ಹೈಲೈಟ್ಸ್:
- ಗೊಡ್ಡು ಬೆದರಿಕೆಗಳಿಗೆ ಹೆದರುವ ಮಕ್ಕಳು ನಾವಲ್ಲ!
- ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ
ವಿಧಾನಸೌಧದಲ್ಲಿ ಮಾತನಾಡಿದ ಅವರು, ಗೃಹ ಸಚಿವರ ವಿರುದ್ಧ ಕೆಂಡಾಮಂಡಲವಾದರು. ಯಾರು ಬೇಕಾದರೂ ಅರೆಸ್ಟ್ ಮಾಡಿಕೊಳ್ಳಲಿ. ಕೊವೀಡ್ ರೂಲ್ಸ್ ಗೆ ನಾವು ಗೌರವ ಕೊಡ್ತೇವೆ. ಕೊವೀಡ್ ಇದೆ, ಇಲ್ಲಿ ಎಲ್ಲರು ಗುಂಪಾಗಿ ಇದ್ದಾರಲ್ಲ? ಹೋಮ್ ಮಿನಿಸ್ಟರ್ ಏನು ಮಾಡ್ತಿದ್ಸಾರೆ..? ಎಂದು ಪ್ರಶ್ನಿಸಿದರು.
ಕಠಿಣ ನಿರ್ಬಂಧವಿದ್ದರೂ ಪಾದಯಾತ್ರೆಯಿಂದ ಹಿಂದೆ ಸರಿಯಲ್ಲ ಎಂದ ಕಾಂಗ್ರೆಸ್; ಸರ್ಕಾರದ ಮುಂದಿನ ನಡೆ ಏನು?
ಯಾವುದು ಇದು ಆಟ? ಜೈಲಿಗೆ ಹೋಗಲು ನಾನು ಸಿದ್ದವಿದ್ದೇವೆ. ಪಾದಯಾತ್ರೆಗೆ ಎಲ್ಲರು ಬರ್ತಾರೆ. ಅದನ್ನು ಎಲ್ಲಾ ಅವ್ರು ಊರಲ್ಲಿ ಇಟ್ಟುಕೊಳ್ಳಲಿ. ನಮ್ಮತ್ತ ಎಲ್ಲ ಬೇಡ. ಹೋಮ್ ಮಿನಿಸ್ಟರ್, ಆರೋಗ್ಯ ಸಚಿವರು ಎಲ್ಲಾ ಏನು ಮಾಡ್ತಿದ್ದಾರೆ? ಎಂದು ಗರಂ ಆದರು.
ನಾವು 40 ವರ್ಷದಿಂದ ರಾಜಕಾರಣ ಮಾಡಿಕೊಂಡು ಬರ್ತಿದ್ದೇವೆ. ಇದನ್ನು ನಿಲ್ಲಿಸೋಕೆ ಹೋಮ್ ಮಿನಿಸ್ಟರ್ ಇನ್ನೊಂದು ಜನ್ಮ ಹುಟ್ಟಿ ಬರಬೇಕು. ಇಲ್ಲಿ ಇಷ್ಟೊಂದು ಜನ ಸೇರಿದ್ದಾರಲ್ಲ, ಯಾಕೆ ಇವ್ರ ಮೇಲೆ ಕೇಸ್ ಹಾಕಿಲ್ಲ? ಹೋಮ್ ಮಿನಿಸ್ಟರ್ ಯಾರನ್ನು ಹೆದರಿಸುತ್ತಿದ್ದಾರೆ? ಪಾದಯಾತ್ರೆ ಮಾಡ್ತೀವಿ ತಾಕತ್ ಇದ್ರೆ ಅರೆಸ್ಟ್ ಮಾಡಲಿ ಎಂದು ಸವಾಲು ಹಾಕಿದರು.ಅವರ ತಾಕತ್ತು ಏನಿದೆ ಎಂಬುದನ್ನು ತೋರಿಸಲಿ, ಆಮೇಲೆ ನಾವು ಏನು ಮಾಡ್ತೀವಿ ಅಂತಾ ಆಮೇಲೆ ನಾವು ತೋರಿಸ್ತೀವಿ ಎಂದರು.
ಕಾಂಗ್ರೆಸ್ ನವರು ಹೇಗೆ ಬೇಕಾದರೂ ನಡೆದುಕೊಳ್ಳಲಿ ; ಆರಗ ಜ್ಞಾನೇಂದ್ರ
ಇನ್ನು ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಕಾಂಗ್ರೆಸ್ ನವರು ಹೇಗೆ ಬೇಕಾದರೂ ನಡೆದುಕೊಳ್ಳಲಿ.ಜನರು ಎಲ್ಲವನ್ನೂ ನೋಡ್ತಿದ್ದಾರೆ, ಅವರ ಬುದ್ದಿ ಕಲಿಸ್ತಾರೆ. ಈಗಾಗಲೇ ಪ್ರಧಾನಿಗಳ ರ್ಯಾಲಿ ಕೂಡ ರದ್ದು ಮಾಡಿದ್ದಾರೆ.ಇಂತಹ ಸಂದರ್ಭದಲ್ಲಿ ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ರೆ, ಕಾನೂನು ರೀತಿಯಲ್ಲಿ ಕ್ರಮ ಆಗುತ್ತದೆ ಎಂದರು.
ಇನ್ನು ವಿಧಾನಸೌಧದಲ್ಲಿ ಜನಜಂಗುಲಿ ವಿಚಾರವಾಗಿ ಯಾಕೆ ಕ್ರಮ ಇಲ್ಲ ಎಂಬ ಪ್ರಶ್ನೆಗೆ, ಎಲ್ಲ ಪಕ್ಷದವರು ಸೇರಿದ್ದಾರೆ. ಅವರ ಪಕ್ಷದವರು ಇಲ್ಲಿ ಇದ್ದಾರಲ್ಲ ಎಂದು ಡಿಕೆಶಿಗೆ ತಿರುಗೇಟು ನೀಡಿದರು.
Read more
[wpas_products keywords=”deal of the day sale today offer all”]