
ಹೌದು, ಇಸ್ರೋ ಸಂಸ್ಥೆ ಭಾರತದಲ್ಲಿ ಜನಪ್ರಿಯತೆ ಪಡೆದಿರುವ ಒಪ್ಪೊ ಕಂಪೆನಿ ಜೊತೆ ನಾವಿಕ್ ಸಂದೇಶ ಸೇವೆ ಸಂಶೋದನೆಗಾಗಿ ಕೈ ಜೋಡಿಸಿದೆ. ಒಪ್ಪೋ ಕಂಪೆನಿ ಭಾರತದಲ್ಲಿ ಮಾರಾಟವಾಗುವ ತನ್ನ ಭವಿಷ್ಯದ ಫೋನ್‌ಗಳಲ್ಲಿ ನ್ಯಾವಿಕ್ ಆಧಾರಿತ ಸಂದೇಶ ಸೇವೆಯನ್ನು ಬಳಸುತ್ತದೆ ಎನ್ನಲಾಗಿದೆ. ಇನ್ನು ಈ ಒಪ್ಪಂದವು ಒಪ್ಪೊ ಇಂಡಿಯಾ ಇಂಡಿಯಾ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌ಗಳಲ್ಲಿ NavIC ಕಿರು ಸಂದೇಶ ಫೀಚರ್ಸ್ ಅನ್ನು ಅಳವಡಿಸುವ ಮೂಲಕ ಸ್ಥಳೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಹಾಯಕವಾಗಲಿದೆ. ಹಾಗಾದ್ರೆ ಒಪ್ಪೊ ಮತ್ತು ಇಸ್ರೋ ನಡುವಿನ ಒಪ್ಪಂದದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಸ್ರೋ ಮತ್ತು ಒಪ್ಪೋ ಇಂಡಿಯಾ ನಡುವಿನ ಒಪ್ಪಂದ ಭಾರತದಲ್ಲಿ ನಾವಿಕ್ ಸಂದೇಶದ ಅಭಿವೃದ್ದಿಗೆ ಸಹಾಕಾರಿಯಾಗಲಿದೆ. ಈ ಒಪ್ಪಂದವು ಭವಿಷ್ಯದ ಸಹಯೋಗಗಳಿಗೆ ದಾರಿ ಮಾಡಿಕೊಡುತ್ತದೆ ಎಂದು Oppo ಇಂಡಿಯಾ ಪತ್ರಿಕಾ ಟಿಪ್ಪಣಿಯಲ್ಲಿ ಹೇಳಿದೆ. ಇನ್ನು ಈ ಒಪ್ಪಂದವು Oppo ಮತ್ತು ISRO ನಡುವೆ NavIC ಸಂದೇಶ ಸೇವೆಗಳಿಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿಯ ವಿನಿಮಯವನ್ನು ಸಕ್ರಿಯಗೊಳಿಸುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ಈ ಸಹಯೋಗದೊಂದಿಗೆ, NavIC ಸಂದೇಶ ಸೇವೆಯನ್ನು ಒಪ್ಪೋ ಮೊಬೈಲ್ ಹ್ಯಾಂಡ್‌ಸೆಟ್ ಪ್ಲಾಟ್‌ಫಾರ್ಮ್‌ನೊಂದಿಗೆ ಸಂಯೋಜಿಸಲಿದೆ. ಇದರ ಮೂಲಕ ತ್ವರಿತ, ಎಂಡ್ ಟು ಎಂಡ್ ಅಪ್ಲಿಕೇಶನ್-ನಿರ್ದಿಷ್ಟ ಪರಿಹಾರಗಳನ್ನು ನಿರ್ಮಿಸಬಹುದು ಎಂದು ಒಪ್ಪೋ ಹೇಳಿಕೊಂಡಿದೆ. ಆದರೆ ಈ ತಂತ್ರಜ್ಞಾನವು ಭಾರತೀಯ ಬಳಕೆದಾರರಿಗೆ ಹೇಗೆ ಸಹಾಯ ಮಾಡಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಇನ್ನು ಬಹಿರಂಗವಾಗಿಲ್ಲ.

ಇನ್ನು ಇಸ್ರೋ ಪರಿಚಯಿಸಿರುವ NavIC ಅಮೆರಿಕದ GPS ಮಾದರಿಯಲ್ಲಿಯೇ ಕೆಲಸ ನಿರ್ವಹಿಸಲಿದೆ. ಭಾರತದ ಯಾವುದೇ ಭೂಭಾಗದಲ್ಲಿದ್ದರೂ ನ್ಯಾವಿಗೇಶನ್ ಸೇವೆಯನ್ನು ನ್ಯಾವಿಕ್ ಮೂಲಕ ಪಡೆದುಕೊಳ್ಳಬಹುದಾಗಿದೆ. ವ್ಯವಸ್ಥೆಗೆ ಸಮಾನವಾಗಿ ಕೆಲಸ ಮಾಡಲಿದೆ. ಸದ್ಯ ನ್ಯಾವಿಕ್ ವ್ಯವಸ್ಥೆಯು ಭಾರತೀಯ ಮುಖ್ಯ ಭೂಭಾಗವನ್ನು ಒಳಗೊಂಡ ಪ್ರಾದೇಶಿಕ ನ್ಯಾವಿಗೇಷನ್ ಸೇವೆಗಳನ್ನು ಒದಗಿಸುತ್ತದೆ. ಇದು ಭಾರತದ ಮುಖ್ಯ ಭೂಭಾಗದ ಆಚೆಗೆ 1500 ಕಿ.ಮೀ.ವರೆಗಿನ ಪ್ರದೇಶವನ್ನು ಸಹ ಒಳಗೊಂಡಿದೆ. ಲೊಕೇಶನ್ ಸೇವೆಗಳನ್ನು ಹೊರತುಪಡಿಸಿ, ನ್ಯಾವಿಕ್ ತಂತ್ರಜ್ಞಾನವು ಕಿರು ಸಂದೇಶಗಳನ್ನು ಪ್ರಸಾರ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಇದಲ್ಲದೆ ಸಂವಹನ ವ್ಯವಸ್ಥೆಯು ಲಭ್ಯವಿಲ್ಲದ ಪ್ರದೇಶಗಳಲ್ಲಿ ಸುರಕ್ಷತೆಯ-ಜೀವನದ ಎಚ್ಚರಿಕೆಗಳನ್ನು ಪ್ರಸಾರ ಮಾಡಲು ಇದನ್ನು ಮುಖ್ಯವಾಗಿ ಬಳಸಲಾಗುತ್ತದೆ. ಸದ್ಯ ನಾವಿಕ್ ಮೆಸೇಜಿಂಗ್ ಸೇವೆಯನ್ನು ಹೆಚ್ಚಿಸಲು ಒಪ್ಪೋ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಈ ತಂತ್ರಜ್ಞಾನವನ್ನು ಹೇಗೆ ಬಳಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಒಪ್ಪೋ ಕಂಪೆನಿಯ ಫೋನ್‌ಗಳು ಪ್ರಸ್ತುತ GPS ಮತ್ತು Beidou ಗ್ಲೋಬಲ್ ಪೊಸಿಷನಿಂಗ್ ಸೇವೆಗಳನ್ನು ಅವಲಂಬಿಸಿವೆ. ಅದಕ್ಕಾಗಿಯೇ ISRO ಭವಿಷ್ಯದಲ್ಲಿ ತಮ್ಮ ಫೋನ್‌ಗಳಲ್ಲಿ NavIC ನ್ಯಾವಿಗೇಷನ್ ಅನ್ನು ಸೇರಿಸಲು ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿದೆ.

ಪ್ರಸ್ತುತ, ಶಿಯೋಮಿ ಕಂಪೆನಿ ಮಾತ್ರ ತನ್ನ ಫೋನ್‌ಗಳಲ್ಲಿ NavIC ನ್ಯಾವಿಗೇಶನ್ ಬೆಂಬಲವನ್ನು ಬಳಸುತ್ತಿರುವ ಏಕೈಕ ಕಂಪನಿಯಾಗಿದೆ. Redmi Note 9 ಸರಣಿ ಮತ್ತು Redmi Note 10 Lite ಸ್ಮಾರ್ಟ್‌ಫೋನ್‌ಗಳು NavIC ನ್ಯಾವಿಗೇಶನ್ ಅನ್ನು ಬೆಂಬಲಿಸುತ್ತದೆ. ಇನ್ನು ನಾವಿಕ್ ಟೆಕ್ನಾಲಜಿ ಭಾರತದ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ. 5 ಮೀಟರ್ ಸ್ಥಾನದ ನಿಖರತೆ ಹೊಂದಿರುವ ನಾವಿಕ್ ಜಿಪಿಎಸ್‌ಗಿಂತ ಹೆಚ್ಚು ನಿಖರವೆಂದು ಇಸ್ರೋ ಪರಿಗಣಿಸಿದೆ. ನಾವಿಕ್ ಅನ್ನು ಡ್ಯುಯಲ್ ಫ್ರೀಕ್ವೆನ್ಸಿ (ಎಸ್ ಮತ್ತು ಎಲ್ ಬ್ಯಾಂಡ್‌ಗಳು) ನಿಂದ ನಡೆಸಲಾಗುತ್ತದೆ, ಆದರೆ, ಜಿಪಿಎಸ್ ಎಲ್ ಬ್ಯಾಂಡ್‌ನ್ನು ಮಾತ್ರ ಅವಲಂಬಿಸಿತ್ತು. ಆದ್ದರಿಂದ, ನಾವಿಕ್ ಜಿಪಿಎಸ್‌ಗಿಂತ ಹೆಚ್ಚು ನಿಖರವಾಗಿದೆ ಎಂದು ಹೇಳಲಾಗಿದೆ.