Karnataka news paper

ವಾರಾಂತ್ಯ ಕರ್ಫ್ಯೂನಿಂದ ಮಂಕಾಗಲಿದೆ ಸಂಕ್ರಮಣ : ಸುಗ್ಗಿಗೆ ಕೊರೊನಾ ಅಡ್ಡಿ


ಹೈಲೈಟ್ಸ್‌:

  • ವಾರಾಂತ್ಯ ಕರ್ಫ್ಯೂನಿಂದ ಮಂಕಾಗಲಿದೆ ಸಂಕ್ರಮಣ
  • ಶನಿವಾರ ಬರುವುದರಿಂದ ಸುಗ್ಗಿಗೆ ಕೊರೊನಾ ಅಡ್ಡಿ
  • ವಾರಾಂತ್ಯ ಕರ್ಫ್ಯೂನಿಂದ ವ್ಯಾಪಾರಿಗಳಿಗೆ ಸಮಸ್ಯೆ

ಆದರ್ಶ ಕೋಡಿ, ದೊಡ್ಡಬಳ್ಳಾಪುರ

ವರ್ಷಾರಂಭದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಗೆ ಕೆಲದಿನಗಳು ಬಾಕಿಯುಳಿದಿದೆ. ಜ. 15 ರಂದು ರಾಜ್ಯದಾದ್ಯಂತ ಮಕರ ಸಂಕ್ರಮಣವನ್ನು ಪ್ರತಿ ವರ್ಷ ಆಚರಿಸುತ್ತಾರೆ. ಆದರೆ ಈ ಬಾರಿಯ ಹಬ್ಬದ ಸಂಭ್ರಮಕ್ಕೆ ಕೊರೊನಾ ಛಾಯೆ ಆವರಿಸಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಸರಕಾರ ನೈಟ್‌ ಕರ್ಫ್ಯೂ ಜತೆಗೆ ವೀಕೆಂಡ್‌ ಕರ್ಫ್ಯೂ ಮೊರೆಹೋಗಿದೆ. ಜತೆಗೆ ನಿರ್ಬಂಧಗಳನ್ನು ಹೇರಿದೆ. ಇನ್ನೂ ಈ ಬಾರಿ ಸಂಕ್ರಾಂತಿ ಶನಿವಾರ ಬರಲಿದ್ದು ಹಬ್ಬ ಬಹುತೇಕ ಕಳೆಗುಂದಲಿದೆ.

ಕರ್ಫ್ಯೂ ಎಫೆಕ್ಟ್!
ಕೊರೊನಾ ನಿಯಂತ್ರಿಸಲು ಸರಕಾರ ಬಿಗಿ ಕ್ರಮಕ್ಕೆ ಮುಂದಾಗಿದೆ. ರಾಜ್ಯದಾದ್ಯಂತ 2 ವಾರಗಳ ಕಾಲ ನೈಟ್‌ ಕರ್ಫ್ಯೂ ಜತೆಗೆ ವೀಕೆಂಡ್‌ ಕರ್ಫ್ಯೂ ವಿಧಿಸಿದೆ. ಇದರಿಂದ ಆ ಸಮಯದಲ್ಲಿ ಅಗತ್ಯವಸ್ತುಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಶನಿವಾರದಂದು ಬರುವ ಸಂಕ್ರಾಂತಿ ಕೂಡ ಮಂಕಾಗುವ ಸಾಧ್ಯತೆ ಹೆಚ್ಚಾಗಿದೆ.

ಗ್ರಾಮೀಣದಲ್ಲಿ ಸಂಕ್ರಾಂತಿ ಜೋರು

ಸುಗ್ಗಿ ಹಬ್ಬವು ಗ್ರಾಮೀಣ ಭಾಗದ ಸಂಸ್ಕೃತಿಯ ಹಬ್ಬ. ತಾವು ಬೆಳೆದ ಧಾನ್ಯಗಳನ್ನು ಕಣ ಮಾಡಿ ಅದನ್ನು ಪೂಜಿಸಿ ಎಳ್ಳು ಬೆಲ್ಲ ಹಚ್ಚುವುದೇ ಹಬ್ಬದ ಗಮ್ಮತ್ತು. ಇನ್ನೂ ಕೆಲವೆಡೆ ಸಂಕ್ರಾಂತಿ ದಿನದಂದು ಎತ್ತುಗಳನ್ನು ಬೆಂಕಿಗೆ ಹಾಯಿಸುವ ಪದ್ಧತಿಗಳನ್ನು ಆಚರಿಸುತ್ತಾರೆ. ಈ ಬಾರಿ ಕೊರೊನಾ ಆತಂಕ ಹೆಚ್ಚಿರುವ ಹಿನ್ನೆಲೆ ಹಬ್ಬದ ಸಂಭ್ರಮಕ್ಕೆ ಬ್ರೇಕ್‌ ಬೀಳುವ ಸಂಭವವಿದೆ.

ಕರ್ನಾಟಕದಾದ್ಯಂತ ವೀಕೆಂಡ್‌ ಕರ್ಫ್ಯೂ ಫುಲ್ ಟೈಟ್..! ಬಸ್‌, ಮೆಟ್ರೋ ಸಂಚಾರ ವಿರಳ..!

ಏರುಗತಿಯಲ್ಲಿ ಕೊರೊನಾ!
ಬೆಂಗಳೂರಿನ ಗಡಿ ಭಾಗದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೊನಾ ಆತಂಕ ಮನೆಮಾಡಿದೆ. 1,2 ರಂತೆ ಬರುತ್ತಿದ್ದ ಸೋಂಕಿತರ ಸಂಖ್ಯೆ ಇದೀಗ ಎರಡಂಕಿಗೆ ಏರಿಕೆಯಾಗಿದೆ. ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬರುವ ಪ್ರಯಾಣಿಕರಲ್ಲಿ 10 ರ ಒಳಗೆ ಸೋಂಕು ಕಂಡುಬರುತ್ತಿತ್ತು. ಆದರೆ ಇದೀಗ 20ರ ಗಡಿ ದಾಟುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತ ಆತಂಕ ಹೆಚ್ಚಿದ್ದು ಸಂಕ್ರಮಣ ಸರಳವಾಗಿ ಆಚರಿಸುವ ಪರಿಸ್ಥಿತಿ ಎದುರಾಗಲಿದೆ.

ಅವರೆ ಬೆಳೆ ಕುಸಿತ!
ಬಯಲುಸೀಮೆಯ ಜಿಲ್ಲೆಯಲ್ಲಿ ಡಿಸೆಂಬರ್‌ ನಿಂದ ಮಾರ್ಚ್ ವರೆಗೆ ಹೆಚ್ಚಾಗಿ ಅವರೆ ಘಮ ಕಾಣಬಹುದಾಗಿದೆ. ಆದರೆ ಈ ಬಾರಿಯ ಸುರಿದ ಬಾರಿ ಮಳೆಯಿಂದ ಹೊಲಗಳಲ್ಲಿ ಹೆಚ್ಚಿನ ತೇವಾಂಶ ಉಳಿದಿದೆ. ಇದರಿಂದ ಅವರೆ ಬೆಳೆಯ ಪ್ರಮಾಣ ಕುಸಿತ ಕಂಡಿದೆ. ರೈತರು ಅವರೆ ಬೆಳೆಯಲು ಹೆಚ್ಚಾಗಿ ಮುಂದಾಗಿಲ್ಲ. ಮಾರುಕಟ್ಟೆಯಲ್ಲಿ ಅವರೆ ಕಾಣುತ್ತಿಲ್ಲ. ಸಂಕ್ರಾಂತಿ ಹಬ್ಬದ ವಿಶೇಷವಾದ ಕಬ್ಬು , ಗೆಣಸಿಗೂ ಕೂಡ ಬೇಡಿಕೆಯ ಕುಸಿತ ಕಾಣುವ ಸಂಭವವಿದೆ.

ದೇವಾಲಯಗಳಲ್ಲೂ ನಿರ್ಬಂಧ!

ಹಬ್ಬದ ಸಂದರ್ಭದಲ್ಲಿ ದೇವಾಲಯಗಳಿಗೆ ನಾನಾ ಭಾಗಗಳಿಂದ ಭಕ್ತರು ಹೆಚ್ಚಾಗಿ ತೆರಳುತ್ತಾರೆ. ಇದರಿಂದ ಕೊರೊನಾ ಹೆಚ್ಚುವ ಸಂಭವವಿದೆ. ಇದರಿಂದ ದೇವಾಲಯಗಳಿಗೆ ನಿರ್ಬಂಧಗಳನ್ನು ಹೇರಲಾಗಿದೆ. ಇದರನ್ವಯ ಜಿಲ್ಲೆಯ ಪ್ರಸಿದ್ಧ ಘಾಟಿ ಜಾತ್ರೆಯನ್ನು ರದ್ದುಮಾಡಲಾಗಿದೆ. ಇದರಿಂದ ಹಬ್ಬದ ಸಮಯದಲ್ಲಿ ದೇವಾಲಯಗಳಲ್ಲೂ ಹೆಚ್ಚಿನ ಕ್ರಮವಹಿಸಲಾಗುತ್ತಿದೆ.

ವಾರಾಂತ್ಯ ಕರ್ಫ್ಯೂ, ಕಠಿಣ ನಿರ್ಬಂಧ; ಜನಸಾಮಾನ್ಯರ ವಲಯದಿಂದ ವ್ಯಕ್ತವಾಗುತ್ತಿದೆ ವಿರೋಧ

ಜಿಲ್ಲೆಯಲ್ಲಿಮಳೆ ಹೆಚ್ಚಿದ್ದ ಪರಿಣಾಮ ತೇವಾಂಶದಿಂದ ಅವರೆ ಬೆಳೆಯಲು ಸಮಸ್ಯೆಯಾಗಿದೆ. ಇದರಿಂದ ಈ ಬಾರಿ ಅವರೆ ಕಡಿಮೆ ಪೂಧಿರೈಕೆಯಾಗುವ ಸಂಭವವಿದೆ.

– ಕೃಷ್ಣಪ್ಪ | ರೈತ

ಕೊರೊನಾದಿಂದ ಮತ್ತೆ ಆತಂಕದಲ್ಲಿ ಬದುಕುವಂತಾಗಿದೆ. ಇದರಿಂದ ಹಬ್ಬದ ವ್ಯಾಪಾರ ಕೂಡ ಅನುಮಾನ.

– ಅನಿಲ್‌ | ದಿನಸಿ ಅಂಗಡಿ ಮಾಲೀಕ



Read more

[wpas_products keywords=”deal of the day sale today offer all”]