Karnataka news paper

ಲಕ್ಷದ ಸಮೀಪ ದೈನಂದಿನ ಕೋವಿಡ್ ಪ್ರಕರಣ: ಒಂದೇ ದಿನ 90,000 ಜನರಿಗೆ ಸೋಂಕು


ಹೈಲೈಟ್ಸ್‌:

  • ಭಾರತದಲ್ಲಿ 90,928 ಹೊಸ ಕೋವಿಡ್ ಪ್ರಕರಣಗಳು ವರದಿ
  • 325 ಸೋಂಕಿತರ ಸಾವು, ಸಾವಿನ ಸಂಖ್ಯೆ 4,82,876ಕ್ಕೆ ಏರಿಕೆ
  • 19,206 ಸೋಂಕಿತರು ಬಿಡುಗಡೆ, ಪಾಸಿಟಿವಿಟಿ ದರ ಶೇ 6.43
  • ಮಹಾರಾಷ್ಟ್ರ 26,538, ಬಂಗಾಳದಲ್ಲಿ 14,022 ಪ್ರಕರಣ ಪತ್ತೆ

ಹೊಸದಿಲ್ಲಿ: ಭಾರತದ ಕೊರೊನಾ ವೈರಸ್ ಪ್ರಕರಣಗಳಲ್ಲಿ ಮತ್ತೊಂದು ಭಾರಿ ಜಿಗಿತ ಉಂಟಾಗಿದೆ. ಬುಧವಾರದಂತೆಯೇ ಕಳೆದ 24 ಗಂಟೆಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತೆ ಶೇ 56ರಷ್ಟು ಏರಿಕೆಯಾಗಿದೆ. ಎರಡನೇ ಅಲೆಯಲ್ಲಿ ಪ್ರತಿ ದಿನ ಲಕ್ಷ ಲಕ್ಷ ಪ್ರಕರಣಗಳು ದಾಖಲಾಗುತ್ತಿದ್ದವು. ನಾಲ್ಕು ಲಕ್ಷದವರೆಗೂ ದೈನಂದಿ ಕೋವಿಡ್ 19 ಪ್ರಕರಣಗಳು ವರದಿಯಾಗಿದ್ದವು. ಈಗ ಸೋಂಕಿನ ಹರಡುವಿಕೆ ವೇಗ ನೋಡಿದರೆ ಅದನ್ನೂ ಮೀರಿಸುವ ಅಪಾಯದ ಸೂಚನೆ ಕಾಣಿಸುತ್ತಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 90,928 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಬುಧವಾರ 58,097 ಮಂದಿ ಸೋಂಕಿತರು ಪತ್ತೆಯಾಗಿದ್ದರು. ಹಾಗೆಯೇ ಕಳೆದ 24 ಗಂಟೆಗಳಲ್ಲಿ 325 ಸೋಂಕಿತರು ಮರಣ ಹೊಂದಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4,82,876ಕ್ಕೆ ಏರಿಕೆಯಾಗಿದೆ. ಹೊಸ ಪ್ರಕರಣಗಳೊಂದಿಗೆ ದೇಶದ ಒಟ್ಟು ಸಕ್ರಿಯ ಪ್ರಕರಣಗಳು 2,85,401ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಶೇಕಡಾವಾರು 0.81ರಷ್ಟಿದೆ.
ಕರ್ನಾಟಕದಲ್ಲಿ ಬುಧವಾರ 4,246 ಕೊರೊನಾ ಹೊಸ ಕೇಸ್..! ಬೆಂಗಳೂರಲ್ಲೇ 3,605 ಪ್ರಕರಣ..!
ದೈನಂದಿನ ಪಾಸಿಟಿವಿಟಿ ದರ ಶೇ 6.43ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ 3.47ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 19,206 ಮಂದಿ ಸೋಂಕಿತರು ಬಿಡುಗಡೆಯಾಗಿದ್ದಾರೆ. ಇದುವರೆಗೂ 3,43,41,009 ಸೋಂಕಿತರು ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ 97.81ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಗುರುವಾರ ಬೆಳಿಗ್ಗೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

ಮಹಾರಾಷ್ಟ್ರದಲ್ಲಿ 26,538 ಪ್ರಕರಣ ವರದಿಯಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ 14,022 ಸೋಂಕಿತರು ಪತ್ತೆಯಾಗಿದ್ದಾರೆ. ರಾಜಧಾನಿ ದಿಲ್ಲಿಯಲ್ಲಿ ಒಂದೇ ದಿನದಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಳೆದ 24 ಗಂಟೆಗಳಲ್ಲಿ 5,481 ರಿಂದ 10,665ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕೂಡ ಕೋವಿಡ್ ಪ್ರಕರಣಗಳು ಎರಡು ಪಟ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ ಬುಧವಾರ 4,246 ಸೋಂಕಿತರು ಪತ್ತೆಯಾಗಿದ್ದು, ಅದರಲ್ಲಿ ಬೆಂಗಳೂರು ಒಂದರಲ್ಲೇ 3,605 ಮಂದಿಗೆ ಸೋಂಕು ತಗುಲಿದೆ. ಕರ್ನಾಟಕ ರಾಜ್ಯದಲ್ಲಿ ಈವರೆಗೆ ದೃಢಪಟ್ಟ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 30,17,572 ಕ್ಕೆ ಏರಿಕೆ ಕಂಡಿದೆ.
Omicron Death: ಭಾರತದ ಮೊದಲ ಓಮಿಕ್ರಾನ್ ಸಾವು ರಾಜಸ್ಥಾನದಲ್ಲಿ ದಾಖಲು
ಓಮಿಕ್ರಾನ್ ಪ್ರಕರಣಗಳಲ್ಲಿ ಹೆಚ್ಚಳ
ದೇಶದಲ್ಲಿ ಗುರುವಾರ 495 ಓಮಿಕ್ರಾನ್ ಪ್ರಕರಣಗಳು ಖಚಿತವಾಗಿವೆ. ಇದು ಒಂದು ದಿನದಲ್ಲಿ ಪತ್ತೆಯಾದ ಅತ್ಯಧಿಕ ಸಂಖ್ಯೆಯಾಗಿದೆ. ಇದರಿಂದ ಒಟ್ಟು ಪ್ರಕರಣಗಳು 2,630ಕ್ಕೆ ತಲುಪಿದೆ. ಒಟ್ಟು ಓಮಿಕ್ರಾನ್ ಕೇಸ್‌ಗಳಲ್ಲಿ ಮಹಾರಾಷ್ಟ್ರದಲ್ಲಿ 797, ದಿಲ್ಲಿ 465, ರಾಜಸ್ಥಾನ 236, ಕೇರಳ 234, ಕರ್ನಾಟಕ 226, ಗುಜರಾತ್ 204 ಮತ್ತು ತಮಿಳುನಾಡು 121 ಪ್ರಕರಣಗಳನ್ನು ಹೊಂದಿವೆ. 995 ಓಮಿಕ್ರಾನ್ ಸೋಂಕಿತರು ಗುಣಮುಖರಾಗಿದ್ದಾರೆ. ದೇಶದ ಮೊದಲ ಓಮಿಕ್ರಾನ್ ಮರಣ ರಾಜಸ್ಥಾನದಲ್ಲಿ ವರದಿಯಾಗಿದೆ. ಕರ್ನಾಟಕ, ದಿಲ್ಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ, 50-50ರ ಮಿತಿ ಮುಂತಾದ ನಿರ್ಬಂಧಗಳನ್ನು ಮರಳಿ ಜಾರಿಗೆ ತರಲಾಗಿದೆ.



Read more

[wpas_products keywords=”deal of the day sale today offer all”]