ಹೈಲೈಟ್ಸ್:
- ಆನ್‌ಲೈಡ್ ಡೆಲಿವರಿ ಸಂಸ್ಥೆ ಡುಂಝೋದ ಶೇ. 25 ಶೇರು ಖರೀದಿಸಿದ ರಿಲಾಯನ್ಸ್
- 200 ಮಿಲಿಯನ್ ಡಾಲರ್ ಮೌಲ್ಯದ ಶೇರು ಖರೀದಿ ಮಾಡಿದ ರಿಲಾಯನ್ಸ್
- ರಿಲಾಯನ್ಸ್ ರಿಟೈಲ್, ಜಿಯೋ ಮಾರ್ಟ್ ಡೆಲಿವರಿ ಇನ್ನು ಸುಲಭ
200 ಮಿಲಿಯನ್ ಡಾಲರ್ (ಸುಮಾರು ₹ 1,488 ) ಕೊಟ್ಟು ಇಷ್ಟು ಪ್ರಮಾಣದ ಶೇರನ್ನು ರಿಲಾಯನ್ಸ್ ಖರೀದಿ ಮಾಡಿದೆ.
ಈ ಬಗ್ಗೆ ಎರಡೂ ಕಂಪನಿಗಳು ಜಂಟಿ ಮಾಹಿತಿ ಬಿಡುಗಡೆ ಮಾಡಿದ್ದು, 200 ಮಿಲಿಯನ್ ಡಾಲರ್ ಹೂಡಿಕೆ ಮಾಡುವ ಮೂಲಕ ಡುಂಝೋದ ಶೇ. 25.8 ರಷ್ಟು ಶೇರುಗಳನ್ನು ಖರೀದಿ ಮಾಡಲಾಗಿದೆ ಎಂದು ಮಾಹಿತಿಯಲ್ಲಿ ಹೇಳಲಾಗಿದೆ.
ಇನ್ನು ಈ ಒಪ್ಪಂದದ ಬಗ್ಗೆ ಹೇಳಿಕೆ ನೀಡಿರುವ ರಿಲಾಯನ್ಸ್ ರಿಟೇಲ್ ನಿರ್ದೇಶಕಿ ಇಶಾ ಅಂಬಾನಿ, ‘ಡುಂಝೋದೊಂದಿಗಿನ ಈ ಒಪ್ಪಂದದಿಂದಾಗಿ ರಿಲಾಯನ್ಸ್ ರಿಟೇಲ್ ಗ್ರಾಹಕರಿಗೆ ಅನುಕೂಲವಾಗಲಿದೆ. ರಿಲಾಯನ್ಸ್ ರಿಟೇಲ್‌ನ ಉತ್ಪನ್ನಗಳ ಶೀಘ್ರ ಡೆಲಿವರಿ ಇದರಿಂದ ಸಾಧ್ಯವಾಗಲಿದೆ. ನಮ್ಮ ವರ್ತಕರು ತೀರಾ ಕೆಳ ಸ್ತರದ ಗ್ರಾಹಕರಿಗೆ ಡೆಲಿವರಿ ಮಾಡಲು ಇದರಿಂದ ಅನುಕೂಲ ಆಗಲಿದೆ. ಜಿಯೋ ಮಾರ್ಟ್ ಮೂಲಕ ತಮ್ಮ ವ್ಯಾಪಾರವನ್ನೂ ಅವರು ವೃದ್ಧಿಸಿಕೊಳ್ಳಬಹುದು’ ಎಂದು ಅವರು ಹೇಳಿದ್ದಾರೆ.
ಇನ್ನು ಈ ಒಪ್ಪಂದ ಬಗ್ಗೆ ಡುಂಝೋದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಸಹ ಸಂಸ್ಥಾಪಕ ಕಬೀರ್ ಬಿಸ್ವಾಸ್ ಪ್ರತಿಕ್ರಿಯೆ ನೀಡಿದ್ದು, ‘ರಿಲಾಯನ್ಸ್ ಜತೆ ಒಪ್ಪಂದಿಂದಾಗಿ ನಮ್ಮ ಬೆಳವಣಿಗೆ ಇನ್ನಷ್ಟು ವೇಗವಾಗಲಿದೆ. ಹಾಗೂ ಭಾರತೀಯರು ದಿನ ಅಗತ್ಯದ ಉತ್ಪನ್ನಗಳ ಖರೀದಿಯ ಭಾಷ್ಯ ಬದಲಾಗಲಿದೆ’ ಎಂದು ಹೇಳಿದ್ದಾರೆ.
ರಿಲಾಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ನೇತೃತ್ವದಲ್ಲಿ ನಡೆದ ಬಂಡವಾಳ ಸಂಗ್ರಹ ಕಾರ್ಯಕ್ರಮದಲ್ಲಿ ಡುಂಝೋ ಒಟ್ಟು 240 ಮಿಲಿಯನ್ ಡಾಲರ್ ಬಂಡವಾಳವನ್ನು ಡುಂಝೋ ಸಂಗ್ರಹಿಸಿದೆ. ಸದ್ಯ ಡುಂಝೋದಲ್ಲಿ ಹೂಡಿಕೆ ಮಾಡಿರುವ ಲೈಟ್ ಬಾಕ್ಸ್, ಲೈಟ್ ರಾಕ್ಸ್, ತ್ರಿ ಎಲ್ ಕ್ಯಾಪಿಟಲ್ ಹಾಗೂ ಅಲ್ಟೇರಿಯಾ ಕ್ಯಾಪಿಟಲ್ ಕೂಡ ಬಂಡವಾಳ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು.
ಈ ಕಾರ್ಯಕ್ರಮದಲ್ಲೇ ರಿಲಾಯನ್ಸ್ ರಿಟೇಲ್ 200 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ.
ಈ ಕಾರ್ಯಕ್ರಮದಲ್ಲಿ ಡುಂಝೋಗೆ, ಮಾರ್ಗಸ್ ಸ್ಟಾನ್ಲೇ ಹಣಕಾಸು ಸಲಹೆಗಾರರನಾಗಿ ಹಾಗೂ ಸಿರಿಲ್ ಅಮರ್‌ಚಂದ್ ಮಂಗಲ್‌ದಾಸ್ ಕಾನೂನು ಸಲಹೆಗಾರನಾಗಿ ಕಾರ್ಯ ನಿರ್ವಹಿಸಿತು.
2014ರಲ್ಲಿ ಬೆಂಗಳೂರಿನಲ್ಲಿ ಆರಂಭವಾಗಿದ್ದ ಡುಂಝೋ
2014ರಲ್ಲಿ ಆರಂಭವಾದ ಡುಂಝೋ ಆನ್‌ಲೈನ್ ಫುಡ್, ದಿನಸಿ, ತರ್ಕಾರಿ ಡೆಲಿವರಿ ಮಾಡಿ ಪ್ರಸಿದ್ಧಿ ಪಡೆದಿತ್ತು. ಅಲ್ಲದೇ 2021ರ ಆರಂಭದಲ್ಲಿ ಅಗತ್ಯ ವಸ್ತುಗಳ ಸರಬರಾಜು ಪ್ರಾರಂಭಿಸಿದ್ದ ಡುಂಝೋ, 15-20 ನಿಮಿಷಗಳಲ್ಲಿ ಡೆಲಿವರಿ ಮಾಡಿ ಪ್ರಸಿದ್ಧಿ ಪಡೆದಿತ್ತು. ಕಂಪನಿ ಹೆಸರು ಪಡೆಯುತ್ತಲೇ ರಿಲಾಯನ್ಸ್ ರಿಟೈಲ್ ಕಾಲು ಭಾಗದಷ್ಟು ಶೇರು ಖರೀದಿ ಮಾಡಿದೆ.
ಇದರಿಂದ ರಿಲಾಯನ್ಸ್ ರಿಟೈಲ್ ಹಾಗೂ ಜಿಯೋ ಮಾರ್ಟ್‌ನ ಉತ್ಪನ್ನಗಳ ಡೆಲಿವರಿ ಸುಗಮವಾಗಲಿದೆ.
Read more
[wpas_products keywords=”deal of the day sale today offer all”]