ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಪ್ರವಾಸದ ವೇಳೆ ಅಲ್ಲಿನ ಕಾಂಗ್ರೆಸ್ ಸರ್ಕಾರ ಅಡ್ಡಿಪಡಿಸಿ, ಅವಮಾನಿಸಿರುವುದಕ್ಕಾಗಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ (ಎಐಸಿಸಿ) ಕ್ಷಮೆ ಯಾಚಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
‘ಪಂಜಾಬ್ ನಲ್ಲಿ ಪ್ರಧಾನಿಯನ್ನು ಅವಮಾನಿಸಿರುವುದು ಅಕ್ಷಮ್ಯ. ಈ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕರು ಕ್ಷಮೆ ಯಾಚಿಸಬೇಕು. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ರಾಜ್ಯದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಈ ಕುರಿತು ಪ್ರತಿಕ್ರಿಯಿಸಬೇಕು. ಪ್ರಧಾನಿಯನ್ನು ಅವಮಾನಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಬೇಕು ಎಂದರು.
ವರಿಷ್ಠರೆರ ನಿರ್ಧಾರ ಮಾಡಬೇಕು: ಸಂಪುಟ ಪುನರ್ ರಚನೆ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಸಂಪುಟ ಪುನರ್ ರಚನೆ ಮಾಡಬೇಕು, ಗುಜರಾತ್ ಮಾದರಿಯಲ್ಲಿ ಯುವಕರಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆಗಳು ಇರುವುದು ನಿಜ. ಈ ಕುರಿತು ಬಿಜೆಪಿ ವರಿಷ್ಠರೇ ನಿರ್ಧಾರ ಮಾಡಬೇಕು’ ಎಂದರು.
Read more from source
[wpas_products keywords=”deal of the day sale today kitchen”]