Karnataka news paper

ಕ್ರಿಕೆಟ್ ಆಧಾರಿತ ‘ಚಕ್ಡಾ ಎಕ್ಸ್ ಪ್ರೆಸ್’ ಚಿತ್ರದ ಮೂಲಕ ಅನುಷ್ಕಾ ಶರ್ಮಾ ಕಮ್ ಬ್ಯಾಕ್, ಟೀಸರ್ ಬಿಡುಗಡೆ


Online Desk

ಮುಂಬೈ: 2018ರ ಝೀರೋ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಬಾಲಿವುಡ್ ನಟಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನಷ್ಕಾ ಶರ್ಮಾ ಅವರು ಈಗ ಕ್ರಿಕೆಟ್ ಜಗತ್ತಿನ ಕಥೆಯ ಮೂಲಕ ಕಮ್ ಬ್ಯಾಕ್ ಆಗುತ್ತಿದ್ದಾರೆ.

ಮುಂಬರುವ ಕ್ರೀಡಾ ಸಿನಿಮಾ ಚಕ್ಡಾ ‘ಎಕ್ಸ್‍ಪ್ರೆಸ್‍ನಲ್ಲಿ ಅಭಿನಯಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದ್ದಾರೆ. ಹೌದು ಅವರ ಮುಂದಿನ ಸಿನಿಮಾ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಜುಲನ್ ಗೋಸ್ವಾಮಿಯವರ ಜೀವನಾಧಾರಿತ ಕಥೆಯಾಗಿದೆ.

ಹೊಸ ಚಕ್ದಾ ‘ಎಕ್ಸ್‍ಪ್ರೆಸ್’ ಚಿತ್ರದ ಟೀಸರ್ ಅನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಮಚಿಕೊಂಡಿರುವ ಅನುಷ್ಕಾ ಶರ್ಮಾ, ಅಷ್ಟೊಂದು ಪ್ರಾಧಾನ್ಯತೆ ಇಲ್ಲದ ಸಮಯದಲ್ಲೂ ಮಹಿಳಾ ಕ್ರಿಕೆಟ್ ತಂಡ ಪ್ರವೇಶಿಸಿ ಸಾಧನೆಗೈದ ಜುಲನ್ ಗೋಸ್ವಾಮಿಯವರ ರೂಪದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಮಹಿಳಾ ಕ್ರಿಕೆಟ್‍ನಲ್ಲಿ ಕ್ರಾಂತಿಯನ್ನುಂಟು ಮಾಡಿದ್ದ ಜೂಲನ್ ಮತ್ತು ಅವರ ತಂಡಕ್ಕೆ ಅಭಿನಂದನೆ ಹೇಳಬೇಕು. ಈ ಪಾತ್ರದಲ್ಲಿ ಕಾಣಿಸಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಅನುಷ್ಕಾ ಶರ್ಮಾ ಅವರು ಹೇಳಿದ್ದಾರೆ.





Read more…

[wpas_products keywords=”party wear dress for women stylish indian”]