾಡಿಯ ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರಹಳ್ಳಿ, ಹೆಬ್ಬಿದರ ಮೆಟ್ಟಿಲು ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮ್ಮಿಶ್ರ ಸರಕಾರ ಪತನಗೊಂಡ ಕಾರಣದಿಂದ ಯೋಜನೆ ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಮೇಕೆದಾಟು ಯೋಜನೆಯಿಂದ ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿನ ತತ್ವಾರ ತಪ್ಪಲಿದೆ. ಹಾಗಾಗಿ ಮೇಕೆದಾಟು ಯೋಜನೆಗೆ ನಮ್ಮ ಬೆಂಬಲವೂ ಇದೆ ಎಂದರು.
ಕರ್ಫ್ಯೂ ತಪ್ಪೇನಿಲ್ಲ
ಬೆಂಗಳೂರಿನಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು ರಾಜ್ಯದಲ್ಲೂ ಸಹ ಕೊರೊನಾ ಹೆಚ್ಚಾಗುತ್ತಿದೆ. ಹಾಗಾಗಿ ಕರ್ಫ್ಯೂ ಘೋಷಿಸಿದ್ದಾರೆ. ಅದರಲ್ಲಿ ತಪ್ಪೇನಿಲ್ಲ ಎಂದು ಅಭಿಪ್ರಾಯಪಟ್ಟರು.
ಸಹನೆ ಕಳೆದುಕೊಂಡರು
ರಾಮನಗರದಲ್ಲಿ ನಡೆದ ಮೊನ್ನೆಯ ಘಟನೆ ಬಗ್ಗೆ ಮಾತನಾಡಿದ ಶಾಸಕಿ ಕಾರ್ಯಕ್ರಮದಲ್ಲಿ ಕೆಲವರು ಸಚಿವರು ಹಾಗೂ ಸಿಎಂ ವಿರುದ್ಧ ಘೋಷಣೆ ಕೂಗುತ್ತಿದ್ದರು. ಅದಕ್ಕಾಗಿ ಮಂತ್ರಿಗಳು ಆ ರೀತಿ ನಡೆದುಕೊಂಡರು. ರಾಜಕೀಯ ವಿಚಾರ ಮಾತನಾಡುವಾಗ ನಾನು ಕೂಡ ರಾಜಕೀಯ ಬೇಡ ಎಂದೆ, ಮುಖ್ಯಮಂತ್ರಿಗಳು ಸಹ ಸನ್ನೆ ಮೂಲಕ ಬೇಡ ಎಂದು ಹೇಳಿದರು. ಸಚಿವರ ಸಹನೆಯ ಕಟ್ಟೆ ಒಡೆದಿದ್ದರಿಂದ ಆ ರೀತಿಯ ಘಟನೆ ನಡೆಯಿತು ಎಂದರು.
4.5 ಕೋಟಿ ವೆಚ್ಚದಲ್ಲಿ ಕಾಮಗಾರಿ
ಸುಮಾರು 4.5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದ್ದು ಗ್ರಾಮಸ್ಥರು ಈ ಹಿಂದೆ ನಿರ್ಮಿಸುವಂತೆ ಮನವಿ ಮಾಡಿದ್ದರು. ಇದರಿಂದ ಕುರುಬರಹಳ್ಳಿ, ಹೆಬ್ಬಿದರ ಮೆಟ್ಟಿಲು, ಬನ್ನಿಕುಪ್ಪೆ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಉಪಯೋಗವಾಗಲಿದೆ ಎಂದರು.
ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಾಮಕೃಷ್ಣ, ಕುಲಹಳ್ಳಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಮು, ಪಡುವನಗೆರೆ ಸಿದ್ದರಾಜು, ಹಾರೋಹಳ್ಳಿ ವಿ.ಎಸ್.ಎಸ್.ಎನ್ ಅಧ್ಯಕ್ಷ ಸೋಮಶೇಖರ್,ಚೀಲೂರು ಗ್ರಾಪಂ ಸದಸ್ಯರಾದ ಬಿಎಂ ರಾಜು, ರವಿಕುಮಾರ್,ತಿಮ್ಮಪ್ಪ, ಪ್ರದೀಪ್, ಭುಜಂಗಯ್ಯ, ಮಲ್ಲಪ್ಪ, ತೋಕಸಂದ್ರ ಗ್ರಾಪಂ ಅಧ್ಯಕ್ಷ ಸುನೇತ್ರಾ ಶಿವರುದ್ರಯ್ಯ, ಗುತ್ತಲ ಹುಣಸೆ ಶ್ರೀಕಂಠ, ಬನ್ನಿಕುಪ್ಪೆ ಪ್ರಕಾಶ್ ಸೇರಿದಂತೆ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿ ಮುಖಂಡರು ಹಾಜರಿದ್ದರು.
Read more
[wpas_products keywords=”deal of the day sale today offer all”]