Karnataka news paper

ಚುನಾವಣಾ ರ‍್ಯಾಲಿ, ರೋಡ್‌ ಶೋಗಳು ಬೇಡ: ಚು. ಆಯೋಗಕ್ಕೆ ಕೋವಿಡ್ ಟಾಸ್ಕ್‌ ಫೋರ್ಸ್‌ ಮುಖ್ಯಸ್ಥರ ಶಿಫಾರಸ್ಸು


ಹೈಲೈಟ್ಸ್‌:

  • ದೇಶದಲ್ಲಿ ಸದ್ಯಕ್ಕೆ ಚುನಾವಣಾ ಸಮಾವೇಶಗಳನ್ನು ನಡೆಸಲು ಅನುಕೂಲಕರ ವಾತಾವರಣ ಇಲ್ಲ
  • ಕೋವಿಡ್‌ ಟಾಸ್ಕ್‌ ಫೋರ್ಸ್‌ ಮುಖ್ಯಸ್ಥ ವಿ.ಕೆ ಪೌಲ್‌ರಿಂದ ಚುನಾವಣಾ ಆಯೋಗಕ್ಕೆ ಮಾಹಿತಿ
  • ಭಾರೀ ಜನ ಸೇರುವುದರಿಂದ ಕೋವಿಡ್‌ ಮತ್ತಷ್ಟು ಹೆಚ್ಚಳವಾಗುವ ಸಂಭವ

ಹೊಸದಿಲ್ಲಿ: ಸದ್ಯ ದೇಶದಲ್ಲಿ ಕೋವಿಡ್‌ 19 ಸೋಂಕು ಪರಿಸ್ಥಿತಿ ಉಲ್ಬಣಿಸಿದ್ದು, ಯಾವುದೇ ಚುನಾವಣಾ ರ‍್ಯಾಲಿ ಹಾಗೂ ರೋಡ್‌ ಶೋ ನಡೆಸುವುದಕ್ಕೆ ಅನುಕೂಲಕರ ವಾತಾವರಣ ಇಲ್ಲ. ಹೀಗಾಗಿ ಇಂಥ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡ ಕೂಡದು ಎಂದು ನೀತಿ ಆಯೋಗ ಚುನಾವಣಾ ಆಯೋಗಕ್ಕೆ ಹೇಳಿದೆ.

ಕೋವಿಡ್‌ ಟಾಸ್ಕ್‌ ಫೋರ್ಸ್‌ನ ಮುಖ್ಯಸ್ಥರೂ ನೀತಿ ಆಯೋಗದ ಸದಸ್ಯರೂ ಆಗಿರುವ ವಿಕೆ ಪೌಲ್‌, ಹೀಗೊಂದು ಶಿಫಾರಸ್ಸನ್ನು ಚುನಾವಣಾ ಆಯೋಗಕ್ಕೆ ಮಾಡಿದ್ದಾರೆ.

ಏತನ್ಮಧ್ಯೆ ಭಾರೀ ಪ್ರಮಾಣದಲ್ಲಿ ಜನ ಸೇರುವ ಸಮಾವೇಶಗಳಿಗೆ ನಿರ್ಬಂಧ ಹೇರುವ ಬದಲು, ರಾಜಕೀಯ ಪಕ್ಷಗಳೇ ಖುದ್ದು ಇಂಥ ಸಮಾವೇಶಗಳನ್ನು ಆಯೋಜಿಸುವುದನ್ನು ರದ್ದು ಮಾಡಬೇಕು ಎಂದು ಚುನಾವಣಾ ಆಯೋಗ ಹೇಳಿದೆ.

ಓಮಿಕ್ರಾನ್‌ ಭೀತಿ: ಉತ್ತರ ಪ್ರದೇಶದಲ್ಲಿ ಚುನಾವಣಾ ರ‍್ಯಾಲಿಗಳನ್ನು ರದ್ದುಗೊಳಿಸಿದ ಕಾಂಗ್ರೆಸ್‌
ಪಂಚರಾಜ್ಯ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಇಂಥಹದ್ದೊಂದು ಶಿಫಾರಸ್ಸನ್ನು ವಿಕೆ ಪೌಲ್‌ ಚುನಾವಣಾ ಆಯೋಗಕ್ಕೆ ಮಾಡಿದ್ದಾರೆ. ದೇಶದಲ್ಲಿ ಕೋವಿಡ್‌ ರೂಪಾಂತರಿ ವೈರಸ್‌ ‘ಓಮಿಕ್ರಾನ್‌’ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದರಿಂದ ಹೆಚ್ಚು ಜನ ಸೇರುವ ಚುನಾವಣಾ ಸಭೆ ಹಾಗೂ ಸಮಾವೇಶಗಳನ್ನು ರದ್ದು ಮಾಡಬೇಕು ಎಂದು ಅವರು ಹೇಳಿದ್ದಾರೆ.

ಇನ್ನು ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್‌ ಹಾಗೂ ಮಣಿಪುರದಲ್ಲಿ ಈಗಾಗಲೇ ಅಲ್ಲಿನ ವಸ್ತುಸ್ಥಿತಿಯನ್ನು ಚುನಾವಣಾ ಆಯೋಗ ಅಧ್ಯಯನ ಮಾಡಿದೆ. ಈ ರಾಜ್ಯಗಳಲ್ಲಿ ಲಸಿಕಾರಣ ತ್ವರಿತಗತಿಯಲ್ಲಿ ಮಾಡಬೇಕು ಎಂದು ಆಯಾ ರಾಜ್ಯಗಳಿಗೆ ಆಯೋಗ ಸೂಚನೆಯನ್ನೂ ನೀಡಿದೆ.

ಇದರ ನಡುವೆ ಚುನಾವಣಾ ಆಯೋಗ ಕೂಡ ಚುನಾವಣೆ ನಡೆಸಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಸಿಬ್ಬಂದಿಗಳು ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಸೂಚಿಸಿದೆ. ಅಲ್ಲದೇ ಚುನಾವಣೆಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ, ಹೆಚ್ಚಿನ ಮತಟ್ಟೆಗಳ ಸ್ಥಾಪನೆ ಮುಂತಾದ ಕ್ರಮಗಳನ್ನು ಆಯೋಗ ಕೈಗೊಳ್ಳುತ್ತಿದೆ.

ಯು.ಪಿ ಚುನಾವಣಾ ಅಖಾಡಕ್ಕೆ ಶ್ರೀ ಕೃಷ್ಣ ಎಂಟ್ರಿ: ಕನಸಲ್ಲಿ ಬರುವ ಗೋಪಾಲ ಓಟು ಕೊಡುವನೇ? ಶಾಪ ನೀಡುವನೇ?
ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಈ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಶೀಘ್ರವೇ ಆಯೋಗ ಅಧಿಸೂಚನೆ ಹೊರಡಿಸಿ, ಮತದಾನ ನಡೆಯುವ ದಿನಾಂಕಗಳನ್ನು ಘೋಷಣೆ ಮಾಡಲಿದೆ.

ಪಶ್ಚಿಮ ಬಂಗಾಳ ಚುನಾವಣೆ ಬಗ್ಗೆ ಕೋಲ್ಕತಾ ಹೈಕೋರ್ಟ್ ಅಸಮಾಧಾನ

ಇನ್ನು 2021ರ ಏಪ್ರಿಲ್‌ನಲ್ಲಿ ನಡೆದ ಪಶ್ಚಿಮ ಬಂಗಾಳ ಚುನಾವಣೆ ವೇಳೆ ದೇಶದಲ್ಲಿ ಕೋವಿಡ್‌ ಎರಡನೇ ಅಲೆ ತಾಂಡವವಾಡುತ್ತಿತ್ತು. ಈ ವೇಳೆ ರಾಜಕೀಯ ಸಮಾವೇಶದಲ್ಲಿ ಗರಿಷ್ಠ 500 ಮಂದಿ ಮಾತ್ರ ಭಾಗವಹಿಸಬೇಕು ಎಂದು ಆಯೋಗ ಆದೇಶ ಹೊರಡಿಸಿತ್ತು. ಅಲ್ಲದೇ ಫಲಿತಾಂಶದ ಬಳಿಕದ ವಿಜಯೋತ್ಸವಕ್ಕೂ ಆಯೋಗ ಬ್ರೇಕ್‌ ಹಾಕಿತ್ತು.

ಪಾಕ್‌ ಗಡಿ ಸಮೀಪ ಪ್ರಧಾನಿಗೆ ಭದ್ರತೆ ನೀಡಲಾಗದವರು ರಾಜೀನಾಮೆ ಕೊಟ್ಟು ನಡೀರಿ: ಕ್ಯಾ. ಅಮರೀಂದರ್‌ ಕಿಡಿ
ಇಷ್ಟಾಗಿಯೂ ಚುನಾವಣೆ ನಡೆದ ಬಳಿಕ ಬಾರೀ ಪ್ರಮಾಣದಲ್ಲಿ ಸೋಂಕು ಹೆಚ್ಚಳವಾಗಿತ್ತು. ಇದರಿಂದ ಕೆಂಡಾಮಂಡಲವಾಗಿದ್ದ ಕೋಲ್ಕತಾ ಹೈಕೋರ್ಟ್‌, ಚುನಾವಣಾ ಸಮಾವೇಶಗಳನ್ನು ತಡೆಯಲು ಆಯೋಗ ವಿಫಲವಾಗಿದೆ. ಹೀಗಾಗಿಯೇ ಕೋವಿಡ್‌ 19 ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಚುನಾವಣಾ ಆಯೋಗದ ನಿರ್ಲಕ್ಷ್ಯದಿಂದಾಗಿಯೇ ಚುನಾವಣಾ ಸಮಾವೇಶಗಳು, ಕೊರೊನಾ ಸೋಂಕಿನ ಸೂಪರ್‌ ಸ್ಪ್ರೆಡರ್‌ಗಳಾಗಿ ಮಾರ್ಪಾಡಾದವು ಎಂದು ಕೋರ್ಟ್‌ ಚಾಟಿ ಬೀಸಿತ್ತು.



Read more

[wpas_products keywords=”deal of the day sale today offer all”]