Karnataka news paper

ಕರ್ನಾಟಕದಲ್ಲಿ ಗುರುವಾರ ಒಂದೇ ದಿನ 5 ಸಾವಿರದ ಗಡಿ ದಾಟಿದ ಕೊರೊನಾ ಕೇಸ್: ಬೆಂಗಳೂರಿನಲ್ಲೇ 4,324 ಪ್ರಕರಣ..!


ಹೈಲೈಟ್ಸ್‌:

  • ರಾಜ್ಯದಲ್ಲಿ ಈವರೆಗೆ ದೃಢಪಟ್ಟ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 30,22,603
  • ರಾಜ್ಯದ ವಿವಿಧೆಡೆ ಗುರುವಾರ 271 ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್
  • ಕರ್ನಾಟಕದ ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಶೇ. 3.95

ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಗುರುವಾರ ಬರೋಬ್ಬರಿ 5,031 ಕೊರೊನಾ ವೈರಸ್ ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ಕಳೆದ 24 ಗಂಟೆಗಳಲ್ಲಿ 4,324 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ದೃಢಪಟ್ಟ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 30,22,603ಕ್ಕೆ ಏರಿಕೆ ಕಂಡಿದೆ.

ಗುರುವಾರ ಕೂಡಾ ರಾಜ್ಯದ ವಿವಿಧೆಡೆ 271 ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯಾದ್ಯಂತ ಈವರೆಗೆ ಕೊರೊನಾದಿಂದ ಗುಣಮುಖರಾದವರ ಒಟ್ಟು ಸಂಖ್ಯೆ 29,62,043ಕ್ಕೆ ಏರಿಕೆ ಕಂಡಿದೆ.

ಸದ್ಯ ರಾಜ್ಯದಲ್ಲಿ ಒಟ್ಟು 22,173 ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು ಇದ್ದು, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೂಡಾ ಓರ್ವ ಸೋಂಕಿತ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಒಟ್ಟು ಸಂಖ್ಯೆ 38,358ಕ್ಕೆ ಏರಿಕೆ ಕಂಡಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಶೇ. 3.95ಕ್ಕೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಈಗಾಗಲೇ ಶೇ. 6ಕ್ಕಿಂತಾ ಹೆಚ್ಚು ಪಾಸಿಟಿವಿಟಿ ದರ ದಾಖಲಾಗಿದೆ. ಅದೃಷ್ಟವಶಾತ್ ಮರಣ ಪ್ರಮಾಣ ತುಂಬಾನೇ ಕಡಿಮೆ ಇದ್ದು, ಎಲ್ಲ ಕೊರೊನಾ ಸೋಂಕಿತರು ಆದಷ್ಟು ಬೇಗ ಚೇತರಿಕೆ ಕಾಣುವ ಮೂಲಕ, ಸಾವಿನ ಪ್ರಮಾಣ ಶೂನ್ಯಕ್ಕೆ ಇಳಿಯಬೇಕಿದೆ.

ಜಿಲ್ಲಾವಾರು ಲೆಕ್ಕಾಚಾರ: ರಾಜಧಾನಿ ಬೆಂಗಳೂರು ನಗರ ಜಿಲ್ಲೆ ರಾಜ್ಯದ ಒಟ್ಟು ಸೋಂಕಿತರ ಪೈಕಿ ಸಿಂಹಪಾಲನ್ನು ಹೊಂದಿದೆ. ಸಿಲಿಕಾನ್ ಸಿಟಿಯಲ್ಲಿ ಗುರುವಾರ ಒಂದೇ ದಿನ 4,324 ಹೊಸ ಕೊರೊನಾ ಸೋಂಕಿತರು ಸೃಷ್ಟಿಯಾಗಿದ್ದಾರೆ. ಇನ್ನು ದಕ್ಷಿಣಕನ್ನಡ 106, ಉಡುಪಿ 92, ಮಂಡ್ಯ 66, ಮೈಸೂರು 65, ಬೆಳಗಾವಿ 64, ಧಾರವಾಡ 48, ಹಾಸನ 47, ಕಲಬುರಗಿ 25, ಬೆಂಗಳೂರು ಗ್ರಾಮಾಂತರ 25, ಬಳ್ಳಾರಿ 21, ಚಿಕ್ಕಬಳ್ಳಾಪುರ 20, ತುಮಕೂರು 20, ಕೊಡಗು 19, ಶಿವಮೊಗ್ಗ 16, ಕೋಲಾರ 14, ಉತ್ತರ ಕನ್ನಡ 13, ಗದಗ 11 ಹಾಗೂ ವಿಜಯಪುರದಲ್ಲಿ 11 ಪ್ರಕರಣಗಳು ಗುರುವಾರ ದೃಢಪಟ್ಟಿವೆ.

ಕರ್ನಾಟಕದಲ್ಲಿ ಬುಧವಾರ 4,246 ಕೊರೊನಾ ಹೊಸ ಕೇಸ್..! ಬೆಂಗಳೂರಲ್ಲೇ 3,605 ಪ್ರಕರಣ..!
ಇನ್ನುಳಿದಂತೆ ಚಿಕ್ಕಮಗಳೂರು 09, ಚಿತ್ರದುರ್ಗ 04, ರಾಮನಗರ 03, ದಾವಣಗೆರೆ 03, ಬೀದರ್ 03 ಹಾಗೂ ಚಾಮರಾಜ ನಗರದಲ್ಲಿ 02 ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ದೃಢಪಟ್ಟಿವೆ.

ಆದರೆ, ಹಾವೇರಿ, ಬಾಗಲಕೋಟೆ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಗುರುವಾರ ಯಾವುದೇ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಇನ್ನು ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ, ಈವರೆಗೆ ದೃಢಪಟ್ಟ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 226.

ಮೇಕೆ’ದಾಟ’ಲು ಸಂಘರ್ಷ: ಪಾದಯಾತ್ರೆ ನಿಲ್ಲದು ಎಂದ ಕಾಂಗ್ರೆಸ್‌, ಸರಕಾರದಿಂದ ಕ್ರಮದ ಎಚ್ಚರಿಕೆ!



Read more

[wpas_products keywords=”deal of the day sale today offer all”]