ಹೈಲೈಟ್ಸ್:
- ಭಾರತ-ದಕ್ಷಿಣ ಆಫ್ರಿಕಾ ನಡುವಣ 3 ಪಂದ್ಯಗಳ ದ್ವಿಪಕ್ಷೀಯ ಟೆಸ್ಟ್ ಕ್ರಿಕೆಟ್ ಸರಣಿ.
- ದಿ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯ.
- ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಗೆಲಲ್ಲು ಭಾರತಕ್ಕೆ 8 ವಿಕೆಟ್ ಅಗತ್ಯವಿದೆ.
ಬುಧವಾರ ಭಾರತ ನೀಡಿದ್ದ 240 ರನ್ ಗುರಿ ಹಿಂಬಾಲಿಸಿದ್ದ ದಕ್ಷಿಣ ಆಫ್ರಿಕಾ ತಂಡ ಮೂರನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದ್ದು, ಗೆಲುವಿಗೆ ಇನ್ನೂ 122 ರನ್ ಅಗತ್ಯವಿದೆ. ಮತ್ತೊಂದೆಡೆ ಭಾರತ ತಂಡ ಎರಡನೇ ಟೆಸ್ಟ್ ಗೆದ್ದು ಹರಿಣಗಳ ನಾಡಿನಲ್ಲಿ ಐತಿಹಾಸಿಕ ಟೆಸ್ಟ್ ವಿಜಯೋತ್ಸವ ಆಚರಿಸಲು ಇನ್ನು 8 ವಿಕೆಟ್ ಪಡೆಯಬೇಕಾಗಿದೆ.
ಮೂರನೇ ದಿನ ಭಾರತದ ಮಾರಕ ದಾಳಿಯಲ್ಲಿ ಹಲವು ಬಾರಿ ಚೆಂಡಿನಲ್ಲಿ ಪೆಟ್ಟು ತಿಂದರೂ ಎದೆಗುಂದದೆ ಬ್ಯಾಟ್ ಮಾಡಿದ್ದ ಡೀನ್ ಎಲ್ಗರ್ ಅಜೇಯ 46 ರನ್ ಗಳಿಸಿದ್ದು, ಇಂದು ಅದೇ ಆಟವನ್ನು ಮುಂದುವರಿಸುವ ಉದ್ದೇಶದೊಂದಿಗೆ ಕಣಕ್ಕೆ ಇಳಿಯಲಿದ್ದಾರೆ. ಇವರಿಗೆ ಮತ್ತೊಂದು ತುದಿಯಲ್ಲಿ ರಾಸಿ ವ್ಯಾನ್ ಡೆರ್ ಡುಸ್ಸೆನ್(11*) ಸಾಥ್ ನೀಡಲಿದ್ದಾರೆ.
ಭಾರತ Vs ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯದ ಸ್ಕೋರ್‌ಕಾರ್ಡ್
ಭಾರತ ತಂಡ ಎರಡನೇ ಟೆಸ್ಟ್ ಗೆಲ್ಲಬೇಕೆಂದರೆ, ಇಂದು ಮೊದಲನೇ ಸೆಷನ್‌ನಲ್ಲಿ ಇನ್ ಫಾರ್ಮ್ ಡೀನ್ ಎಲ್ಗರ್ ಅವರ ವಿಕೆಟ್ ಪಡೆಯಬೇಕು, ನಂತರ ಮಧ್ಯಮ ಕ್ರಮಾಂಕದಲ್ಲಿ ತೆಂಬಾ ಬವೂಮ ಅವರನ್ನ ಬಹುಬೇಗ ನಿಯಂತ್ರಿಸಬೇಕಾಗುತ್ತದೆ. ಇದು ಸಕಾರವಾದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳನ್ನು ಟೀಮ್ ಇಂಡಿಯಾ ವೇಗಿಗಳು ಸುಲಭವಾಗಿ ಕಟ್ಟಿ ಹಾಕಬಹುದು.
ಹರಿಣಗಳಿಗೆ 240 ರನ್ ಗುರಿ ನೀಡಿದ್ದ ಭಾರತ: ಬುಧವಾರ ಬೆಳಗ್ಗೆ ದಿ ವಾಂಡರರ್ಸ್ ಸ್ಟೇಡಿಯಂನಲ್ಲಿ ಎರಡು ವಿಕೆಟ್ ಕಳೆದುಕೊಂಡು 85 ರನ್‌ಗಳೊಂದಿಗೆ ದ್ವಿತೀಯ ಇನಿಂಗ್ಸ್ ಮುಂದುವರಿಸಿದ್ದ ಭಾರತ ತಂಡ 60.1 ಓವರ್‌ಗಳಿಗೆ266 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಆ ಮೂಲಕ ಎದುರಾಳಿಗೆ 240 ರನ್ ಸವಾಲಿನ ಗುರಿ ನೀಡಿತ್ತು. ಭಾರತದ ಪರ ಚೇತೇಶ್ವರ್ ಪೂಜಾರ (53) ಹಾಗೂ ಅಜಿಂಕ್ಯ ರಹಾನೆ(58) ನಿರ್ಣಾಯಕ ಅರ್ಧಶತಕಗಳನ್ನು ಗಳಿಸಿದ್ದರು. ಇವರ ಜೊತೆಗೆ ಹನುಮ ವಿಹಾರಿ ಅಜೇಯ 40 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು.
ಶಾರ್ದುಲ್ ಮಾರಕ ದಾಳಿಗೆ ಆಫ್ರಿಕಾ 229ಕ್ಕೆ ಆಲ್‌ಔಟ್: ಮಂಗಳವಾರ ಒಂದು ವಿಕೆಟ್ ಕಳೆದುಕೊಂಡು 35 ರನ್‌ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ್ದ ದಕ್ಷಿಣ ಆಫ್ರಿಕಾ ತಂಡ ಶಾರ್ದುಲ್ ಠಾಕೂರ್(61 ಕ್ಕೆ 7) ಮಾರಕ ದಾಳಿಗೆ ನಲುಗಿ 79.4 ಓವರ್‌ಗಳಿಗೆ 229 ರನ್‌ಗಳಿಗೆ ಆಲ್‌ಔಟ್ ಆಯಿತು. ಕೀಗನ್ ಪೀಟರ್ಸನ್ (62), ತೆಂಬಾ ಬವೂಮ(51) ಅರ್ಧಶತಕಗಳನ್ನು ಗಳಿಸಿದ್ದರು. ಆದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಪುಟಿದೇಳುವಲ್ಲಿ ವಿಫಲರಾಗಿದ್ದರು. ಇದರ ಹೊರತಾಗಿಯೂ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ಅಲ್ಪ ಹಿನ್ನಡೆ ಅನುಭವಿಸಿತ್ತು.
202ಕ್ಕೆ ಆಲ್‌ಔಟ್ ಆಗಿದ್ದ ಭಾರತ: ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನತ್ತ ಕಣ್ಣಿಟ್ಟಿರುವ ಟೀಮ್ ಇಂಡಿಯಾ, ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿನ ದಿ ವಾಂಡರರ್ಸ್ ಕ್ರೀಡಾಂಗಣದಲ್ಲಿ ಗೆಲ್ಲುವ ಫೇವರಿಟ್ ತಂಡವಾಗಿ ಕಣಕ್ಕಿಳಿದಿದೆ. ಆದರೆ, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರ ಮಾಡಿ 202ಕ್ಕೆ ಆಲ್‌ಔಟ್ ಆಗಿತ್ತು. ಭಾರತದ ಪರ ಹಂಗಾಮಿ ನಾಯಕ ಕೆ.ಎಲ್ ರಾಹುಲ್ ಅರ್ಧಶತಕ ಹಾಗೂ ಆರ್ ಅಶ್ವಿನ್ ನಿರ್ಣಾಯಕ 46 ರನ್ ಗಳಿಸಿದ್ದರು.
‘ಶೌರ್ಯವಲ್ಲ, ಇದು ಮೂರ್ಖತನ’: ಪಂತ್ ವಿರುದ್ಧ ಗಂಭೀರ್ ಗುಡುಗು!
ಸಂಕ್ಷಿಪ್ತ ಸ್ಕೋರ್(ಮೂರನೇ ದಿನದಾಟದ ಅಂತ್ಯಕ್ಕೆ)
ಭಾರತ: ಪ್ರಥಮ ಇನಿಂಗ್ಸ್ 63.1 ಓವರ್‌ಗಳಿಗೆ 202/10 (ಕೆ.ಎಲ್ ರಾಹುಲ್ 50, ಆರ್ ಅಶ್ವಿನ್ 46, ಮಯಾಂಕ್ ಅಗರ್ವಾಲ್ 26; ಮಾರ್ಕೊ ಯೆನ್ಸನ್ 31 ಕ್ಕೆ 4, ಕಗಿಸೊ ರಬಾಡ 64 ಕ್ಕೆ 3, ಡುವಾನ್ ಓಲಿವಿಯರ್ 64ಕ್ಕೆ 3)
ದಕ್ಷಿಣ ಆಫ್ರಿಕಾ: ಪ್ರಥಮ ಇನಿಂಗ್ಸ್ 79.4 ಓವರ್‌ಗಳಿಗೆ 229/10 (ಕೀಗನ್ ಪೀಟರ್ಸನ್ 62, ಡೀನ್ ಎಲ್ಗರ್ 28, ತೆಂಬ ಬವೂಮ 51; ಮೊಹಮ್ಮದ್ ಶಮಿ 52 ಕ್ಕೆ 2), ಶಾರ್ದುಲ್ ಠಾಕೂರ್ 61 ಕ್ಕೆ 7, ಜಸ್‌ಪ್ರಿತ್ ಬುಮ್ರಾ 49 ಕ್ಕೆ 1)
ಭಾರತ: ದ್ವಿತೀಯ ಇನಿಂಗ್ಸ್ 60.1 ಓವರ್‌ಗಳಿಗೆ 266/10 (ಚೇತೇಶ್ವರ್ ಪೂಜಾರ 53*, ಅಜಿಂಕ್ಯ ರಹಾನೆ 58*, ಹನುಮ ವಿಹಾರಿ 40*; ಕಗಿಸೊ ರಬಾಡ 77ಕ್ಕೆ 3, ಮಾರ್ಕೊ ಯೆನ್ಸನ್ 67ಕ್ಕೆ 3, ಡುವಾನ್ ಓಲಿವಿಯರ್ 51ಕ್ಕೆ 1, ಲುಂಗಿ ಎನ್ಗಿಡಿ 67 ಕ್ಕೆ 3)
ದಕ್ಷಿಣ ಆಫ್ರಿಕಾ: ದ್ವಿತೀಯ ಇನಿಂಗ್ಸ್ 40 ಓವರ್‌ಗಳಿಗೆ 118/2 (ಡೀನ್ ಎಲ್ಗರ್ 46*, ಏಡೆನ್ ಮಾರ್ಕ್ರಮ್ 31, ಕೀಗನ್ ಪೀಟರ್ಸನ್ 28; ಆರ್ ಅಶ್ವಿನ್ 14ಕ್ಕೆ 1, ಶಾರ್ದುಲ್ ಠಾಕೂರ್ 24 ಕ್ಕೆ 1)
ಇತ್ತಂಡಗಳ ಪ್ಲೇಯಿಂಗ್ XI
ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಏಡೆನ್ ಮಾರ್ಕ್ರಮ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ತೆಂಬ ಬವೂಮ, ಕೈಲ್ ವೆರ್ರೆನ್ (ವಿಕೆಟ್‌ಕೀಪರ್), ಮಾರ್ಕೊ ಯೆನ್ಸನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಡುವಾನ್ ಓಲಿವಿಯರ್, ಲುಂಗಿ ಎನ್ಗಿಡಿ.
ಟೀಮ್ ಇಂಡಿಯಾ: ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್‌ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದುಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
Read more
[wpas_products keywords=”deal of the day gym”]