Karnataka news paper

ಮೊದಲ ಬಾರಿಗೆ ರಿಯಾಲಿಟಿ ಶೋ ಜಡ್ಜ್ ಆದ ನಟಿ ಮೇಘನಾ ರಾಜ್ ಸರ್ಜಾ


ಹೈಲೈಟ್ಸ್‌:

  • ಕಿರುತೆರೆ ಮೂಲಕ ಪ್ರೇಕ್ಷಕರ ಮುಂದೆ ಬಂದ ನಟಿ ಮೇಘನಾ ರಾಜ್
  • ಡ್ಯಾನ್ಸ್ ಚಾಂಪಿಯನ್‌ಶಿಪ್ ಶೋನಲ್ಲಿ ನಟಿ ಮೇಘನಾ ರಾಜ್‌
  • ಮೊದಲ ಬಾರಿಗೆ ಡ್ಯಾನ್ಸ್ ರಿಯಾಲಿಟಿ ಶೋ ಜಡ್ಜ್ ಆದ ‘ರಾಜಾ ಹುಲಿ’ ನಟಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ‘ಡ್ಯಾನ್ಸ್ ಚಾಂಪಿಯನ್‌ಶಿಪ್‌’ ಶೋ ಮೂಡಿ ಬರುತ್ತಿದೆ. ಈ ಶೋನಲ್ಲಿ ಮಯೂರಿ, ವಿಜಯ್ ರಾಘವೇಂದ್ರ ಅವರು ಜಡ್ಜ್ ಎಂದು ಈಗಾಗಲೇ ಈ ರಿಯಾಲಿಟಿ ಶೋ ನಿರ್ದೇಶಕ ಪ್ರಕಾಶ್ ಹೇಳಿದ್ದರು. ಇದರ ಜೊತೆಗೆ ಪ್ರತಿ ವಾರ ಒಬ್ಬೊಬ್ಬ ಸೆಲೆಬ್ರಿಟಿ ಜಡ್ಜ್ ಆಗಿ ಬರಲಿದ್ದಾರೆ ಎಂದು ಕುತೂಹಲ ಮೂಡಿಸಿದ್ದರು. ಅದರಂತೆ ‘ಡ್ಯಾನ್ಸ್ ಚಾಂಪಿಯನ್‌ಶಿಪ್‌’ ಶೋನ ಮೊದಲ ಎಪಿಸೋಡ್‌ಗೆ ನಟಿ ಮೇಘನಾ ರಾಜ್ ಅದ್ದೂರಿ ಎಂಟ್ರಿ ನೀಟಿದ್ದಾರೆ.

ನಟಿ ಮೇಘನಾ ರಾಜ್ ಅವರು ಎರಡು ವರ್ಷದಿಂದ ಅದರಲ್ಲಿಯೂ ಗರ್ಭಿಣಿಯಾದಾಗಿನಿಂದ ಸ್ವಲ್ಪ ಸಿನಿಮಾ, ರಿಯಾಲಿಟಿ ಶೋನಿಂದ ದೂರವಿದ್ದರು. ಈಗ ಅವರು ಮೊದಲ ಬಾರಿಗೆ ರಿಯಾಲಿಟಿ ಶೋನ ಜಡ್ಜ್ ಆಗಿದ್ದಾರೆ. ಈ ವಿಷಯವನ್ನು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈಗಾಗಲೇ ಕಲರ್ಸ್ ವಾಹಿನಿ ಈ ಶೋನ ಪ್ರೋಮೋ ರಿಲೀಸ್ ಮಾಡಿದ್ದು, ಅದರಲ್ಲಿ ಮೇಘನಾ ಸ್ಪರ್ಧಿಗಳ ಡ್ಯಾನ್ಸ್ ನೋಡಿ ಖುಷಿಪಟ್ಟಿದ್ದಾರೆ. ಈ ಪ್ರೋಮೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು “ಸಾಕಷ್ಟು ಮೊದಲುಗಳಿವೆ, ಅದರಲ್ಲಿ ಡ್ಯಾನ್ಸ್ ರಿಯಾಲಿಟಿ ಶೋನ ಜಡ್ಜ್ ಆಗಿರೋದು ಇದೇ ಮೊದಲು. ಲೋಕೇಶ್ ಪ್ರೊಡಕ್ಷನ್ಸ್ ತಂಡಕ್ಕೆ ಧನ್ಯವಾದಗಳು. ಇದು ಸುಂದರ ಅನುಭವ. ಮೊದಲ ಬಾರಿಗೆ ಸೆಲೆಬ್ರಿಟಿ ಅತಿಥಿ ಜಡ್ಜ್ ಆಗಿದ್ದೇನೆ. ಎಲ್ಲ ಪ್ರತಿಭಾವಂತ ಸ್ಪರ್ಧಿಗಳಿಗೆ ಒಳ್ಳೆಯದಾಗಲಿ” ಎಂದು ಹೇಳಿದ್ದಾರೆ. ಮೇಘನಾರನ್ನು ಕಿರುತೆರೆಯಲ್ಲಿ ನೋಡುತ್ತಿರುವುದಕ್ಕೆ ಅವರ ಅಭಿಮಾನಿಗಳು, ಸ್ನೇಹಿತರು ಕಾಯುತ್ತಿದ್ದಾರೆ.

ಸೆನ್ಸಾರ್ ಅಂಗಳದಲ್ಲಿ ಚಿರು ಸರ್ಜಾ ನಟನೆಯ ‘ರಾಜಮಾರ್ತಾಂಡ’; ಅಣ್ಣನ ಚಿತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್

ಮೇಘನಾ ರಾಜ್ ಈ ಹಿಂದೆ ಕೆಲ ರಿಯಾಲಿಟಿ ಶೋಗಳಿಗೆ ಅತಿಥಿಯಾಗಿ ಹೋಗಿದ್ದಾರೆ. ಮಗ ರಾಯನ್ ಹುಟ್ಟಿದ ನಂತರದಲ್ಲಿ ಮೊದಲ ಬಾರಿಗೆ ಅವರು ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ರಾಯನ್ ರಾಜ್ ಸರ್ಜಾಗೆ ಒಂದು ವರ್ಷ ತುಂಬಿದ್ದು, ಇತ್ತೀಚೆಗೆ ಮೇಘನಾ ಅವರು ಕೆಲಸದ ಕಡೆಗೆ ಸ್ವಲ್ಪ ಸ್ವಲ್ಪ ಗಮನ ಕೊಡುತ್ತಿದ್ದಾರೆ. ಇದರ ಜೊತೆಗೆ ನಿರ್ದೇಶಕ ಪನ್ನಗಾಭರಣ ಜೊತೆ ಸಿನಿಮಾ ಕೂಡ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಮೇಘನಾ ರಾಜ್ ಅವರು ಮಗನ ಜೊತೆಗಿನ ಫೋಟೋ, ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

ಸಾಂಟಾ ಕ್ಲಾಸ್ ಕಡೆಯಿಂದ ಮೇಘನಾ ರಾಜ್ ಬಯಸುತ್ತಿರುವುದು ‘ಇದೊಂದೇ’ ಗಿಫ್ಟ್!

ಈ ಶೋನಲ್ಲಿ 14 ಜೋಡಿಗಳು ಭಾಗವಹಿಸಲಿದ್ದಾರೆ. ಅಕುಲ್ ಬಾಲಾಜಿ ಈ ಶೋನ ನಿರೂಪಣೆ ಮಾಡಲಿದ್ದಾರೆ. ಅದರ ಜೊತೆಗೆ ವಿಜಯ್ ರಾಘವೇಂದ್ರ, ಮಯೂರಿ ಅವರು ಈ ಶೋನಲ್ಲಿ ಶಾಶ್ವತ ಜಡ್ಜ್ ಆಗಿರಲಿದ್ದಾರೆ. ಸೃಜನ್ ಲೋಕೇಶ್ ಅವರು ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಈ ಶೋಕ್ಕೆ ಹಣ ಹೂಡಿದ್ದಾರೆ. ಎಲ್ಲ ವಯೋಮಾನದ ಸ್ಪರ್ಧಿಗಳು ಈ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರೋದು ವಿಶೇಷ. ವಿಭಿನ್ನವಾಗಿ ಸ್ಪರ್ಧಿಗಳ ಜೋಡಿ ಕೂಡ ಮಾಡಲಾಗಿದೆ. ಧಾರಾವಾಹಿ ನಟ, ನಟಿಯರು ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್‌ನ ಸ್ಪರ್ಧಿಗಳು ಎನ್ನೋದು ದೊಡ್ಡ ವಿಶೇಷ. ನಟಿ ಅನ್ವಿತಾ ಸಾಗರ್, ಅರ್ಜುನ್ ಯೋಗಿ, ಸೂರಜ್, ಅಮೃತಾ ಮೂರ್ತಿ, ವಸಂತ್, ಐಶ್ವರ್ಯಾ ಸಿಂಧೋಗಿ ಮುಂತಾದವರು ಈ ಶೋನಲ್ಲಿ ಸ್ಪರ್ಧಿಗಳಿದ್ದಾರೆ. ಬಹುತೇಕ ಕಲಾವಿದರಿಗೆ ಈ ಶೋ ಹೊಸದು. ಹೀಗಾಗಿ ವೀಕ್ಷಕರು ಕೂಡ ‘ಡ್ಯಾನ್ಸ್ ಚಾಂಪಿಯನ್‌ಶಿಪ್’ ನೋಡಲು ಕಾಯುತ್ತಿದ್ದಾರೆ.

ನಾನು ಆ ಶೋನಲ್ಲಿ ಕಾಣಿಸಿಕೊಳ್ತೀನಿ, ಈ ಶೋನಲ್ಲಿ ಕಾಣಿಸಿಕೊಳ್ಳಲ್ಲ, ಅಷ್ಟೇ ವ್ಯತ್ಯಾಸ: ಸೃಜನ್ ಲೋಕೇಶ್



Read more

[wpas_products keywords=”deal of the day party wear dress for women stylish indian”]