Karnataka news paper

ಸೂರತ್‌ನಲ್ಲಿ ಟ್ಯಾಂಕರ್​ನಿಂದ ವಿಷಾನಿಲ ಸೋರಿಕೆ: ಐವರ ಸಾವು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ


ಹೈಲೈಟ್ಸ್‌:

  • ಸೂರತ್‌ನಲ್ಲಿ ಟ್ಯಾಂಕರ್ನಿಂದ ವಿಷಾನಿಲ ಸೋರಿಕೆ
  • ಐವರ ಸಾವು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ
  • ಸ್ಥಳಕ್ಕೆ ಪೊಲೀಸರ ಭೇಟಿ, ತನಿಖೆ ಆರಂಭ

ಸೂರತ್: ಗುಜರಾತ್‌ನ ಸೂರತ್‌ನಲ್ಲಿ ರಾಸಾಯನಿಕ ಸೋರಿಕೆಯಿಂದ ಭಾರೀ ಅವಘಡ ಸಂಭವಿಸಿದೆ. ಸೂರತ್‌ನ ಕೈಗಾರಿಕ ಪ್ರದೇಶವಾದ ಸಚಿನ್ ಜಿಐಡಿಸಿನ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಾಸಾಯನಿಕ ಟ್ಯಾಂಕರ್ ನಿಂದ ಅನಿಲ್ ಸೋರಿಕೆಗೊಂಡ ಪರಿಣಾಮ ಐವರು ಉಸಿರುಗಟ್ಟಿ
ಸಾವನಪ್ಪಿದ್ದಾರೆ. ಅಲ್ಲದೆ 20 ಮಂದಿ ವಿಷಾನಿಲ ಸೇವನೆಯಿಂದ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಸೂರತ್ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ನಡೆದಿದ್ದು ಹೇಗೆ?
ಜೆರಿ ಎಂಬ ಹೆಸರಿನ ರಾಸಾಯನಿಕ ಟ್ಯಾಂಕರೊಂದು ಅಹಮದಾಬಾದ್ ನಿಂದ ಸೂರತ್ ಗೆ ಬಂದಿತ್ತು. ಈ ವೇಳೆ ಟ್ಯಾಂಕರ್ ಚಾಲಕ ಅಕ್ರಮವಾಗಿ ಟ್ಯಾಂಕರ್ ನ ತ್ಯಾಜ್ಯವನ್ನು ಅಲ್ಲಿನ ಡ್ರೈನೇಜ್ ಗೆ ಹೊರಹಾಕುತ್ತಿದ್ದನು. ಈ ವೇಳೆ ಏಕಾಏಕಿ ಟ್ಯಾಂಕ್ ನಿಂದ ರಾಸಾಯನಿಕ ಹೊರಸೂಸಲ್ಪಟ್ಟಿದೆ. ಗಾಳಿಯಲ್ಲಿ ರಾಸಾಯನಿಕ ತೇಲಾಡುತ್ತಿದ್ದಂತೆ ಅಲ್ಲೇ ಪಕ್ಕದಲ್ಲಿದ್ದ ಕಾರ್ಮಿಕರು ಇದನ್ನ ಸೇವಿಸಿದ ಪರಿಣಾಮ ಅಲ್ಲೇ ಅವರು ಕುಸಿದುಬಿದ್ದಿದ್ದಾರೆ.

ಇನ್ನು ವಿಷಾನಿಲ ಸೇವನೆಯಿಂದ ಐವರು ಸ್ಥಳದಲ್ಲೇ ಉಸಿರುಗಟ್ಟಿ ಸಾವನಪ್ಪಿದ್ದಾರೆ. ಇಪ್ಪತ್ತು ಮಂದಿ ಅಸ್ವಸ್ಥಗೊಂಡಿದ್ದು. ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಸುಮಾರು ಬೆಳಗಿನ ಜಾವ 4 ಗಂಟೆಗೆ ನಡೆದಿದೆ ಎಂದು ವರದಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳದವರು ಹಾಗೂ ಪೊಲೀಸರು ಆಗಮಿಸಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಘಟನೆ ವೇಳೆ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕೇಸು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ವಿಶಾಖಪಟ್ಟಣಂನಲ್ಲಿ ಮತ್ತೊಂದು ಅನಿಲ ದುರಂತ: ಔಷಧೀಯ ಘಟಕದಲ್ಲಿ ಸೋರಿಕೆಯಾದ ವಿಷಾನಿಲ!



Read more

[wpas_products keywords=”deal of the day sale today offer all”]