Karnataka news paper

ಹೊತ್ತಿ ಉರಿದ ಅಪಾರ್ಟ್‌ಮೆಂಟ್: ಏಳು ಮಕ್ಕಳು ಸೇರಿ 13 ಮಂದಿ ಸಾವು


ಹೈಲೈಟ್ಸ್‌:

  • ಅಮೆರಿಕದ ಫಿಲಡೆಲ್ಫಿಯಾದಲ್ಲಿ ಬುಧವಾರ ಮುಂಜಾನೆ ಅಗ್ನ ದುರಂತ
  • ಒಂದೇ ಮನೆಯನ್ನು ಎರಡು ಅಪಾರ್ಟ್‌ಮೆಂಟ್‌ಗಳಾಗಿ ವಿಂಗಡಿಸಲಾಗಿತ್ತು
  • ಬೆಂಕಿಯ ಕೆನ್ನಾಲಿಗೆಗೆ ಕನಿಷ್ಠ 13 ಮಂದಿ ಸಾವು, ಇವರಲ್ಲಿ ಏಳು ಮಕ್ಕಳು

ನ್ಯೂಯಾರ್ಕ್: ಅಮೆರಿಕದ ಫಿಲಡೆಲ್ಫಿಯಾದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಇದರಲ್ಲಿ ಏಳು ಮಕ್ಕಳು ಸೇರಿದ್ದಾರೆ. 26 ಮಂದಿ ವಾಸಿಸುತ್ತಿದ್ದ ಎರಡು ಘಟಕದ ಮನೆಯನ್ನು ಬೆಂಕಿ ಸಂಪೂರ್ಣವಾಗಿ ಆವರಿಸಿದೆ. ಹೀಗಾಗಿ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ನಸುಕಿನಲ್ಲಿ ಫಿಲಡೆಲ್ಫಿಯಾ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕಟ್ಟಡದಲ್ಲಿನ ನಾಲ್ಕೂ ಹೊಗೆ ಪತ್ತೆ ಸಾಧನಗಳು ಬೆಂಕಿಯನ್ನು ಗುರುತಿಸಿ ಎಚ್ಚರಿಕೆ ಮೊಳಗಿಸುವಲ್ಲಿ ವಿಫಲವಾಗಿವೆ. ಬೆಳಗಿನ ಜಾವ 6.30ರ ಸಮಯಕ್ಕೆ ಬೆಂಕಿ ಕಾಣಿಸಿಕೊಂಡಿದೆ. 6.40ರ ವೇಳೆಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕೂಡಲೇ ಕಾರ್ಯಪ್ರವೃತ್ತರಾದರು.
South Africa Parliament: ಅಗ್ನಿ ಅನಾಹುತಕ್ಕೆ ದಕ್ಷಿಣ ಆಫ್ರಿಕಾದ ಪುರಾತನ ಸಂಸತ್ ಭವನ ಭಸ್ಮ
ನಗರದ ಫೈರ್‌ಮೌಂಟ್‌ನಲ್ಲಿ ಇರುವ ಮೂರು ಮಹಡಿ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಸುಮಾರು 50 ನಿಮಿಷ ನಿರಂತರವಾಗಿ ಬೆಂಕಿ ಆರಿಸುವ ಪ್ರಯತ್ನ ನಡೆದಿತ್ತು. ಆದರೆ ಬೆಂಕಿಯ ಕೆನ್ನಾಲಿಗೆಗೆ 13 ಮಂದಿ ಬಲಿಯಾಗಿದ್ದಾರೆ. ಮನೆಯ ಎರಡು ದ್ವಾರಗಳಿಂದ ಎಂಟು ಮಂದಿ ಪಾರಾಗುವಲ್ಲಿ ಸಫಲರಾಗಿದ್ದಾರೆ. ಮೃತರಲ್ಲಿ ಏಳು ಮಕ್ಕಳು ಸೇರಿದ್ದಾರೆ ಎಂದು ಫಿಲಡೆಲ್ಫಿಯಾ ಉಪ ಅಗ್ನಿಶಾಮಕ ಆಯುಕ್ತ ಕ್ರೆಗ್ ಮರ್ಫಿ ತಿಳಿಸಿದ್ದಾರೆ.

ಮನೆಯನ್ನು ಎರಡು ಅಪಾರ್ಟ್‌ಮೆಂಟ್‌ಗಳಾಗಿ ವಿಂಗಡಿಸಲಾಗಿತ್ತು. ಮೇಲಿನ ಎರಡು ಮತ್ತು ಮೂರನೇ ಅಪಾರ್ಟ್‌ಮೆಂಟ್‌ನಲ್ಲಿ 18 ಮಂದಿ ಇದ್ದರು. ಕೆಳಗಿನ ಅಪಾರ್ಟ್‌ಮೆಂಟ್‌ನಲ್ಲಿ ಎಂಟು ಮಂದಿ ವಾಸಿಸುತ್ತಿದ್ದರು. ಇವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು. ಎರಡನೇ ಮಹಡಿಯ ಕಿಚನ್ ಭಾಗದ ಕಿಟಕಿಯಿಂದ ಬೆಂಕಿ ಉರಿಯುವುದು ಹೊರಗೆ ಕಾಣಿಸುತ್ತಿತ್ತು. ಅಪಾರ್ಟ್‌ಮೆಂಟ್ ವಿಚಿತ್ರ ವಿನ್ಯಾಸದ ಕಾರಣ ಬೆಂಕಿ ನಂದಿಸುವ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿತ್ತು ಎಂದು ಅವರು ಹೇಳಿದ್ದಾರೆ.



Read more

[wpas_products keywords=”deal of the day sale today offer all”]